ಬೆಂಗಳೂರು: ‘ಏಕ್ ಲವ್ ಯಾ’ ಸಿನಿಮಾ ಬಿಡುಗಡೆ ದಿನಾಂಕವನ್ನು ನಟ, ನಿರ್ದೇಶಕ ಪ್ರೇಮ್ ಮುಂದೂಡಿದ್ದಾರೆ. ಇದೇ ಜ.21ರಂದು ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗಿತ್ತು.
ರಾಜ್ಯದಲ್ಲಿ ಕೋವಿಡ್ ಹಾಗೂ ಕೊರೊನಾ ವೈರಾಣುವಿನ ರೂಪಾಂತರಿ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ ಏಕಾಏಕಿ ಏರಿಕೆಯಾಗುತ್ತಿರುವ ಕಾರಣ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಮಂಗಳವಾರ ಹೊರಡಿಸಿದೆ. ಬುಧವಾರ ರಾತ್ರಿ 10ರಿಂದ ಅನ್ವಯವಾಗುವಂತೆ ರಾತ್ರಿ ಕರ್ಫ್ಯೂ ವಿಸ್ತರಣೆ, ವಾರಾಂತ್ಯ ಕರ್ಫ್ಯೂ, ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಆಸನಗಳ ಭರ್ತಿಗಷ್ಟೇ ಅವಕಾಶ ನೀಡಲಾಗಿದೆ. ಈ ಎಲ್ಲ ಕಾರಣದಿಂದ ಸಿನಿಮಾ ಬಿಡುಗಡೆಯನ್ನು ಚಿತ್ರತಂಡವು ಮುಂದೂಡಿದೆ.
‘ಜ.21ಕ್ಕೆ ‘ಏಕ್ ಲವ್ ಯಾ’ ಬಿಡುಗಡೆಯಾಗಬೇಕಿತ್ತು. ಇದನ್ನು ಮುಂದೂಡುತ್ತಿದ್ದೇವೆ. ಸರ್ಕಾರದ ಆದೇಶದ ಪ್ರಕಾರ ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಪ್ರೇಕ್ಷರಿಗಷ್ಟೇ ಅವಕಾಶ ಹಾಗೂ ವಾರಾಂತ್ಯ, ರಾತ್ರಿ ಕರ್ಫ್ಯೂ ಹೇರಲಾಗಿದೆ. ಹೀಗಾಗಿ ಸಿನಿಮಾ ಬಿಡುಗಡೆ ಮುಂದೂಡುತ್ತಿದ್ದೇವೆ. ಕೋವಿಡ್ ಪ್ರಕರಣಗಳು ಇಳಿಕೆಯಾಗಿ, ಪರಿಸ್ಥಿತಿ ಸುಧಾರಿಸಿದ ಬಳಿಕ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸುತ್ತೇವೆ. ಜನರ ಪ್ರೀತಿ ನಮ್ಮ ಮೇಲೆ ಹೀಗೇ ಇರಲಿ. ಹೊಸ ವರ್ಷದಲ್ಲಿ ಸಾವು ನೋವು ಸಂಭವಿಸದೇ ಇರಲಿ. ಎಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ’ ಎಂದು ಪ್ರೇಮ್ ಹೇಳಿದ್ದಾರೆ.
ರಕ್ಷಿತಾ ಪ್ರೇಮ್ ನಿರ್ಮಾಣದ, ಅರ್ಜುನ್ ಜನ್ಯಾ ಸಂಗೀತ ನಿರ್ದೇಶನ ನೀಡಿರುವ ಈ ಸಿನಿಮಾದ ‘ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ’, ‘ಎಣ್ಣೆಗೂ ಹೆಣ್ಣಿಗೂ..’ ಹಾಡುಗಳು ಹಿಟ್ ಆಗಿದ್ದು ಯೂಟ್ಯೂಬ್‌ನಲ್ಲಿ 30 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ರಾಣಾ, ರಚಿತಾ ರಾಮ್, ರೀಷ್ಮಾ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.
#Yaareyaare https://t.co/0nCf1Lnb4W#Heluyaake https://t.co/MhayesfQg9#Yenneguhennigu https://t.co/4sKzpnvoLJ#Onduoorali https://t.co/LcTHh6Ds9k #Meetmadona https://t.co/m5rqy7IxcO
V back with trailer,song and also release date after this pandemic.bles with ur lv nd support🙏 pic.twitter.com/PqixigPKSk— PREM❣️S (@directorprems) January 5, 2022
Read More…Source link
[wpas_products keywords=”deal of the day party wear for men wedding shirt”]