Karnataka news paper

ಇನ್ನೂ 61 ನಿವಾಸಿ ವೈದ್ಯರಲ್ಲಿ ಕೋವಿಡ್: ಕೊರೊನಾ ಏರಿಕೆ ನಡುವೆ ಮತ್ತೊಂದು ಸಮಸ್ಯೆ


ಹೈಲೈಟ್ಸ್‌:

  • ಮಹಾರಾಷ್ಟ್ರದಲ್ಲಿ ಮತ್ತೆ 61 ನಿವಾಸಿ ವೈದ್ಯರಲ್ಲಿ ಕೋವಿಡ್ ಸೋಂಕು
  • ಇದುವರೆಗೂ ಸುಮಾರು 170 ನಿವಾಸಿ ವೈದ್ಯರಲ್ಲಿ ಕೊರೊನಾ ವೈರಸ್
  • ನೀಟ್ ಕೌನ್ಸೆಲಿಂಗ್ ಕುರಿತಾದ ಪ್ರತಿಭಟನೆಯನ್ನು ನಿಲ್ಲಿಸಿದ ವೈದ್ಯರು

ಮುಂಬಯಿ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಏರಿಕೆ ನಡುವೆ, ಸೋಂಕಿಗೆ ಒಳಗಾಗುತ್ತಿರುವ ವೈದ್ಯರ ಸಂಖ್ಯೆಯೂ ಹೆಚ್ಚಳ ಕಾಣುತ್ತಿದೆ. ಮುಂಬಯಿಯ ಜೆಜೆ ಆಸ್ಪತ್ರೆಯಲ್ಲಿ 61 ನಿವಾಸಿ ವೈದ್ಯರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ ಎಂದು ಮಹಾರಾಷ್ಟ್ರ ನಿವಾಸಿ ವೈದ್ಯರ ಸಂಘಟನೆ ತಿಳಿಸಿದೆ.

ನಗರದಲ್ಲಿ ಏರುತ್ತಿರುವ ಕೋವಿಡ್ 19 ಪ್ರಕರಣಗಳ ಮಧ್ಯೆ ನಿವಾಸಿ ವೈದ್ಯರ ಕೊರತೆ ಎದುರಾಗುತ್ತಿದೆ. ಕೋವಿಡ್ ಕಾರಣದಿಂದ ಅನೇಕರು ಈಗ ಚಿಕಿತ್ಸೆ ಹಾಗೂ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರಿಂದ ರೋಗಿಗಳ ಆರೈಕೆಗೆ ಭಾರಿ ತೊಂದರೆ ಉಂಟಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ನಿವಾಸಿ ವೈದ್ಯರ ಸಂಘಟನೆ (ಎಂಎಆರ್‌ಡಿ) ಅಧ್ಯಕ್ಷ ಡಾ. ಅವಿನಾಶ್ ದಹಿಫಾಲೆ ತಿಳಿಸಿದ್ದಾರೆ.
ಒಂದೇ ದಿನದಲ್ಲಿ ದೇಶದ ಕೋವಿಡ್ ಪ್ರಕರಣ ಶೇ 55ರಷ್ಟು ಹೆಚ್ಚಳ: 58,097 ಮಂದಿಗೆ ಸೋಂಕು
ಕಳೆದ ಎರಡು ದಿನಗಳಲ್ಲಿ, ಮಹಾರಾಷ್ಟ್ರ ಸರ್ಕಾರದ ಹಾಗೂ ಸ್ಥಳೀಯ ಪಾಲಿಕೆಗಳು ನಡೆಸುತ್ತಿರುವ ಆಸ್ಪತ್ರೆಗಳಲ್ಲಿನ ಸುಮಾರು 170 ವೈದ್ಯರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.

ಈ ಮಧ್ಯೆ ನೀಟ್-ಪಿಜಿ (NEET-PG) ಕೌನ್ಸೆಲಿಂಗ್ ವಿಳಂಬ ಮತ್ತು ಇತರೆ ಸಮಸ್ಯೆಗಳ ವಿರುದ್ಧ ಮುಷ್ಕರ ನಡೆಸುತ್ತಿದ್ದ ಮಹಾರಾಷ್ಟ್ರ ನಿವಾಸಿ ವೈದ್ಯರು, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ನಿರ್ದೇಶನಾಲಯ (ಡಿಎಂಇಆರ್) ನಿರ್ದೇಶಕ ಡಾ, ದಿಲೀಪ್ ಮೈಸೇಕರ್ ಅವರೊಂದಿಗಿನ ಸಭೆ ಬಳಿಕ ಪ್ರತಿಭಟನೆಯನ್ನು ಕೈಬಿಟ್ಟಿರುವುದು ಕೊಂಚ ಸಮಾಧಾನ ಮೂಡಿಸಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 58,097 ಹೊಸ ಕೋವಿಡ್ 19 ಪ್ರಕರಣಗಳು ದಾಖಲಾಗಿವೆ. ಮಂಗಳವಾರ 37,379 ಮಂದಿಗೆ ಸೋಂಕು ತಗುಲಿತ್ತು. ಅಂದರೆ ಒಂದು ದಿನದಲ್ಲಿ ಶೇ 55ರಷ್ಟು ಪ್ರಕರಣಗಳ ಏರಿಕೆಯಾಗಿದೆ. ಹಾಗೆಯೇ ದೇಶಾದ್ಯಂತ 2,135 ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಒಂದೇ ದಿನದಲ್ಲಿ 149 ಓಮಿಕ್ರಾನ್ (Omicron) ಪ್ರಕರಣ ದೃಢಪಟ್ಟಿವೆ. ಇದರಿಂದ ರಾಜ್ಯದಲ್ಲಿನ ಒಟ್ಟು ಪ್ರಕರಣಗಳು 226ಕ್ಕೆ ಏರಿಕೆಯಾಗಿವೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ 653, ದಿಲ್ಲಿಯಲ್ಲಿ 464 ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ.



Read more

[wpas_products keywords=”deal of the day sale today offer all”]