Karnataka news paper

ಕೋವಿಡ್-19 ಲಸಿಕೆ: ಮೊದಲ ಡೋಸ್ ವಿತರಣೆಯಲ್ಲಿ 9 ಜಿಲ್ಲೆಗಳಲ್ಲಿ ಶೇ. 100 ರಷ್ಟು ಗುರಿ ಸಾಧನೆ


Online Desk

ಬೆಂಗಳೂರು: ಕೋವಿಡ್-19 ಲಸಿಕೆಯಲ್ಲಿ ಮೊದಲ ಡೋಸ್ ವಿತರಣೆಯಲ್ಲಿ ರಾಜ್ಯದ 9 ಜಿಲ್ಲೆಗಳು ಶೇಕಡಾ 100 ಗುರಿ ಸಾಧನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಭಿನಂದನೆ ತಿಳಿಸಿದ್ದಾರೆ.    

ಕರ್ನಾಟಕದ ಒಂಬತ್ತು ಜಿಲ್ಲೆಗಳು 100% ಮೊದಲ ಡೋಸ್ ವ್ಯಾಪ್ತಿಯನ್ನು ಸಾಧಿಸಿವೆ! ಎಲ್ಲಾ ಆರೋಗ್ಯ ಕಾರ್ಯಕರ್ತರು ಮತ್ತು ಜಿಲ್ಲಾಡಳಿತದ ನಿರಂತರ ಪರಿಶ್ರಮಕ್ಕಾಗಿ ಅಭಿನಂದನೆಗಳು. ಕರ್ನಾಟಕದಲ್ಲಿ ಒಟ್ಟಾರೆ 97.5% ರಷ್ಟು ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೋವಿಡ್ ನಿಯಂತ್ರಣಕ್ಕೆ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಗಳ ಸ್ಥಾಪನೆ: ಮುಖ್ಯಮಂತ್ರಿ ಬೊಮ್ಮಾಯಿ

ರಾಜ್ಯದಲ್ಲಿ 2021ರ ಜ.16ರಿಂದ ಲಸಿಕೆ ವಿತರಿಸಲಾಗುತ್ತಿದೆ. ಆರೋಗ್ಯ ಇಲಾಖೆಯು 18 ವರ್ಷಗಳು ಮೇಲ್ಪಟ್ಟ 4.89 ಕೋಟಿ ಮಂದಿಗೆ ಲಸಿಕೆ ಹಾಕುವ ಗುರಿ ಹಾಕಿಕೊಂಡಿದೆ. ಅವರಲ್ಲಿ 4.76 ಕೋಟಿ ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.

ಬೆಂಗಳೂರು ನಗರ (ಶೇ 129), ಗದಗ (ಶೇ 102), ವಿಜಯಪುರ (ಶೇ 102), ಬೀದರ್ (ಶೇ 101) ಹಾಗೂ ಬಾಗಲಕೋಟೆ (ಶೇ 100) ಜಿಲ್ಲೆ ಮೊದಲ ಡೋಸ್ ವಿತರಣೆಯಲ್ಲಿ ಮುಂಚೂಣಿಯಲ್ಲಿ ಇವೆ. ಧಾರವಾಡ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಕೊಡಗಿನಲ್ಲಿ ಶೇ 100 ರಷ್ಟು ಗುರಿ ತಲುಪಲಾಗಿದೆ. ದಾವಣಗೆರೆ, ಬೆಳಗಾವಿ ಹಾಗೂ ಹಾಸನದಲ್ಲಿ ಶೇ 99 ರಷ್ಟು ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 2,053 ಸೇರಿ, ರಾಜ್ಯದಲ್ಲಿ ಒಂದೇ ದಿನ 2,479 ಕೋವಿಡ್-19 ಸೋಂಕು ಪ್ರಕರಣ ವರದಿ; ನಾಲ್ವರು ಸಾವು

ಲಸಿಕೆಯ ಮೊದಲ ಡೋಸ್ ವಿತರಣೆಯಲ್ಲಿ ಬಿಬಿಎಂಪಿ (ಶೇ 92) ಕಡೆಯ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯೂ (ಶೇ 95ಕ್ಕಿಂತ ಕಡಿಮೆ) ಹಿಂದೆ ಬಿದ್ದಿದೆ.



Read more

[wpas_products keywords=”deal of the day”]