ಹೈಲೈಟ್ಸ್:
- ಸಂಬಂಧಗಳ ಕುರಿತು ಸಿದ್ಧಗೊಂಡಿರುವ ‘ಡಿಎನ್ಎ’ ಸಿನಿಮಾ
- ‘ಡಿಎನ್ಎ’ ಸಿನಿಮಾದ ಆಡಿಯೋ ರಿಲೀಸ್ ಮಾಡಿದ ತುಳಸಿ ಗೌಡ
- ‘ಡಿಎನ್ಎ’ ಚಿತ್ರಕ್ಕೆ ಶುಭ ಹಾರೈಸಿದ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ
ಚಿತ್ರದ ಮುಖ್ಯಭೂಮಿಕೆಯಲ್ಲಿ ಅಚ್ಯುತ್ ಕುಮಾರ್, ಯಮುನಾ, ರೋಜತ್ ನಾರಾಯಣ್, ಎಸ್ತರ್ ನರೋನಾ, ಅನಿತಾ ಭಟ್ ನಟಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಅಚ್ಯುತ್ ಕುಮಾರ್, ‘ನಾನು ಹಾಗೂ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಬಹುಕಾಲದ ಗೆಳೆಯರು. ಪ್ರಕಾಶ್ ಅವರು ಈ ರೀತಿಯ ಕಥೆಯಿದೆ ಎಂದು ಹೇಳಿದ ತಕ್ಷಣ ನಟಿಸಲು ಒಪ್ಪಿಕೊಂಡೆ. ಕೊರೊನಾದಿಂದ ಬಿಡುಗಡೆ ಸ್ವಲ್ಪ ವಿಳಂಬವಾಗಿದೆ. ಎಲ್ಲರೂ ನೋಡಿ, ಹರಿಸಿ’ ಎಂದರು.
ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಪ್ರಕಾಶ್ ರಾಜ್ ಮೇಹು, ‘ನಾನು ಕಳೆದ 25 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಇದ್ದೇನೆ. ‘ಜನುಮದ ಜೋಡಿ’ ಚಿತ್ರಕ್ಕೆ ನಿರ್ದೇಶಕ ಟಿ.ಎಸ್. ನಾಗಾಭರಣ ಅವರೊಡನೆ ಕೆಲಸ ಮಾಡಿದ್ದೆ. ನಾನು ಕೂಡ ಆ ಸಿನಿಮಾಗೆ ಸಂಭಾಷಣೆಯನ್ನು ಬರೆದಿದ್ದೇನೆ. ಆದರೂ ಆ ವಿಚಾರ ಕೆಲವರಿಗೆ ಬಿಟ್ಟು ಹೆಚ್ಚಿನವರಿಗೆ ತಿಳಿದಿಲ್ಲ. ಈಗ ಬಹಳ ವರ್ಷಗಳ ನಂತರ ಸಿನಿಮಾವೊಂದನ್ನು ನಿರ್ದೇಶಿಸಿದ್ದೇನೆ. ದೇವನೂರು ಮಹದೇವ ಅವರ ‘ಸಂಬಂಜ ಅನ್ನೋದು ದೊಡ್ಡದು ಕನಾ’ ಎಂಬ ಸಾಲು ಈ ಚಿತ್ರಕ್ಕೆ ಸ್ಫೂರ್ತಿ’ ಎನ್ನುತ್ತಾರೆ.
ಕಡೆಗೂ ಪದ್ಮಶ್ರೀ ತುಳಸಿ ಗೌಡರಿಗೆ ಸನ್ಮಾನಿಸಿದ ಉತ್ತರ ಕನ್ನಡ ಜಿಲ್ಲಾಡಳಿತ..!
‘ನಾನು ಚಿಕ್ಕಂದಿನಿಂದಲೂ ಅಣ್ಣಾವ್ರ ಅಭಿಮಾನಿ. ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಿಮಾ ಮಾಡುವ ಆಸೆಯಿತ್ತು. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ‘ಡಿಎನ್‌ಎ‘ ನಿರ್ಮಾಣ ಮಾಡಿದ್ದೇನೆ. ಇದು ನನ್ನ ಮೊದಲ ಚಿತ್ರ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದರು ನಿರ್ಮಾಪಕ ಮೈಲಾರಿ. ‘ಕೆಲವು ಸಿನಿಮಾಗಳು ಹೃದಯಕ್ಕೆ ಹತ್ತಿರವಾಗುತ್ತದೆ. ಅಂತಹ ಒಂದು ಸಿನಿಮಾ ‘ಡಿಎನ್ಎ’. ಇಂತಹ ಚಿತ್ರದಲ್ಲಿ ಅಭಿನಯಿಸಿದ ಖುಷಿಯಿದೆ’ ಎಂದರು ನಟಿ ಎಸ್ತರ್ ನರೋನಾ.
DNA ಬಗ್ಗೆ ಯೋಗರಾಜ್ ಭಟ್ರು ಹಾಡು ಬರೆದ್ರು, ‘ನೀನಾಸಂ’ ಸತೀಶ್ ಸಖತ್ ಆಗಿ ಹಾಡಿದ್ರು!
ನಂತರ ಮಾತನಾಡಿದ ಮಾಸ್ಟರ್ ಆನಂದ್, ‘ನನ್ನ ಮಗ ಕೃಷ್ಣ ಈ ಚಿತ್ರದಲ್ಲಿ ಅಭಿನಯಿಸಿದ್ದಾನೆ. ನಿರ್ದೇಶಕರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ‘ಡಿಎನ್ಎ’ ಅಂದರೆ ಧ್ರುವ, ನಕ್ಷತ್ರ ಹಾಗೂ ಆಕಾಶ ಎಂದು. ಇದು ತಂದೆ, ತಾಯಿ ಹಾಗೂ ಮಗನ ಹೆಸರು’ ಎಂದು ಹೇಳಿ, ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರಕ್ಕೆ ಚೇತನ್ ರಾಜ್ ಸಂಗೀತ ನೀಡಿದ್ದು, ಕೊರೊನಾ ಹೆಚ್ಚಾಗುತ್ತಿರುವುದರಿಂದ ಜನವರಿ 7ರಂದು ಆಗಬೇಕಿದ್ದ ಚಿತ್ರದ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ.
Read more
[wpas_products keywords=”deal of the day party wear dress for women stylish indian”]