Karnataka news paper

ತರಕಾರಿ ಇಳುವರಿ ಇಳಿಕೆ, ಗಗನಮುಖಿಯಾದ ಬೆಲೆ; ಟೊಮೆಟೋ, ನುಗ್ಗೆಕಾಯಿ ಮುಟ್ಟಂಗಿಲ್ಲ!


| Vijaya Karnataka | Updated: Dec 13, 2021, 7:50 AM

ಮೋಡ ಕವಿದ ವಾತಾವರಣ ಜತೆಗೆ ಕೆಲದಿನಗಳು ದಿಢೀರ್‌ ಮಳೆಯಾಗುತ್ತಿದ್ದು, ತರಕಾರಿ ಫಸಲು ಕುಸಿತ ಕಂಡಿದೆ. ಇದೀಗ ತರಕಾರಿಗೆ ಬೇಡಿಕೆಯಿದ್ದರೂ ಪೂರೈಕೆ ಇಲ್ಲ. ಮತ್ತೊಂದೆಡೆ ಟೊಮೇಟೊ ದರವೂ ಏರುತ್ತಿದೆ. ಜಿಲ್ಲೆಯಲ್ಲಿ ಮಳೆಯಿಂದ ತರಕಾರಿ ಬೆಳೆಗಳು ನೆಲಕಚ್ಚಿದೆ. ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರ ಭಾಗದಲ್ಲಿ ಬೆಳೆಯಲಾಗುವ ಟೊಮೇಟೊಗೆ ಎಲ್ಲೆಡೆ ಬೇಡಿಕೆ ಹೆಚ್ಚಿದೆ. ಮಳೆಗೆ ಸಿಲುಕಿ ಕೆಲವೆಡೆ ಬೆಳೆ ನಾಶವಾಗಿದ್ದು, ಪೂರೈಕೆ ಕುಸಿತ ಕಂಡಿದೆ.

 

Vegetable Price
ಆದರ್ಶ ಕೋಡಿ
ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿ ವರುಣಾರ್ಭಟ ಕಡಿಮೆಯಾದರೂ ತರಕಾರಿ ಬೆಳೆ ಹಾಳಾದ ಪರಿಣಾಮ, ಮಾರುಕಟ್ಟೆಗೆ ಆವಕವಿಲ್ಲದೆ ಬೆಲೆ ಗಗನಮುಖಿಯಾಗಿದೆ. ಜಿಲ್ಲೆಯಲ್ಲಿ ಮಳೆಗೆ ಬಹುತೇಕ ಕಡೆಗೆ ತರಕಾರಿ ಬೆಳೆ ಹಾನಿಯಾಗಿದೆ. ಟೊಮೇಟೊ, ಈರುಳ್ಳಿ ಸೇರಿದಂತೆ ವಿವಿಧ ತರಕಾರಿ, ಸೊಪ್ಪು ಬೆಳೆ ನೆಲಕಚ್ಚಿದ್ದು, ಪೂರೈಕೆ ಕಡಿಮೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿಈ ಹಿಂದೆ ಕೆಜಿ 30 ರೂ. ಇದ್ದ ಟೊಮೇಟೊ ದರ 100ಕ್ಕೆ ಏರಿಕೆಯಾಗಿದೆ.

ಕೊರೊನಾ ಮೂರನೇ ಅಲೆಯ ಭೀತಿಯಿಂದ ಸಭೆ ಸಮಾರಂಭ ಚುರುಕಾಗಿದ್ದು, ತರಕಾರಿಗಳ ಪೂರೈಕೆ ಕುಸಿತದಿಂದ ಬೆಲೆ ಏರಿಕೆಯಾಗಿದೆ. ಕಳೆದ ತಿಂಗಳಿಂದ ಅಬ್ಬರಿಸಿದ ಮಳೆರಾಯ ಕೊಂಚ ಬಿಡುವು ಕೊಟ್ಟಿದೆ. ಆದರೆ ಮೋಡ ಕವಿದ ವಾತಾವರಣ ಜತೆಗೆ ಕೆಲದಿನಗಳು ದಿಢೀರ್‌ ಮಳೆಯಾಗುತ್ತಿದ್ದು, ತರಕಾರಿ ಫಸಲು ಕುಸಿತ ಕಂಡಿದೆ. ಇದೀಗ ತರಕಾರಿಗೆ ಬೇಡಿಕೆಯಿದ್ದರೂ ಪೂರೈಕೆ ಇಲ್ಲ. ಮತ್ತೊಂದೆಡೆ ಟೊಮೇಟೊ ದರವೂ ಏರುತ್ತಿದೆ. ಜಿಲ್ಲೆಯಲ್ಲಿ ಮಳೆಯಿಂದ ತರಕಾರಿ ಬೆಳೆಗಳು ನೆಲಕಚ್ಚಿದೆ. ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರ ಭಾಗದಲ್ಲಿ ಬೆಳೆಯಲಾಗುವ ಟೊಮೇಟೊಗೆ ಎಲ್ಲೆಡೆ ಬೇಡಿಕೆ ಹೆಚ್ಚಿದೆ. ಮಳೆಗೆ ಸಿಲುಕಿ ಕೆಲವೆಡೆ ಬೆಳೆ ನಾಶವಾಗಿದ್ದು, ಪೂರೈಕೆ ಕುಸಿತ ಕಂಡಿದೆ. ಇದರಿಂದ ಟೊಮೇಟೊ ದರ ಏರಿಕೆಯಾಗಿತ್ತು. ಮಾರುಕಟ್ಟೆಗೆ ಗುಣಮಟ್ಟದ ಟೊಮೇಟೊ ಬರುತ್ತಿಲ್ಲ.
ಮತ್ತೆ ಗಗನಕ್ಕೇರಿದ ಟೊಮೇಟೊ ಬೆಲೆ! ಗ್ರಾಹಕರಿಗೆ ಹೊರೆ, ರೈತರಲ್ಲಿ ಸಂತಸ!
ಗುಣಮಟ್ಟದ ಟೊಮೇಟೊ 100ರಿಂದ 120 ರೂ. ಪ್ರತಿ ಕೆಜಿಗೆ ನೀಡಬೇಕಿದೆ. ಇದರಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಾಗಿದೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದೀಗ ತರಕಾರಿ, ಹಣ್ಣುಗಳ ಬೆಲೆ ಗ್ರಾಹಕ ಕೈಸುಡುತ್ತಿದೆ. ಮಾರುಕಟ್ಟೆಯಲ್ಲಿನ ತರಕಾರಿ ಬೆಲೆಗಿಂತ ಹೆಚ್ಚಿನ ದರ ನೀಡಿ ತರಕಾರಿಗಳನ್ನು ಖರೀದಿಸುವಂತಾಗಿದೆ. ಇನ್ನೂ ಮಳೆಯಿಂದ ಬೆಲೆ ಹೆಚ್ಚು ನೀಡಿದರೂ ಗುಣಮಟ್ಟದ ತರಕಾರಿಗಳು ಗ್ರಾಹಕರಿಗೆ ಸಿಗುತ್ತಿಲ್ಲ.

ಕಳೆಗಟ್ಟುತ್ತಿರುವ ಸಮಾರಂಭಗಳು: ಕೊರೊನಾ 3ನೇ ಅಲೆಯ ಭೀತಿ ಆರಂಭವಾಗಿರುವ ಹಿನ್ನೆಲೆ ಜನರು ಮತ್ತೆ ಲಾಕ್‌ಡೌನ್‌ ಹಾಗೂ ಕಠಿಣ ಕ್ರಮ ಜಾರಿಯಾಗುವ ಆತಂಕದಿಂದ ಆದಷ್ಟು ಬೇಗ ಸಭೆ ಸಮಾರಂಭಗಳನ್ನು ನಡೆಸಲು ಮುಂದಾಗುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕಾರ‍್ಯಕ್ರಮಗಳು ಹೆಚ್ಚಿವೆ. ಇದರಿಂದ ತರಕಾರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಬೇಡಿಕೆಗೆ ತಕ್ಕಂತೆ ತರಕಾರಿ ಪೂರೈಕೆಯಾಗದ ಹಿನ್ನೆಲೆ ದರವು ಮತ್ತಷ್ಟು ಏರಿಕೆಯಾಗುತ್ತಿದೆ.

ಸಮೀಪದ ನಗರಗಳ ಸುದ್ದಿ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ

Web Title : vegetable yields decline; skyrocketing prices; tomato rates going rise
Kannada News from Vijaya Karnataka, TIL Network



Read more