Karnataka news paper

ಕೊರೋನಾ 2ನೇ ಅಲೆಗೆ ಹೋಲಿಸಿದರೆ 3ನೇ ಅಲೆ ಅಪಾಯ ಅಲ್ಲ, ಹಾಗೆಂದು ಎಚ್ಚರ ತಪ್ಪುವುದು ಬೇಡ: ಡಾ ಕೆ ಸುಧಾಕರ್


Online Desk

ಬೆಂಗಳೂರು: ಓಮಿಕ್ರಾನ್ ಸೋಂಕು ಕೊರೋನಾ ಮೂರನೇ ಅಲೆ ಬಗ್ಗೆ ಯಾವುದೇ ಆತಂಕ ಬೇಡ. ಎರಡು ಡೋಸ್ ಕೊವಿಡ್ ಲಸಿಕೆ ಪಡೆದರೆ ಪರಿಣಾಮ ಕಡಿಮೆ. ಕೊರೊನಾ ಮೂರನೇ ಅಲೆ ದೀರ್ಘ ಕಾಲ ಇರುವುದಿಲ್ಲ. ಒಮಿಕ್ರಾನ್​ನಿಂದ ಶ್ವಾಸಕೋಶಕ್ಕೆ ತೊಂದರೆಯಾಗಲ್ಲ, ಹಾಗೆಂದು ಎಚ್ಚರ ತಪ್ಪುವುದು ಬೇಡ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅಭಯ ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ರಾಜ್ಯದ ಜನ ಆತಂಕಪಡುವ ಅಗತ್ಯ ಇಲ್ಲ . 2ನೇ ಅಲೆಗೆ ಹೋಲಿಸಿದರೆ 3ನೇ ಅಲೆ ಡೇಂಜರ್ ಅಲ್ಲ. ವೆಂಟಿಲೇಟರ್, ಆಕ್ಸಿಜನ್ ಅವಶ್ಯಕತೆ ಕಡಿಮೆ ಇದೆ , ಪರಿಸ್ಥಿತಿ ಕೈ ಮೀರಿ ಹೋಗಬಾರದು ಎಂದು ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ.ಸರ್ಕಾರ ಹೊರಡಿಸಿರುವ ಟಫ್​ ರೂಲ್ಸ್​ಗೆ ಜನ ಸಹಕರಿಸಬೇಕು ಎಂದು ಕೋರಿಕೊಂಡರು. 

ಓಮಿಕ್ರಾನ್ ಹೆಚ್ಚು ಕಾಲ ಇರುವುದಿಲ್ಲ: ಸರ್ಕಾರ ನಿನ್ನೆ  ಮಾರ್ಗಸೂಚಿ ಬಿಡುಗಡೆ ಮಾಡಿದೆ. ಜನರಿಗೆ ಮನವಿ ಮಾಡುತ್ತೇನೆ. ಈ ಅಲೆ ದೀರ್ಘ ಕಾಲ ಇರುವುದಿಲ್ಲ. ವೇಗವಾಗಿ ಹರಡುತ್ತದೆ ಮತ್ತು ಬೇಗ ಮುಕ್ತಾಯ ಆಗುತ್ತದೆ. ಹೀಗಾಗಿ ಕನಿಷ್ಠ 4-6 ವಾರ ಜನ ಎಚ್ಚರಿಕೆವಹಿಸಬೇಕು. ಕೊರೊನಾ ಬಂದರು ಯಾರು ಆತಂಕ ಪಡುವುದು ಬೇಡ. ಓಮಿಕ್ರಾನ್ ಶ್ವಾಸಕೋಶಕ್ಕೆ ಹೋಗುವುದು ಕಡಿಮೆ. ಗಂಟಲಲ್ಲಿ ಮಾತ್ರ ಇರುತ್ತದೆ. ಹೀಗಾಗಿ ಯಾರು ಆತಂಕ ಪಡಬೇಕಿಲ್ಲ ಅಂತ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವುದಿಲ್ಲ, ನಾವು ಜನರನ್ನು ಉಳಿಸುವ ಕೆಲಸ ಮಾಡುತ್ತೇವೆ: ಸಿದ್ದರಾಮಯ್ಯ

15-18 ವಯಸ್ಸಿನ 3.50 ಲಕ್ಷ ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಮಕ್ಕಳಿಗೆ ಲಸಿಕೆ ಹಾಕುವುದರಲ್ಲಿ ದೇಶದಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಈಗಾಗಲೇ ಶೇ.25ರಷ್ಟು ಮಕ್ಕಳಿಗೆ ಲಸಿಕೆ ನೀಡಿದ್ದೇವೆ. ಮೊದಲ ಡೋಸ್ ಪಡೆದ 28 ದಿನಗಳ ನಂತರ 2ನೇ ಡೋಸ್ ನೀಡಲಾಗುತ್ತದೆ ಎಂದು ತಿಳಿಸಿದರು.

ಸರ್ಕಾರದ ಹೊಸ ನಿಯಮವೇನು?: ಓಮಿಕ್ರಾನ್ ಹಾವಳಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎರಡು ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ಬೆಂಗಳೂರಿಗೆ ಸೀಮಿತವಾದಂತೆ ಶಾಲೆಗಳಿಗೆ ರಜೆ ನೀಡಲಾಗಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಇದನ್ನೂ ಓದಿ: ‘ಇದು ಕೊರೋನಾ ಲಾಕ್ ಡೌನ್ ಅಲ್ಲ, ಬಿಜೆಪಿಯ ಲಾಕ್ ಡೌನ್, ನಮ್ಮದು ನೀರಿಗೋಸ್ಕರ ನಡಿಗೆ’: ಡಿ ಕೆ ಶಿವಕುಮಾರ್

ವಿದೇಶದಿಂದ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ ಒಂದು ವೇಳೆ ಪ್ರಯಾಣಿಕರಲ್ಲಿ ಓಮಿಕ್ರಾನ್ ಸೋಂಕು ಕಂಡುಬಂದರೆ ಅವರಿಗೆ ಸ್ಟಾರ್ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುತ್ತದೆ.ಇನ್ನು ರಾಜ್ಯದಲ್ಲಿರುವ ಸಿನಿಮಾ ಮಂದಿರ, ಮಾಲ್ ಹಾಗೂ ಪಬ್‌ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮದುವೆ ಸಮಾರಂಭಗಳು ಹೊರಾಂಗಣದಲ್ಲಿದ್ದರೆ 200 ಜನ ಹಾಗೂ ಒಳಾಂಗಣದಲ್ಲಿದ್ದರೆ 100 ಜನಕ್ಕೆ ಅನುಮತಿ ಕಲ್ಪಿಸಲಾಗಿದೆ ಎಂದರು.

ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಮರುಚಿಂತನೆ ಮಾಡಲಿ: ಜನರು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಸಹಕಾರ ಮುಖ್ಯ. ಆರೋಗ್ಯದ ತುರ್ತು ಪರಿಸ್ಥಿತಿ ಇರುವುದರಿಂದ ಜನರು, ರಾಜಕೀಯ ಪಕ್ಷಗಳು ಸಹಕಾರ ಕೊಡಬೇಕು. ಕಾಂಗ್ರೆಸ್​ಗೆ ಜನರ ಹಿತ ಕಾಪಾಡುವ ಮನಸ್ಸು ಇದೆ ಅಂತ ಭಾವಿಸುತ್ತೇನೆ. ಹೀಗಾಗಿ ಪಾದಯಾತ್ರೆ ಮಾಡಬೇಕಾ ಅಂತ ಯೋಚನೆ ಮಾಡಲಿ.

ಮಹಾರಾಷ್ಟ್ರ ಸೇರಿದಂತೆ ಅನೇಕ ಕಡೆ ಕೊರೋನಾ ಸೋಂಕು ಹೆಚ್ಚಾಗಿದೆ. ಕಾಂಗ್ರೆಸ್ ನವರು ಅನೇಕ ವರ್ಷ ಅವರು ಅಧಿಕಾರ ನಡೆಸಿದ್ದಾರೆ. ಇಂತಹ ಸಮಯದಲ್ಲಿ ಹೇಗೆ ನಡೆದುಕೊಳ್ಳಬೇಕು ಅಂತ ಅವರು ಅರ್ಥ ಮಾಡಕೊಳ್ಳಬೇಕು. ಜನರು ಎಲ್ಲಾ ನೋಡುತ್ತಿದ್ದಾರೆ. ಎಲ್ಲವನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ. ಸಿಎಂ, ಮಂತ್ರಿ ಆದವರು ಅ ಪಕ್ಷದಲ್ಲಿ ಇದ್ದಾರೆ. ಅವರು ಹಠ ಮುಂದುವರಿಸಿದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. 



Read more

[wpas_products keywords=”deal of the day”]