Karnataka news paper

ನೀವು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಲ್ಲಿ, ಮನೆಯಲ್ಲಿನ ಸಂಗತಿಗಳ ಬಗ್ಗೆ ತಕ್ಷಣವೇ ಗಮನ ಹರಿಸಿ..!


ವಾಸ್ತು ಶಾಸ್ತ್ರದಲ್ಲಿ ಅಂತಹ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಡುವುದು ತುಂಬಾ ಅಶುಭವಾಗಿದೆ, ಇದರಿಂದಾಗಿ ಮನೆಯ ಸದಸ್ಯರು ಹಣಕಾಸಿನ ಸಮಸ್ಯೆ ಮಾತ್ರವಲ್ಲದೇ ಇತರ ತೊಂದರೆಗಳಿಗೂ ಈಡಾಗಬಹುದು. ಅದರಲ್ಲೂ ಮುಖ್ಯವಾಗಿ ಹಣದ ಸಮಸ್ಯೆ ಮನೆಯಲ್ಲಿ ಕಾಲಿಟ್ಟರೆ ಯಾರಿಗೂ ನೆಮ್ಮದಿ ಇರದು. ಮೊದಲೇ ಹೇಳಿದಂತೆ ಈ ಸಮಸ್ಯೆಗೆ ಮುಖ್ಯವಾಗಿ ಮನೆಯಲ್ಲಿರುವ ಕೆಲವೊಂದು ಸಂಗತಿಗಳೇ ಆಗಿರಬಹುದು. ಅಂತಹ ಯಾವ ಸಂಗತಿಗಳು ಸಮಸ್ಯೆಯನ್ನು ಸೃಷ್ಟಿಸುತ್ತವೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಕೆಟ್ಟು ಹೋದ ಗಡಿಯಾರ ಮನೆಯಲ್ಲಿಟ್ಟರೆ ಹಣದ ನಷ್ಟ
ಹಾಳಾದ ಗಡಿಯಾರವನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ಏಕೆಂದರೆ ನಿಮ್ಮ ಮನೆಯಲ್ಲಿ ಗಡಿಯಾರ ಕೆಟ್ಟು ಹೋಗಿದ್ದು, ಅದನ್ನು ತಗೆಯದೇ ಇದ್ದಲ್ಲಿ, ನಕಾರಾತ್ಮಕ ಶಕ್ತಿಯು ಮನೆಯಲ್ಲಿ ನೆಲೆಸುತ್ತದೆ.ನಿಮ್ಮ ಮನೆಯಲ್ಲಿ ಈ ರೀತಿಯ ಗಡಿಯಾರ ಇದ್ದರೆ, ನೀವು ಅದನ್ನು ಸರಿಪಡಿಸಬೇಕು ಅಥವಾ ಅಲ್ಲಿಂದ ತೆಗೆದುಹಾಕಬೇಕು.

ಕ್ಯಾಲೆಂಡರ್‌ ಹಾಕಲು ಉತ್ತಮ ದಿಕ್ಕು ಯಾವುದು? ಯಾವ ದಿಕ್ಕಿನಲ್ಲಿ ಹಾಕಿದರೆ ಏನು ಲಾಭ..? ಇಲ್ಲಿದೆ ಮಾಹಿತಿ

ಒಣ ಗಿಡಗಳನ್ನು ಇಡುವುದರಿಂದ ಹಣ ನಷ್ಟ
ಮರೆತರೂ ನಂತರವೂ ನಿಮ್ಮ ಮನೆಯಲ್ಲಿ ಒಣ ಗಿಡಗಳನ್ನು ಹಾಗೆಯೇ ಇಡಬೇಡಿ.ಒಣ ಗಿಡಗಳನ್ನು ಮನೆಯಲ್ಲಿಟ್ಟರೆ ಮನೆಯ ಪರಿಸರ ಹಾಳಾಗುತ್ತದೆ. ಅದಕ್ಕಾಗಿಯೇ ನಿಮ್ಮ ಮನೆಯಲ್ಲಿ ಇಡುವ ಸಸ್ಯಗಳನ್ನು ನೀವು ಚೆನ್ನಾಗಿ ನೋಡಿಕೊಳ್ಳಬೇಕು. ಇಲ್ಲವಾದರೆ ಮನೆಯಲ್ಲಿ ಸಂತೋಷ ನೆಲೆಸುವುದಿಲ್ಲ.

ನೀವು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಲ್ಲಿ, ಮನೆಯಲ್ಲಿನ ಸಂಗತಿಗಳ ಬಗ್ಗೆ ತಕ್ಷಣವೇ ಗಮನ ಹರಿಸಿ..!

ನೀರು ವ್ಯರ್ಥವಾಗುವುದರಿಂದ ಹಣವೂ ಪೋಲಾಗುತ್ತದೆ
ನೀರು ನಮಗೆಲ್ಲರಿಗೂ ಬಹಳ ಮುಖ್ಯಆದರೆ ನೀರನ್ನು ವ್ಯರ್ಥವಾಗಿ ಪೋಲು ಮಾಡುವುದು ತುಂಬಾ ತಪ್ಪು. ಯಾವ ಮನೆಯಲ್ಲಿ ನೀರು ವ್ಯರ್ಥವಾಗುತ್ತದೋ ಅಥವಾ ಕೊಳಾಯಿ ಸೋರಿಕೆಯಾಗುತ್ತದೋ ಆ ಮನೆಗೆ ಅದು ಶುಭವಲ್ಲ. ಇದರಿಂದ ಮನೆಯಲ್ಲಿ ಹಣ ನೀರಿನಂತೆ ಖರ್ಚಾಗಿ ಹೋಗುತ್ತದೆ.

ಮನೆಯ ಸ್ವಚ್ಛತೆ
ಯಾವ ಮನೆಯಲ್ಲಿ ಸ್ವಚ್ಛತೆ ಇರುತ್ತದೆಯೋ ಆ ಮನೆಯಲ್ಲಿ ದೇವರೂ ನೆಲೆಸುತ್ತಾನೆ ಎಂದು ಹೇಳಲಾಗುತ್ತದೆ.ಅದಕ್ಕಾಗಿಯೇ ನೀವು ನಿಮ್ಮ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸಿಕೊಳ್ಳಬೇಕು.ನಿಮ್ಮ ಮನೆಯಲ್ಲಿ ವಸ್ತುಗಳು ಸಂಪೂರ್ಣವಾಗಿ ಚದುರಿಹೋಗಿದ್ದರೆ, ಅಲ್ಲಿ- ಇಲ್ಲಿ ವಸ್ತುಗಳು ಬಿದ್ದಿದ್ದರೆ, ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ.

ಅದಕ್ಕಾಗಿಯೇ ನೀವು ಯಾವಾಗಲೂ ನಿಮ್ಮ ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಇದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಮತ್ತು ಧನಹಾನಿಯಾಗುವುದಿಲ್ಲ.

ಯಾವ ದಿಕ್ಕಿನಲ್ಲಿ ಗಡಿಯಾರ ಇಡಬೇಕು?. ಕೆಟ್ಟು ಹೋದ ಗಡಿಯಾರದಿಂದ ಏನು ಸಮಸ್ಯೆಗಳುಂಟಾಗುತ್ತವೆ? ಇಲ್ಲಿದೆ ವಿವರವಾದ ಮಾಹಿತಿ

ಮನೆಯಲ್ಲಿ ಪೂಜೆ
ನಿಮ್ಮ ಮನೆಯಲ್ಲಿ ಪ್ರತಿದಿನ ಪೂಜೆ ಮಾಡಬೇಕು.ಹಿಂದೂ ಧರ್ಮದ ಪ್ರಕಾರ ಮನೆಯಲ್ಲಿ ಪೂಜೆ ಮಾಡುವುದು ಬಹಳ ಮುಖ್ಯ. ಏಕೆಂದರೆ ಇದು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ.ಪೂಜೆ ಮಾಡದ ಮನೆಯಲ್ಲಿ ಹಣದ ಕೊರತೆಯಾಗುವುದು.ಇದರೊಂದಿಗೆ ಕುಟುಂಬದ ಉಳಿದ ಸದಸ್ಯರೂ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಅದಕ್ಕಾಗಿಯೇ ನೀವು ಯಾವಾಗಲೂ ಬೆಳಿಗ್ಗೆ ಎದ್ದು ಶುಚೀರ್ಭೂತರಾಗಿ ಮನೆಯ ಪೂಜಾ ಕೋಣೆಯಲ್ಲಿ ಪೂಜೆ ಮಾಡಬೇಕು.

ನೀವು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಲ್ಲಿ, ಮನೆಯಲ್ಲಿನ ಸಂಗತಿಗಳ ಬಗ್ಗೆ ತಕ್ಷಣವೇ ಗಮನ ಹರಿಸಿ..!

ಮುಳ್ಳು ಸಸ್ಯಗಳು
ಮನೆಯಲ್ಲಿ ಯಾವುದೇ ರೀತಿಯ ಮುಳ್ಳು ಅಥವಾ ಹಾಲು ಬಿಡುವ ಗಿಡಗಳನ್ನು ನೆಡಬಾರದು ಎಂದು ಹೇಳಲಾಗುತ್ತದೆ. ಮನೆಯಲ್ಲಿ ಈ ಗಿಡ ನೆಡುವುದರಿಂದ ಆರೋಗ್ಯ ಸಮಸ್ಯೆ ಹಾಗೂ ಹಣದ ಕೊರತೆ ಕಾಡುತ್ತದೆ.

ಮನೆಯಲ್ಲಿ ಯಾವ ವಾಸ್ತುದೋಷವಿದ್ದರೆ ಯಾವ ಆರೋಗ್ಯ ಸಮಸ್ಯೆ ಬರಬಹುದು ಗೊತ್ತಾ? ಇಲ್ಲಿದೆ ಮಾಹಿತಿ

ಸ್ನಾನಗೃಹ
ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಯಾವಾಗಲೂ ನಿಮ್ಮ ಮನೆಯ ಸ್ನಾನಗೃಹ ಮತ್ತು ಶೌಚಾಲಯದ ಬಾಗಿಲುಗಳನ್ನು ಮುಚ್ಚಬೇಕು. ನಿಮ್ಮ ಮನೆಯ ಬಾತ್ ರೂಮ್ ಮತ್ತು ಶೌಚಾಲಯದ ಬಾಗಿಲು ತೆರೆದರೆ, ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ ಎಂಬ ನಂಬಿಕೆ ಇದೆ. ಇದರಿಂದಲೂ ಮನೆಯಲ್ಲಿ ಹಣದ ನಷ್ಟ ಉಂಟಾಗಬಹುದು.

ಅಡುಗೆ ಮನೆ
ನಿಮ್ಮ ಅಡುಗೆಮನೆಯಲ್ಲಿ ನೀವು ಔಷಧಿಗಳನ್ನು ಇಡಬಾರದು. ನೀವು ನಿಮ್ಮ ಅಡುಗೆಮನೆಯಲ್ಲಿ ಔಷಧಿಗಳನ್ನು ಇಟ್ಟುಕೊಂಡರೆ, ಅದು ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ವಾಸ್ತು ಶಾಸ್ತ್ರದ ಪ್ರಕಾರ ಇದು ಒಳ್ಳೆಯದಲ್ಲ.



Read more

[wpas_products keywords=”deal of the day sale today offer all”]