Online Desk
ಬೆಂಗಳೂರು: ನಿಮಗೆ ಒಂದ್ವೇಳೆ ಜೀರ್ಣಕಾರಿ ಸಮಸ್ಯೆ ಇದ್ರೆ ಅಥವಾ ಶೀತ ಇದ್ರೆ ನೀವು ಪಟ್ ಅಂತ ಸೈಂಧವ ಲವಣದಿಂದ ಪರಿಹಾರ ಪಡಿಬೋದು. ಗ್ರಂಥಿಕೆ ಅಂಗಡಿಗಳಲ್ಲೋ, ಆಯುರ್ವೇದದ ಔಷಧಿಗಳಲ್ಲೋ ಹೆಚ್ಚಾಗಿ ಕಾಣಸಿಗೋ ಉಪಯೋಗವಾಗೋ ಈ ಹೆಸರು ಸೈಂಧವ ಲವಣ.. ಅದೇ ದೊಡ್ಡುಪ್ಪು. ಸೈಂಧವ ಉಪ್ಪು, ಗುಲಾಬಿ ಕೆಂಪು ಹರಳುಪ್ಪು, ಇಂಗ್ಲಿಷಿನಲ್ಲಿ ರಾ ಸಾಲ್ಟ್ವಾಂತ ಇದನ್ನ ಕರಿಯಲಾಗುತ್ತೆ. ಅಷ್ಟೇ ಅಲ್ಲ ಇದನ್ನ ಪತ್ತೆ ಉಪ್ಪು, ಇದನ್ನ ಹಿಮಾಲಯನ್ ಉಪ್ಪು ಕೂಡ ಅಂತಾರೆ.
ರಾಕ್ ಸಾಲ್ಟ್ ಅಥವಾ ಪಿಂಕ್ ಸಾಲ್ಟ್ ಭಾರತೀಯರ ಸಾಂಪ್ರದಾಯಿಕ ಮನೆಗಳಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ಇದಮ್ನ ವಿಶೇಷವಾಗಿ ಉಪವಾಸದ ಆಹಾರದಲ್ಲಿ ಬಳಸಲಾಗುತ್ತೆ. ಈ ಕಲ್ಲಿನ ಉಪ್ಪನ್ನು ಆಯುರ್ವೇದದಲ್ಲಿ ಚಿಕಿತ್ಸೆಗಾಗಿ ವರ್ಷಗಳಿಂದ ಬಳಸಲಾಗುತ್ತಿದೆ. ನಿಮಗೆ ಜೀರ್ಣಕಾರಿ ಸಮಸ್ಯೆಗಳಿದ್ದರೆ ಅಥವಾ ಶೀತವಾಗಿದ್ದರೆ, ಕಲ್ಲು ಉಪ್ಪಿನ ಸಹಾಯದಿಂದ ನೀವು ಪರಿಹಾರವನ್ನು ಪಡೆಯಬಹುದು.
ಸಾಮಾನ್ಯ ಉಪ್ಪಿನಲ್ಲಿ ಸೋಡಿಯಂ ಮತ್ತು ಕ್ಲೋರೈಡ್ ಎರಡು ಅಂಶಗಳು ಕಂಡುಬರುತ್ತವೆ. ಆದರೆ ಕಲ್ಲು ಉಪ್ಪಿನಲ್ಲಿ ಕಬ್ಬಿಣ, ಸತು, ನಿಕಲ್, ಕೋಬಾಲ್ಟ್, ಮ್ಯಾಂಗನೀಸ್, ತಾಮ್ರವು ನಮ್ಮ ಆರೋಗ್ಯಕ್ಕೆ ಅಗತ್ಯವಾದ ಅಂಶಗಳಾಗಿವೆ. ಅಂತಹ ಪರಿಸ್ಥಿತಿಯಲ್ಲಿ, ಕಲ್ಲು ಉಪ್ಪಿನ ಸಹಾಯದಿಂದ ನೀವು ಯಾವ ಸಮಸ್ಯೆಗಳನ್ನು ನಿವಾರಿಸಬಹುದು ಮತ್ತು ಅದನ್ನ ಹೇಗೆ ಬಳಸೋದಂತ ನಾವು ಇಲ್ಲಿ ಹೇಳ್ತೀವಿ.
ನಿದ್ರಾಹೀನತೆಯ ಸಮಸ್ಯೆ ಇದ್ದರೆ, ಆಹಾರದಲ್ಲಿ ಗುಲಾಬಿ ,ಕೆಂಪು ಉಪ್ಪನ್ನು ಅಂದರೆ ಕಲ್ಲು ಉಪ್ಪನ್ನು ಬಳಸೋದರ ಮೂಲಕ ನೀವು ಈ ಸಮಸ್ಯೆಯನ್ನ ಹೋಗಲಾಡಿಸಬಹುದು. ಇದಕ್ಕಾಗಿ, ನೀವು ಜೇನುತುಪ್ಪದೊಂದಿಗೆ ಕಲ್ಲುಪ್ಪನ್ನ ಸೇವಿಸಬೇಕು. ಹೀಗೆ ಮಾಡುವುದರಿಂದ ನೀವು ಗಾಢವಾದ ನಿದ್ರೆಯನ್ನು ಪಡೆಯುತ್ತೀರಿ ಮತ್ತು ಎರಡನೇ ದಿನದಲ್ಲಿ ನೀವು ತಾಜಾತನವನ್ನ ಹೊಂದುತ್ತೀರಿ.
ಕಲ್ಲು ಉಪ್ಪನ್ನ ಫೇಸ್ ಸ್ಕ್ರಬ್ಬರ್ ಆಗಿಯೂ ಬಳಸಬಹುದು. ಹೀಗೆ ಮಾಡೋದ್ರಿಂದ ಮುಖದ ರಂಧ್ರಗಳನ್ನು ತೆರೆದುಕೊಳ್ಳುತ್ವೆ. ತೆಂಗಿನೆಣ್ಣೆಯಲ್ಲಿ ಈ ಗುಲಾಬಿ ಉಪ್ಪನ್ನು ಬೆರೆಸಿ ಮುಖದ ಮೇಲೆ ಲಘು ಕೈಗಳಿಂದ ಮಸಾಜ್ ಮಾಡಿದ್ರೆ ಇದು ಉತ್ತಮ ಸ್ಕ್ರಬ್ ಆಗಿ ಕೆಲಸ ಮಾಡುತ್ತೆ.
ನಿಮಗೆ ತಲೆನೋವು ಇದ್ದರೆ, ಕಲ್ಲು ಉಪ್ಪು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತೆ. ಇದಕ್ಕಾಗಿ ಒಂದು ಲೋಟ ನೀರಿಗೆ ನಿಂಬೆರಸ ಮತ್ತು ಕಲ್ಲು ಉಪ್ಪನ್ನು ಬೆರೆಸಿ ಕುಡಿಯಬೇಕು. ಈ ಪಾನೀಯವನ್ನು ಕುಡಿಯುವುದರಿಂದ ನಿಮ್ಮ ತಲೆನೋವಿನ ಪರಿಹಾರವನ್ನ ಪಡೀಬೋದು.
Read more
[wpas_products keywords=”deal of the day”]