The New Indian Express
ಬೆಂಗಳೂರು: ಅಶೋಕ್ ನಗರದ ಗರುಡಾ ಮಾಲ್ ಜಂಕ್ಷನ್‌ನಲ್ಲಿ ವೇಗವಾಗಿ ಬಂದ ಟ್ರಕ್ ವೊಂದು ಹಿಂಬದಿಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ಸಾನನ್ನಪ್ಪಿ, ಸೋದರ ಸಂಬಂಧಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಆರ್.ಎಸ್.ಪಾಳ್ಯ ನಿವಾಸಿ ಸಂಜಾ ಪ್ರಿಯಾ (21) ಮೃತ ವಿದ್ಯಾರ್ಥಿನಿಯಾಗಿದ್ದಾರೆ. ದ್ವಿಚಕ್ರ ವಾಹನ ಚಾಲಕ ವಿನಯ್ ಕುಮಾರ್ (24) ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ‘ಬುಲ್ಲಿ ಬಾಯ್’ ಕೇಸಿನಲ್ಲಿ ಬೆಂಗಳೂರಿನ ವಿದ್ಯಾರ್ಥಿಯನ್ನು ಬಂಧಿಸಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ: ಕಮಲ್ ಪಂತ್
ಮೃತಪಟ್ಟಿರುವ ಸಂಜನಾ ತುಮಕೂರಿನ ಖಾಸಗಿ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದರು. ಸೋದರ ಸಂಬಂಧಿ ವಿನಯ್ ಕುಮಾರ್ ಜೊತೆಗೆ ದ್ವಿಚಕ್ರ ವಾಹನದಲ್ಲಿ ಜಯನಗರದ ಸಂಬಂಧಿಕರ ಮನೆಗೆ ತೆರಳುತ್ತಿದ್ದರು.
ಬೆಳಿಗ್ಗೆ ಸುಮಾರು 7ರ ಸುಮಾರಿಗೆ ಗರುಡಾ ಮಾಲ್ ಬಳಿ ಅತಿವೇಗವಾಗಿ ಟ್ರಕ್ ಚಲಾಯಿಸುತ್ತಿದ್ದ ಚಾಲಕ ಬಲಕ್ಕೆ ತಿರುಗಿಸಲು ಮುಂದಾಗಿ ಕೂಡಲೇ ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆ ಪಕ್ಕದಲ್ಲೇ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾಗಿದ್ದು, ದ್ವಿಚಕ್ರ ವಾಹನ ಸವಾರ ನವೀನ್ ಬಲಕ್ಕೆ ಬಿದ್ದಿದ್ದಾರೆ. ಹಿಂಬದಿ ಕುಳಿತಿದ್ದ ಸಂಜನಾ ಪ್ರಿಯಾ ಎಡಕ್ಕೆ ಬಿದ್ದಿದ್ದಾರೆ. ಈ ವೇಳೆ ಟ್ರಕ್ ಹಿಂಬದಿ ಎಡಚಕ್ರ ಆಕೆಯ ತಲೆ ಮೇಲೆ ಹರಿದಿದೆ. ಪರಿಣಾಮ ಸಂಜನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ‘ಬುಲ್ಲಿ ಬಾಯ್’ ಆ್ಯಪ್ ಪ್ರಕರಣ: ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧನ
ಈ ನಡುವೆ ಟ್ರಕ್ ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು, ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಆಶೋಕ ನಗರ ಸಂಚಾರಿ ಪೊಲೀಸರು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
Read more
[wpas_products keywords=”deal of the day”]