Karnataka news paper

ರಂಗದ ಮೇಲೆ ಬರಲಿದೆ ಡಾ. ಅಕ್ಕಯ್ ಪದ್ಮಶಾಲಿ ಬದುಕು! ಫೆಬ್ರವರಿಯಲ್ಲಿ ಮೊದಲ ಪ್ರದರ್ಶನ


Online Desk

ಬೆಂಗಳೂರು: ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಡಾ. ಅಕ್ಕಯ್ ಪದ್ಮಶಾಲಿ ಜೀವನ ಪ್ರೀತಿ ಕುರಿತು ಪ್ರೇರಣಾತ್ಮಕವಾಗಿರುವ ಅವರ ಆತ್ಮಕಥನ ‘ಅಕ್ಕಯ್’ ನಾಟವಾಗುತ್ತಿದೆ. 

ತಾನೊಬ್ಬಳು ಹೆಣ್ಣು ಎಂದು ಘೋಷಿಸುವ ಮೂಲಕ ವಾಹನ ಚಾಲನ ಪರವಾನಗಿ ಪತ್ರವನ್ನು ಪಡೆದುಕೊಂಡ ದೇಶದ ಏಕೈಕ ವ್ಯಕ್ತಿಯಾಗಿರುವ ವಾಸು ಎನ್ನುವ ತೃತೀಯ ಲಿಂಗಿಯೊಬ್ಬರಿಗೆ ಕರ್ನಾಟಕದಲ್ಲಿ ವಿವಾಹ ನೋಂದಣಿ ಮೂಲಕ ಮದುವೆಯಾದ ಮೊದಲ ಮಹಿಳೆಯೂ ಆಗಿರುವ ಅಕ್ಕಯ್ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಕ್ಕಾಗಿ ಅವರು ‘ಒಂದೆಡೆ’ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದಾರೆ. 

ಅಕ್ಕಯ್ ಬದುಕನ್ನು ನಾಟಕ ರೂಪದಲ್ಲಿ ತೆರೆದಿಡುತ್ತಿದ್ದಾರೆ ಸಾಹಿತಿ ಬೇಳೂರು ರಘುನಂದನ್. ಕಾಜಾಣ ಮತ್ತು ಸಾತ್ವಿಕ ರಂಗ ಪಯಣ ತಂಡದಿಂದ 15 ಮಂದಿಗಳ ತಂಡ ಕೆಲಸ ಮಾಡಿದ್ದು, ಕೃಷ್ಣಮೂರ್ತಿ ಕವತ್ತಾರ್ ನಾಟಕ ರಚಿಸುತ್ತಿದ್ದಾರೆ.

ಅಕ್ಕಯ್ ಏಕ ವ್ಯಕ್ತಿ ನಾಟಕವಾಗಿದ್ದು, ರಂಗಕರ್ಮಿ ನಯನಾ ಸೂಡ ಅಕ್ಕಯ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಸಾತ್ವಿಕ ರಂಗಪಯಣ ತಂಡದಿಂದ ಅಕ್ಕಯ್ ನಾಟಕದ ಫೋಸ್ಟರ್ ಬಿಡುಗಡೆಗೊಂಡಿದ್ದು, ಖುದ್ದು ಅಕ್ಕಯ್ ಪದ್ಮಶಾಲಿ, ಬೇಳೂರು ರಘುನಂದನ್ ಮತ್ತಿತರ ರಂಗಕರ್ಮಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. 

ಅಕ್ಕಯ್ ಪದ್ಮಶಾಲಿ ಅವರಿಗೆ ಲಿಂಗ ಸಮಾನತೆ, ಹೋರಾಟಗಳಿಗಾಗಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಶಾಂತಿ ಹಾಗೂ ಶಿಕ್ಷಣಕ್ಕಾಗಿ ಇಂಡಿಯನ್ ವರ್ಚುಯಲ್ ಯೂನಿವರ್ಸಿಟಿ ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಇನ್ನು ಅಕ್ಕಯ್ ಪದ್ಮಶಾಲಿ ಅವರ ಆತ್ಮಕಥನವನ್ನು ಲೇಖಕ ಡಾ. ಡಿ. ಡೊಮಿನಿಕ್ ನಿರೂಪಿಸಿದ್ದಾರೆ. 

ಲೈಂಗಿಕ ಅಲ್ಪಸಂಖ್ಯಾತರ ನೋವನ್ನು ಸ್ವತ: ಅನುಭವಿಸಿರುವ ಅಕ್ಕಯ್ ಪದ್ಮಶಾಲಿ, ತಮ್ಮ ಬಾಲ್ಯದ ದಿನಗಳಿಂದ ಹಿಡಿದು ಹೋರಾಟದ ಪ್ರತಿ ಹಂತದಲ್ಲೂ ಸಮಾಜದ ವಿವಿಧೆಡೆಯಿಂದ ಬಂದ ಎಲ್ಲ ಬಗೆಯ ಅಪಮಾನ, ಹೀನಾಯ ಆರೋಪಗಳನ್ನು ಎದುರಿಸಿದ ಬಗೆಯನ್ನು ವಿವರಿಸಿದ್ದಾರೆ.

ಅಕ್ಕಯ್ ಆತ್ಮಕಥನ ಬದುಕಿನ ಸ್ಪೂರ್ತಿಯೇ ನಾಟಕ ರಚನೆಗೆ ಕಾರಣ ಎಂದು ಬೇಳೂರು ರಘನಂದನ್ ಹೇಳಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ ಬದುಕು, ಹೋರಾಟದ ಹಾದಿ ಆತ್ಮಕಥನದಲ್ಲಿ ಅಕ್ಷರವಾಗಿದ್ದರೆ ಅಕ್ಕಯ್ ನಾಟಕ ಬಣ್ಣ ತುಂಬಿ ಭಾವ ಮೂಡಿಸಲಿದೆ. ಫೆಬ್ರವರಿಯಲ್ಲಿ ಮೊದಲ ಪ್ರದರ್ಶನ ಕಾಣಲಿದ್ದಾಳೆ ಅಕ್ಕಯ್ . 



Read more

[wpas_products keywords=”deal of the day”]