ಹೈಲೈಟ್ಸ್:
- ಪ್ರಧಾನಿ ಮೋದಿ ಅವರ ಪ್ರಯಾಣದ ವೇಳೆ ಭದ್ರತಾ ವೈಫಲ್ಯ
- ಟ್ವಿಟ್ಟರ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಕೆಣಕಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ
- ಶಿವಮೊಗ್ಗದ ಭದ್ರಾವತಿಯವರಾದ ಶ್ರೀನಿವಾಸ್ ಬಿ. ವಿ.
ಸರಿಸುಮಾರು 20 ನಿಮಿಷಗಳ ಕಾಲ ಫ್ಲೈ ಓವರ್‌ನಿಂದ ಕೆಳಗಿಳಿಯಲು ಸಾಧ್ಯವಾಗದೆ ಪ್ರಧಾನಿ ಮೋದಿ ಅವರಿದ್ದ ಬೆಂಗಾವಲು ಪಡೆ ವಾಹನಗಳು ರಸ್ತೆಯಲ್ಲಿ ಹರಸಾಹಸ ನಡೆಸಿದವು. ಬಳಿಕ ಭಟಿಂಡಾ ವಿಮಾನ ನಿಲ್ದಾಣಕ್ಕೆ ವಾಪಸ್ಸಾದ ಪ್ರಧಾನಿ ಮೋದಿ, ದಿಲ್ಲಿಗೆ ವಿಮಾನ ಏರುವ ಮುನ್ನ, ‘ನಾನು ಭಟಿಂಡಾ ವಿಮಾನ ನಿಲ್ದಾಣದವರೆಗೂ ಜೀವಂತವಾಗಿ ವಾಪಸ್ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ತಿಳಿಸಿ’ ಎಂದು ಏರ್‌ಪೋರ್ಟ್ ಸಿಬ್ಬಂದಿಗೆ ಹೇಳಿದ್ದರು.
ಈ ಘಟನೆಯ ಬಳಿಕ ಬಿಜೆಪಿ ನಾಯಕರು ಕಾಂಗ್ರೆಸ್‌ನ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಕಾಂಗ್ರೆಸ್ ನಾಯಕರು ಮಾತ್ರ ಪಂಜಾಬ್ ರಾಜ್ಯ ಸರ್ಕಾರವನ್ನು ಸಮರ್ಥಿಸಿಕೊಳ್ತಿದ್ದಾರೆ. ಈ ನಡುವೆ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶಿವಮೊಗ್ಗ ಜಿಲ್ಲೆ ಭದ್ರಾವತಿಯವರಾದ ಶ್ರೀನಿವಾಸ್ ಬಿ. ವಿ. ಅವರು ಮಾಡಿರುವ ಒಂದು ಟ್ವೀಟ್, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮೋದಿಯವರೇ ಹೇಗಿದೆ ಜೋಷ್ ಎಂದು ಶ್ರೀನಿವಾಸ್ ಅವರು ಮಾಡಿರುವ ಟ್ವೀಟ್ ಈಗ ಭಾರೀ ಚರ್ಚೆಯಲ್ಲಿದೆ. ಉರಿ ಸಿನೆಮಾದಲ್ಲಿ ನಾಯಕ ನಟ ಯೋಧರಿಗೆ ಕೇಳುವಂತೆ ಶ್ರೀನಿವಾಸ್ ಅವರು ಪ್ರಧಾನಿ ಮೋದಿ ಅವರಿಗೆ ಕುಟುಕಿದ್ದಾರೆ. ಈ ಟ್ವೀಟ್‌ಗೆ ನೆಟ್ಟಿಗರು ಥರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಸ್ಮೋಕಿಂಗ್ ಕಿಲ್ಸ್ ಎಂಬ ಟ್ವಿಟ್ಟರ್ ಬಳಕೆದಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮೃತದೇಹದ ಎದುರು ರಾಹುಲ್ ಗಾಂಧಿ ನಿಂತಿರುವ ಫೋಟೋವನ್ನು ಶೇರ್ ಮಾಡಿ, ಇದಕ್ಕಿಂತಾ ಉತ್ತಮವಾಗಿದೆ ಎಂದು ಟಾಂಗ್ ಕೊಟ್ಟಿದ್ದಾರೆ.
ಶುಭಂ ಎನ್ನುವವರು ಹೌ ಈಸ್ ದ ಜೋಶ್ ಎಂಬ ಪ್ರಶ್ನೆಗೆ ಹೈ ಶ್ರೀನಿವಾಸ್ ಎಂದು ಉತ್ತರಿಸುವ ಜೊತೆಗೆ ಪ್ರತಿಭಟನೆ ವೇಳೆ ಪೊಲೀಸರು ವಶಕ್ಕೆ ಪಡೆದ ಫೋಟೋ ಒಂದನ್ನು ಟ್ವೀಟಿಸಿ ಕುಟುಕಿದ್ದಾರೆ.
ಆದಿತ್ಯ ನಾರಾಯಣ್ ಎಂಬ ಟ್ವಿಟ್ಟರ್ ಬಳಕೆದಾರರು ಶ್ರೀನಿವಾಸ್ ಅವರ ಟ್ವೀಟ್‌ಗೆ ಉತ್ತರಿಸಿದ್ದು, 1987ರಲ್ಲಿ ಶ್ರೀಲಂಕಾದಲ್ಲಿ ರಾಜೀವ್ ಗಾಂಧಿ ಅವರು ಅನುಭವಿಸಿದ್ದನ್ನೇ 2022ರಲ್ಲಿ ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಅವರು ಅನುಭವಿಸಿದ್ದಾರೆ. ಎರಡಲ್ಲೂ ಯಾವುದೇ ವ್ಯತ್ಯಾಸವಿಲ್ಲ ಎಂದು ಫೋಟೋ ಸಮೇತ ಪ್ರತಿಕ್ರಿಯೆ ನೀಡಿದ್ದಾರೆ.
ಇದಲ್ಲದೆ ಕೆಲವು ನಿಂದನಾತ್ಮಕ ಹಾಗೂ ಅತಿರೇಕದ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. ಎಲ್ಲಕ್ಕಿಂತಾ ಹೆಚ್ಚಾಗಿ ಶ್ರೀನಿವಾಸ್ ಅವರ ಈ ಟ್ವೀಟ್ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ಮಧ್ಯೆ ವಾಕ್ಸಮರಕ್ಕೆ ವೇದಿಕೆಯಾಗಿ ಬದಲಾಗಿದೆ. ಕೆಲವರು ಕಾಂಗ್ರೆಸ್ ಪಕ್ಷದ ಸಾರಥ್ಯದ ಪಂಜಾಬ್ ಸರ್ಕಾರವನ್ನು ವಹಿಸಿಕೊಂಡು ಮಾತನಾಡಿದ್ರೆ ಮತ್ತೆ ಕೆಲವರು ಪ್ರಧಾನಿ ಹುದ್ದೆಯಲ್ಲಿ ಇರುವ ವ್ಯಕ್ತಿಗೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಬಹುತೇಕರು ಹಳೆಯ ವಿದ್ಯಮಾನಗಳನ್ನು ಕೆಣಕಿ ನೆಟ್ಟಿಗರ ನಡುವೆ ಆಕ್ರೋಶದ ಕಿಡಿ ಹೊತ್ತಿಸುತ್ತಿದ್ದಾರೆ.
Read more
[wpas_products keywords=”deal of the day sale today offer all”]