Karnataka news paper

ಜೀವಂತವಾಗಿ ವಾಪಸ್ ಬಂದೆ, ಪಂಜಾಬ್ ಸಿಎಂಗೆ ಧನ್ಯವಾದ ತಿಳಿಸಿ: ಏರ್‌ಪೋರ್ಟ್‌ ಸಿಬ್ಬಂದಿಗೆ ಪ್ರಧಾನಿ ಮೋದಿ ಸೂಚನೆ..!


ಹೈಲೈಟ್ಸ್‌:

  • ಪಂಜಾಬ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಅವರಿಂದಲೇ ಆಕ್ರೋಶ
  • ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರಿಂದಲೂ ಅಸಮಾಧಾನ
  • ಸಾಕಷ್ಟು ಮೊದಲೇ ಪಿಎಂ ಟೂರ್ ಪ್ಲಾನ್ ಕೊಟ್ಟಿದ್ದಾಗಿ ಗೃಹ ಸಚಿವಾಲಯದ ಸ್ಪಷ್ಟನೆ

ಭಟಿಂಡಾ (ಪಂಜಾಬ್): ಪ್ರಧಾನಿ ಮೋದಿ ಅವರು ಫ್ಲೈ ಓವರ್‌ನಲ್ಲಿ 20 ನಿಮಿಷಗಳ ಕಾಯುವಂತೆ ಮಾಡಿದ ಪಂಜಾಬ್ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಖುದ್ದು ಪ್ರಧಾನಿ ಮೋದಿ ಅವರೇ ತಮ್ಮ ಅಸಮಾಧಾನ ಹೊರಹಾಕಿದ್ದು, ‘ನಾನು ಭಟಿಂಡಾ ವಿಮಾನ ನಿಲ್ದಾಣದವರೆಗೂ ಜೀವಂತವಾಗಿ ವಾಪಸ್ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ತಿಳಿಸಿ’ ಎಂದು ಏರ್‌ಪೋರ್ಟ್‌ ಸಿಬ್ಬಂದಿಗೆ ಹೇಳಿದ್ದಾರೆ.

ಪಂಜಾಬ್ ಕಾಂಗ್ರೆಸ್ ಸರ್ಕಾರ ಹಾಗೂ ಅಲ್ಲಿನ ಸಿಎಂ ಚರಣ್‌ಜೀತ್ ಸಿಂಗ್ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಕೂಡಾ ಗರಂ ಆಗಿದ್ದು, ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವ ಯತ್ನ ಎಂದು ಹರಿಹಾಯ್ದಿದ್ದಾರೆ. ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಸೋಲಿಸಲು ಸಾಧ್ಯವಾಗದ ಜನರು ಈ ರೀತಿಯ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ಪ್ರಧಾನಿ ಮೋದಿ ಅವರ ಪ್ರಯಾಣ ವಿವರವನ್ನು ಈ ಮೊದಲೇ ಪಂಜಾಬ್ ಸರ್ಕಾರಕ್ಕೆ ನೀಡಲಾಗಿತ್ತು ಎಂದು ತಿಳಿಸಿದೆ. ಪ್ರಧಾನಿಗಳ ಪ್ರವಾಸ ಕಾರ್ಯಕ್ರಮದ ನಿಯಮಾವಳಿಗಳ ಪ್ರಕಾರವೇ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲು ಸೂಚಿಸಲಾಗಿದ್ದು, ಭದ್ರತೆ, ಸಲಕರಣೆ ಹಾಗೂ ಅನ್ಯ ಮಾರ್ಗಗಳ ಬದಲಿ ಯೋಜನೆಯನ್ನೂ ಹಂಚಿಕೊಳ್ಳಲಾಗಿತ್ತು ಎಂದು ಗೃಹ ಸಚಿವಾಲಯ ತಿಳಿಸಿದೆ.

ಪಂಜಾಬ್‌ನ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ಪ್ರಧಾನಿ ಮೋದಿ ಅವರು ಬಟಿಂಡಾಗೆ ಬುಧವಾರ ಬೆಳಿಗ್ಗೆ ಬಂದಿಳಿದಿದ್ದರು. ಅವರನ್ನು ಹೆಲಿಕಾಪ್ಟರ್ ಮೂಲಕ ಸ್ಥಳಕ್ಕೆ ಕರೆದೊಯ್ಯಬೇಕಾಗಿತ್ತು. ಆದರೆ ಮಳೆ ಮತ್ತು ಕಳಪೆ ಗೋಚರತೆಯ ಕಾರಣ ಹೆಲಿಕಾಪ್ಟರ್‌ ಹಾರಾಟ ಸಾಧ್ಯವಾಗಲಿಲ್ಲ. ಹವಾಮಾನ ಪರಿಸ್ಥಿತಿ ಸರಿ ಹೋಗಬಹುದು ಎಂದು ಪ್ರಧಾನಿ ವಿಮಾನ ನಿಲ್ದಾಣದಲ್ಲೇ ಸುಮಾರು 20 ನಿಮಿಷ ಸಮಯವನ್ನೂ ಕಳೆದರು. ಬಳಿಕ ರಸ್ತೆ ಮಾರ್ಗವಾಗಿ ಹುಸೇನಿವಾಲಾಗೆ ಪ್ರಧಾನಿ ಮೋದಿ ಹೊರಟರು.

ಪ್ರತಿಭಟನೆಯಿಂದ ಪಂಜಾಬ್‌ ಫ್ಲೈಓವರ್‌ನಲ್ಲಿ 20 ನಿಮಿಷ ಸಿಲುಕಿದ ಪ್ರಧಾನಿ ಮೋದಿ; ಭದ್ರತಾ ಲೋಪ ಎಂದ ಕೇಂದ್ರ
ಪ್ರಧಾನಿ ಮೋದಿ ಅವರು, 2 ಗಂಟೆಗಳ ಕಾಲ ರಸ್ತೆ ಮಾರ್ಗವಾಗಿ ಪ್ರಯಾಣಿಸಬೇಕಿತ್ತು. ಅವರು ತಲುಪಬೇಕಾದ ಸ್ಥಳ 30 ನಿಮಿಷ ದೂರದಲ್ಲಿದೆ ಎನ್ನುವಾಗಲೇ ಅವರಿಗೆ ಪ್ರತಿಭಟನಾಕಾರರ ಅಡ್ಡಿ ಎದುರಾಯ್ತು. ಪ್ರಧಾನಿ ಅವರ ಬೆಂಗಾವಲು ಪಡೆ ಫ್ಲೈ ಓವರ್ ಒಂದರ ಮೇಲೆ ಇತ್ತು. ಫ್ಲೈ ಓವರ್ ಕೆಳಗೆ ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ತೆರವುಗೊಳಿಸುವಲ್ಲಿ ಪಂಜಾಬ್ ಸರ್ಕಾರ ವಿಫಲವಾಯ್ತು. ಸುಮಾರು 20 ನಿಮಿಷಗಳ ಕಾಲ ಪ್ರಧಾನಿ ಮೋದಿ ಅವರು ಫ್ಲೈ ಓವರ್ ಮೇಲೆ ಕಾದು ಕುಳಿತುಕೊಳ್ಳುವಂತಾಗಿತ್ತು. ಬಳಿಕ ಅವರು ತಮ್ಮ ನಿಗದಿತ ಕಾರ್ಯಕ್ರಮವನ್ನು ರದ್ದುಗೊಳಿಸಿ ಭಟಿಂಡಾ ಏರ್‌ಪೋರ್ಟ್‌ಗೆ ವಾಪಸ್ಸಾದರು.

ರೈತರು ನನಗಾಗಿ ಸತ್ತರಾ ಎಂದು ಮೋದಿ ಪ್ರಶ್ನಿಸಿದ್ದರು: ಮೇಘಾಲಯ ಗೌರ್ನರ್‌ ಮಲಿಕ್‌ ಸ್ಫೋಟಕ ಹೇಳಿಕೆ



Read more

[wpas_products keywords=”deal of the day sale today offer all”]