Karnataka news paper

ಧಾರವಾಡ ಜಿಲ್ಲೆಯಲ್ಲಿ ಬುಧವಾರ 26 ಕೊರೊನಾ ಕೇಸ್: ಮೂವರಿಗೆ ಓಮಿಕ್ರಾನ್‌ ದೃಢ..!


ಹೈಲೈಟ್ಸ್‌:

  • ಇಲ್ಲಿಯವರೆಗೆ ಧಾರವಾಡ ಜಿಲ್ಲೆಯ 61,615 ಜನರಿಗೆ ಕೊರೊನಾ ಸೋಂಕು
  • ನಾಲ್ಕೈದು ತಿಂಗಳಿಂದ ವೈರಸ್‌ ಹರಡುವ ಪ್ರಮಾಣ ಕಡಿಮೆ ಇತ್ತು
  • ಹೊಸ ವರ್ಷ ಜನವರಿಯಿಂದ ಈ ಪ್ರಮಾಣ ಏರುತ್ತಲೇ ಹೊರಟಿದೆ..!

ಧಾರವಾಡ: ಕೋವಿಡ್‌ ಸೋಂಕು ಧಾರವಾಡ ಜಿಲ್ಲೆಯಲ್ಲಿ ಏರುಮುಖದಲ್ಲಿಯೇ ಸಾಗುತ್ತಿದ್ದು, ಓಮಿಕ್ರಾನ್‌ ರೂಪಾಂತರಿ ವೈರಸ್‌ ಕೂಡಾ ಕಾಣಿಸಿಕೊಂಡಿದೆ. ಧಾರವಾಡದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ನೂರರ ಗಡಿ ದಾಟಿದ್ದು, ಜನರು ತೀವ್ರ ಜಾಗೃತಿ ವಹಿಸಬೇಕಿದೆ.

ಕೊರೊನಾ ಆರಂಭದಿಂದಲೂ ಇಲ್ಲಿಯವರೆಗೆ ಧಾರವಾಡ ಜಿಲ್ಲೆಯ 61,615 ಜನರಿಗೆ ಕೊರೊನಾ ಸೋಂಕು ತಗುಲಿದೆ. ನಾಲ್ಕೈದು ತಿಂಗಳಿಂದ ವೈರಸ್‌ ಹರಡುವ ಪ್ರಮಾಣ ಕಡಿಮೆ ಪ್ರಮಾಣದಲ್ಲಿ ಶುರುವಾಗಿತ್ತಾದರೂ ಹೊಸ ವರ್ಷ ಜನವರಿಯಿಂದ ಈ ಪ್ರಮಾಣ ಏರುತ್ತಲೇ ಹೊರಟಿದೆ. ಪ್ರತಿ ದಿನ ದೃಢಪಡುತ್ತಿರುವ ಪ್ರಕರಣಗಳ ಸಂಖ್ಯೆ ಒಂದಂಕಿಯಿಂದ ಈಗ ಎರಡಂಕಿಗೆ ಏರಿದೆ.

ಧಾರವಾಡ ಜಿಲ್ಲೆಯಲ್ಲಿ ಒಟ್ಟು ಮೂವರಲ್ಲಿ ಓಮಿಕ್ರಾನ್‌ ರೂಪಾಂತರಿ ವೈರಸ್‌ ಇರುವುದು ಖಚಿತಗೊಂಡಿದೆ. ಇವರಾರೂ ವಿದೇಶಿ ಪ್ರಯಾಣದ ಟ್ರಾವೆಲ್‌ ಹಿಸ್ಟರಿ ಹೊಂದಿಲ್ಲವಾದರೂ ರೂಪಾಂತರಿ ಸೋಂಕು ಕಂಡು ಬಂದಿದೆ. ಎಚ್ಚರಿಕೆ ವಹಿಸುವಂತೆ ಈಗಾಗಲೇ ಸರಕಾರ ನಿರ್ದೇಶನ ನೀಡಿದ್ದು, ಬುಧವಾರ 26 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜನವರಿ 1 ರಂದು 49 ಇದ್ದ ಸಕ್ರಿಯ ಪ್ರಕರಣ ಸಂಖ್ಯೆ, ಈಗ 126ಕ್ಕೆ ತಲುಪಿದೆ.

ದೇಶದಲ್ಲಿ ಬಿಡುಗಡೆಯಾಗಿದೆ ಮೊಲ್ನುಪಿರಾವಿರ್‌, ಎಲ್ಲರಿಗೂ ಸಿಗಲಿದೆಯೇ ಕೊರೊನಾ ಮಾತ್ರೆ?
ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೈಟ್‌ ಕರ್ಫ್ಯೂ, ವಿಕೆಂಡ್‌ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಆದರೆ, ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲೆ ಆರಂಭಕ್ಕೆ ಯಾವುದೇ ನಿರ್ದೇಶನ ನೀಡಿಲ್ಲವಾದರೂ ಕೆಲ ಶಾಲೆಗಳಲ್ಲಿ ಮುಂಜಾಗೃತಾ ಕ್ರಮವಾಗಿ ಶೇ. 50ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಒಂದು ದಿನ ಬಿಟ್ಟು ಒಂದು ದಿನ ತರಗತಿ ನಡೆಸಲಾಗುತ್ತಿದೆ. ಇದರೊಟ್ಟಿಗೆ 15 ರಿಂದ 18 ವರ್ಷದೊಳಗಿನವರಿಗೆ ವ್ಯಾಕ್ಸಿನ್‌ ನೀಡಲು ಕ್ರಮ ವಹಿಸಲಾಗುತ್ತಿದೆ. ಪ್ರತಿ ದಿನ 10 ಸಾವಿರದಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುತ್ತಿದೆ.

ಕೊರೊನಾ 3ನೇ ಅಲೆ ಆರಂಭದಲ್ಲೇ ಮೈಸೂರಿಗೆ ಆಘಾತ..! ಪ್ರವಾಸೋದ್ಯಮ ಕುಸಿತ..
ಕಳೆದ ಐದು ದಿನದ ಸೋಂಕಿನ ಪ್ರಮಾಣ:

ದಿನಾಂಕಸೋಂಕಿತರುಬಿಡುಗಡೆಸಕ್ರಿಯ
ಜನವರಿ 1090349
ಜನವರಿ 2150262
ಜನವರಿ 3190279
ಜನವರಿ 42903105
ಜನವರಿ 52605126

ಬೆಂಗಳೂರಿನಲ್ಲಿ ಬುಧವಾರ ಬರೋಬ್ಬರಿ 3,605 ಕೊರೊನಾ ಕೇಸ್..! 24 ಗಂಟೆಗಳಲ್ಲೇ ಡಬಲ್..!



Read more

[wpas_products keywords=”deal of the day sale today offer all”]