The New Indian Express
ನವದೆಹಲಿ:ನಕಲಿ ಟೆಲಿಗ್ರಾಮ್ ಅಪ್ಲಿಕೇಷನ್ ಬಗ್ಗೆ ಎಲ್ಲೆಡೆ ಆತಂಕ ವ್ಯಕ್ತವಾಗುತ್ತಿದೆ. ಕಾರಣ ಈ ನಕಲಿ ಟೆಲಿಗ್ರಾಮ್ ಆಪ್ ನ್ನು ಬಳಕೆ ಮಾಡಿಕೊಂಡು ಪಿ.ಸಿ, ವಿಂಡೋ ಆಧಾರಿತ ಮಾಲ್ವೇರ್ ನ್ನು ಬಳಕೆ ಮಾಡಿ ವೈರಸ್ ನಿರೋಧಕ ವ್ಯವಸ್ಥೆಯನ್ನೂ ಮೀರಿ ಮಹತ್ವದ ಮಾಹಿತಿಗಳನ್ನು ಕಳುವು ಮಾಡುವುದಕ್ಕೆ ದಾರಿ ಮಾಡಿಕೊಡಲಿದೆ.
ಈ ಬಗ್ಗೆ 2014 ರಲ್ಲಿ ಇಸ್ರೇಲಿ ರಕ್ಷಣಾ ಪಡೆಗಳ ಮಾಜಿ ಅಧಿಕಾರಿಗಳು ಸ್ಥಾಪಿಸಿರುವ ಮಿನರ್ವ ಲ್ಯಾಬ್ಸ್ ಸೈಬರ್ ಸಂಶೋಧಕರು ಎಚ್ಚರಿಸಿದ್ದಾರೆ. ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್ ನ ನಕಲಿ ಇನ್ಸ್ಟಾಲರ್ ಗಳನ್ನು ವಿಂಡೋಸ್ ಆಧಾರಿತ ಪರ್ಪಲ್ ಫಾಕ್ಸ್ ರೂಟ್ ಕಿಟ್ ನ್ನು ಬಳಕೆ ಮಾಡಿ ಮಾಹಿತಿ ಕಳುವು ಮಾಡುತ್ತಿದ್ದಾರೆ. ಇದು ಎವಿ ಡಿಟೆಕ್ಷನ್ ನ ಕಣ್ತಪ್ಪಿಸಿ ಕಂಪ್ಯೂಟರ್ ನಲ್ಲಿರುವ ಮಾಹಿತಿಯನ್ನು ಹೆಕ್ಕಿ ತೆಗೆಯಲಿದೆ ಎಂದಿ ಸಂಶೋಧಕರು ಹೇಳಿದ್ದಾರೆ. ಈ ಪರ್ಪಲ್ ಫಾಕ್ಸ್ ನ್ನು 2018 ರಲ್ಲಿ ಮೊದಲ ಬಾರಿಗೆ ಪತ್ತೆ ಮಾಡಲಾಗಿತ್ತು.
Read more
[wpas_products keywords=”deal of the day”]