Karnataka news paper

ಬೆಂಗಳೂರು: ಹಳೆ ವಿಮಾನ ನಿಲ್ದಾಣ ರಸ್ತೆಯ ಸಿಗ್ನಲ್ ರಹಿತ ಕಾರಿಡಾರ್‌ ಮಾರ್ಚ್ ವೇಳೆಗೆ ಸಿದ್ಧ


The New Indian Express

ಬೆಂಗಳೂರು: ಹಲವಾರು ಅಡೆತಡೆಗಳನ್ನು ನಿವಾರಿಸಿದ ನಂತರ, ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿನ ಸಿಗ್ನಲ್ ರಹಿತ ಕಾರಿಡಾರ್‌ನ ಮೂರು ಅಂಡರ್‌ಪಾಸ್‌ಗಳಲ್ಲಿ ಎರಡನ್ನು ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

ಹೋಪ್ ಫಾರ್ಮ್ ಜಂಕ್ಷನ್‌ನಿಂದ ವೆಲ್ಲರಾ ಜಂಕ್ಷನ್‌ಗೆ ಸಂಪರ್ಕಿಸುವ ಎರಡು ಅಂಡರ್‌ಪಾಸ್‌ ಗಳು ಮಾರ್ಚ್ ಅಂತ್ಯದ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಇದು ದೊಮ್ಮಲೂರು ಮತ್ತು ಮಾರತ್ತಹಳ್ಳಿ ನಡುವಿನ ಸಾರ್ವಜನಿಕರ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಆಗಾಗ್ಗೆ ಸಂಚಾರ ದಟ್ಟಣೆಯನ್ನು ಹೊಂದಿರುವ ಹಳೆ ವಿಮಾನ ನಿಲ್ದಾಣ ರಸ್ತೆಯನ್ನು ಬಳಸುವ ವಾಹನ ಸವಾರರಿಗೆ ದೊಡ್ಡ ರಿಲೀಫ್ ನೀಡುತ್ತದೆ.

ಸುಮಾರು 17.5 ಕಿಮೀ ಉದ್ದದ ರೂ 19.5 ಕೋಟಿ ಯೋಜನೆಯು ಕುಂದಲಹಳ್ಳಿ, ವಿಂಡ್ ಟನಲ್ ರಸ್ತೆ ಮತ್ತು ಸುರಂಜನ್ ದಾಸ್ ರಸ್ತೆಯಲ್ಲಿ ಅಂಡರ್‌ಪಾಸ್‌ಗಳನ್ನು ನಿರ್ಮಿಸುತ್ತಿದೆ. ಮರ ಕಡಿಯುವುದಕ್ಕೆ ಸಂಬಂಧಿಸಿದಂತೆ ಕಾನೂನು ಸಮಸ್ಯೆಗಳು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ನೊಂದಿಗೆ ಭೂ ಸಮಸ್ಯೆಗಳು ಮತ್ತು ನಂತರದ ಸಾಂಕ್ರಾಮಿಕ ರೋಗದಿಂದಾಗಿ ಯೋಜನೆಯು ವಿಳಂಬವಾಯಿತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೊಂದಿಗೆ ಒಂದು ಸಣ್ಣ ಭೂ ಸಮಸ್ಯೆ ಇದ್ದು, ಬಿಬಿಎಂಪಿಯ ಈ ಕಾಮಗಾರಿಯನ್ನು ಆರ್‌ಎನ್‌ಎಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದೆ.

“ನಮ್ಮ ಪ್ರಮುಖ ಸಮಸ್ಯೆಗಳನ್ನು ಈಗ ಪರಿಹರಿಸಲಾಗಿದೆ. ನಾವು ಸುರಂಜನ್ ದಾಸ್ ಜಂಕ್ಷನ್‌ನಲ್ಲಿ ಕೆಲಸವನ್ನು ಪುನರಾರಂಭಿಸಿದ್ದೇವೆ ಮತ್ತು ಎಲ್ಲಾ ನೀರಿನ ಉಪಯುಕ್ತತೆಗಳನ್ನು ಸ್ಥಳಾಂತರಿಸಲಾಗಿದೆ. HAL ಸಂಸ್ಥೆಗಳಿಗೆ ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ನಾವು ಖಚಿತಪಡಿಸಿಕೊಂಡಿದ್ದೇವೆ. ಮುಂದಿನ ಉತ್ಖನನ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಹೊಸದಾಗಿ ನಿರ್ಮಿಸಲಾದ ಸರ್ವೀಸ್ ರಸ್ತೆಗಳ ಮೂಲಕ ಸಂಚಾರವನ್ನು ತಿರುಗಿಸಲಾಗುವುದು” ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.



Read more

[wpas_products keywords=”deal of the day”]