ಸ್ಟಾಕ್ಹೋಮ್: ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳು ಇನ್ನೂ ಅಪಾಯಕಾರಿ ರೂಪಾಂತರಿಗಳಿಗೆ ದಾರಿಮಾಡಿಕೊಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಕಾಡ್ಗಿಚ್ಚಿನ ರೀತಿಯಲ್ಲಿ ಓಮಿಕ್ರಾನ್ ರೂಪಾಂತರಿ ವೈರಾಣು ಹರಡುತ್ತಿದ್ದು, ಮೊದಲಿಗಿಂತ ಕಡಿಮೆ ತೀವ್ರತೆ ಹೊಂದಿದೆ. ಈ ಮೂಲಕ ಪ್ಯಾಂಡಮಿಕ್ ಸ್ಥಿತಿಯಿಂದ ಎಂಡೆಮಿಕ್ ಹಂತವನ್ನು ಕೊರೋನಾ ತಲುಪುತ್ತಿದ್ದು ಜನಜೀವನ ಸಮಾನ್ಯವಾಗಿರಲಿದೆ ಎಂಬ ನಿರೀಕ್ಷೆ ಇದೆ.
ಆದರೆ ಡಬ್ಲ್ಯುಹೆಚ್ಒ ನ ಹಿರಿಯ ಅಧಿಕಾರಿ ಕ್ಯಾಥರೀನ್ ಸ್ಮಾಲ್ವುಡ್ ಎಚ್ಚರಿಕೆಯನ್ನು ನೀಡಿದ್ದು, ಏರುಗತಿಯಲ್ಲಿರುವ ಸೋಂಕು ಪ್ರಮಾಣ ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿಯೂ ಕೆಲಸ ಮಾಡಬಹುದು ಎಂದು ಹೇಳಿದ್ದಾರೆ.
ಓಮಿಕ್ರಾನ್ ಹೆಚ್ಚಳವಾದಂತೆಲ್ಲಾ, ಅದು ದ್ವಿಗುಣಗೊಳ್ಳುತ್ತದೆ. ಈ ರೀತಿ ಆದಂತೆಲ್ಲಾ ಹೊಸ ರೂಪಾಂತರಿಗೆ ಅದು ದಾರಿ ಮಾಡಿಕೊಡುತ್ತದೆ. ಈಗ ಓಮಿಕ್ರಾನ್ ಅಪಾಯಕಾರಿಯಾಗಿದ್ದು ಸಾವೂ ಸಂಭವಿಸಬಹುದು ಆದರೆ ಡೆಲ್ಟಾಗಿಂತಲೂ ಸ್ವಲ್ಪ ಕಡಿಮೆಯೂ ಇರಬಹುದು ಆದರೆ ಮುಂದಿನ ರೂಪಾಂತರಿ ಯಾವ ರೀತಿ ಸಮಸ್ಯೆ, ಸವಾಲುಗಳನ್ನು ಒಡ್ಡುತ್ತದೆಯೋ ಯಾರಿಗೆ ತಿಳಿದಿದೆ? ಎಂದು ಸ್ಮಾಲ್ ವುಡ್ ಎಎಫ್ ಪಿಗೆ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ಯಾಂಡಮಿಕ್ ಪ್ರಾರಂಭವಾದಾಗಿನಿಂದಲೂ ಯುರೋಪ್ ನಲ್ಲಿ 100 ಮಿಲಿಯನ್ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು 2021 ರ ಕೊನೆಯ ವಾರ ಒಂದರಲ್ಲೇ 5 ಮಿಲಿಯನ್ ಗೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ.
ನಾವು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದೇವೆ. ಪಶ್ಚಿಮ ಯುರೋಪ್ ನಲ್ಲಿ ಗಣನೀಯ ಪ್ರಮಾಣದಲ್ಲಿ ಓಮಿಕ್ರಾನ್ ಸಂಖ್ಯೆ ಏರಿಕೆ ಕಾಣುತ್ತಿದೆ. ಅದರ ಪರಿಣಾಮಗಳ ಬಗ್ಗೆ ನಮಗೆ ಇನ್ನೂ ತಿಳಿದಿಲ್ಲ. ಪ್ರಕರಣಗಳು ಹೆಚ್ಚಿದಂತೆಲ್ಲಾ ಜನರು ತೀವ್ರವಾದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಸಾಯುವ ಹಂತಕ್ಕೂ ತಲುಪಬಹುದು ಎಂದು ಸ್ಮಾಲ್ವುಡ್ ಎಚ್ಚರಿಸಿದ್ದಾರೆ.
Read more
[wpas_products keywords=”deal of the day”]