Karnataka news paper

ಅತಿಥಿಯಿಂದ ಕಂಟಕ: ಐಐಟಿ ಗುವಾಹಟಿ ಕ್ಯಾಂಪಸ್‌ನಲ್ಲಿ 60 ಮಂದಿಗೆ ಕೊರೊನಾ; ಇಡೀ ಕ್ಯಾಂಪಸ್‌ ಸೀಲ್‌ಡೌನ್


ಹೈಲೈಟ್ಸ್‌:

  • ಹೊಸ ಅತಿಥಿಯಿಂದ ಇಡೀ ಕ್ಯಾಂಪಸ್‌ಗೆ ಸೋಂಕು
  • 60 ಮಂದಿಗೆ ಕೋವಿಡ್‌ ಪಾಸಿಟಿವ್‌; ಇಡೀ ಕ್ಯಾಂಪಸ್‌ ಸೀಲ್‌ಡೌನ್‌
  • ಕ್ಯಾಂಪಸ್‌ ಪ್ರವೇಶ ನಿಷಿದ್ದ, ಎಲ್ಲಾ ಕ್ಲಾಸು ಆನ್‌ಲೈನ್‌

ಗುವಾಹಟಿ: ಐಐಟಿ ಗುವಾಹಟಿ ಕ್ಯಾಂಪಸ್‌ನಲ್ಲಿ 60 ಮಂದಿಗೆ ಕೊರೊನಾ ಪಾಸಿಟಿವ್‌ ಉಂಟಾಗಿದ್ದು, ಇಡೀ ಕ್ಯಾಂಪಸ್‌ ಅನ್ನೇ ಕಂಟೈನ್ಮೆಂಟ್‌ ವಲಯ ಎಂದು ಘೋಷಣೆ ಮಾಡಲಾಗಿದೆ.

ಸೋಂಕಿತರ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ಭೀತಿಯಿಂದಾಗಿ ಕ್ಯಾಂಪಸ್‌ನೊಳಗೆ ಬೇರೆಯವರು ಪ್ರವೇಶ ಮಾಡುವುದಾಗಲಿ, ಒಳಗಿದ್ದವರು ಹೊರಗೆ ಬರವುದಾಗಲಿ ಮಾಡಕೂಡದು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಕ್ಯಾಂಪಸ್‌ಗೆ ಬಂದ ಅತಿಥಿಯೊಬ್ಬರಿಂದ ಕೋವಿಡ್‌ ಹರಡಿದ್ದು, ಇದೀಗ ಕ್ಯಾಂಪಸ್‌ನ 60ಕ್ಕೂ ಅಧಿಕ ಮಂದಿಗೆ ಸೋಂಕು ತಟ್ಟಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ಇನ್ನು ಮುಂದೆ 7 ದಿನ ಹೋಮ್ ಐಸೋಲೇಷನ್: ಮಾರ್ಗಸೂಚಿ ಪರಿಷ್ಕರಿಸಿದ ಕೇಂದ್ರ ಸರ್ಕಾರ
ಇನ್ನು ಸೋಂಕಿತರಿಗೆ ಓಮಿಕ್ರಾನ್‌ ತಗುಲಿದೆಯೇ ಎಂದು ಪರೀಕ್ಷೆ ಮಾಡಲು ಪರೀಕ್ಷಾ ಮಾದರಿಯನ್ನು ಜಿನೋಮ್‌ ಸೀಕ್ವೆನ್ಸ್ ಟೆಸ್ಟ್‌ಗೆ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ. ಸೋಂಕಿತರಲ್ಲಿ ಕೆಲವರಿಗೆ ಸಣ್ಣ ಪ್ರಮಾಣದ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ. ಇನ್ನು ಕೆಲವರು ಲಕ್ಷಣ ರಹಿತರಾಗಿದ್ದಾರೆ ಎಂದು ಮೂಲಗಳಿಂದ ಸಿಕ್ಕ ಮಾಹಿತಿಯಿಂದ ಗೊತ್ತಾಗಿದೆ.

ಈಗ ಸೋಂಕಿಗೆ ತುತ್ತಾಗಿರುವ ವಿದ್ಯಾರ್ಥಿಗಳೆಲ್ಲಾ ಕೆಲ ದಿನಗಳ ಹಿಂದಷ್ಟೇ ತಮ್ಮ ತಮ್ಮ ತವರು ರಾಜ್ಯಗಳಿಂದ ಮರಳಿದ್ದರು. ಈಗ ಅವರನ್ನು ಒಂದೇ ಕಟ್ಟಡದ ಬೇರೆ ಬೇರೆ ಕೊಠಡಿಗಳಲ್ಲಿ ಐಸೋಲೇಷನ್‌ನಲ್ಲಿ ಇಡಲಾಗಿದೆ. ಸೋಂಕಿಗೆ ತುತ್ತಾದ ವಿದ್ಯಾರ್ಥಿಗಳು, ಶಿಕ್ಷಕರನ್ನು ಕೊಠಡಿ ಬಿಟ್ಟು ಬರದಂತೆ ನಿರ್ದೇಶನ ನಿಡಲಾಗಿದ್ದು, ಎಲ್ಲಾ ತರಗತಿಗಳು ಆನ್‌ಲೈನ್‌ಲ್ಲಿಯೇ ನಡೆಯುತ್ತಿದೆ ಎಂದು ಅಧಿಕಾರಿಗಳು ವಿಜಯ ಕರ್ನಾಟಕದ ಸೋದರ ಸಂಸ್ಥೆ ಟೈಮ್ಸ್ ಆಫ್‌ ಇಂಡಿಯಾಗೆ ಮಾಹಿತಿ ನೀಡಿದ್ದಾರೆ.

ಒಂದೇ ದಿನದಲ್ಲಿ ದೇಶದ ಕೋವಿಡ್ ಪ್ರಕರಣ ಶೇ 55ರಷ್ಟು ಹೆಚ್ಚಳ: 58,097 ಮಂದಿಗೆ ಸೋಂಕು
ಅಲ್ಲದೇ ರಜೆ ಮುಗಿಸಿ ಕ್ಯಾಂಪಸ್‌ಗೆ ಮರಳಲು ಸಜ್ಜಾಗಿದ್ದ ವಿದ್ಯಾರ್ಥಿಗಳು ಸದ್ಯ ಬರುವುದು ಬೇಡ ಎಂದು ಐಐಟಿ ಸೂಚನೆ ನೀಡಿದೆ. ಏಕಾಏಕಿ ಕ್ಯಾಂಪಸ್‌ನಲ್ಲಿ ಕೋವಿಡ್‌ ಸ್ಫೋಟಗೊಂಡಿದ್ದು, ಇಡೀ ಕ್ಯಾಂಪಸ್‌ನಲ್ಲಿ ಭಾರೀ ಪ್ರಮಾಣದಲ್ಲಿ ಟೆಸ್ಟಿಂಗ್‌ ಹಾಗೂ ಟ್ರೇಸಿಂಗ್‌ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏತನ್ಮಧ್ಯೆ ಅಸ್ಸಾಂನಲ್ಲಿ ಕೂಡ ಕೋವಿಡ್‌ ಸಂಖ್ಯೆಗಳು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಮಂಗಳವಾರ ಒಂದೇ ದಿನ 475 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದು ಶೇ.35 ರಷ್ಟು ಹೆಚ್ಚು. ಸದ್ಯ ಇಡೀ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 1.29ರಷ್ಟಿದೆ.



Read more

[wpas_products keywords=”deal of the day sale today offer all”]