ಹೈಲೈಟ್ಸ್:
- ಡಿ.17ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಂಡಿದ್ದ ‘ಪುಷ್ಪ’
- ‘ಪುಷ್ಪ’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕಮಾಯಿ ಮಾಡಿದೆ
- ಓಟಿಟಿಯಲ್ಲಿ ಪ್ರಸಾರ ಮಾಡಲು ನಿರ್ಧರಿಸಿದ ‘ಪುಷ್ಪ’ ನಿರ್ಮಾಪಕರು
ಓಟಿಟಿಯಲ್ಲಿ ಪ್ರಸಾರವಾಗುತ್ತಿರುವುದರ ಬಗ್ಗೆ ಅಲ್ಲು ಅರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಸ್ಕ್ರಿಪ್ಟ್ ಓದಿದ ಕ್ಷಣವೇ ಅದು ನನಗೆ ಹಿಡಿಸಿತ್ತು. ಒಬ್ಬ ಸಾಮಾನ್ಯ ಮನುಷ್ಯ ಈ ಎತ್ತರಕ್ಕೆ ಏರುವುದು ಅಚ್ಚರಿ ಎನಿಸಬಹುದು. ಆದರೆ ಸಿನಿಮಾದಲ್ಲಿ ಅವನ ಪ್ರಯಾಣವನ್ನು ಪ್ರದರ್ಶಿಸಿದ ರೀತಿ, ಈ ಪಾತ್ರಕ್ಕೆ ಸೇರಿಸಲಾದ ಹಲವು ಪದರಗಳು ಮತ್ತು ಸೂಕ್ಷ್ಮ ವ್ಯತ್ಯಾಸಗಳು ತುಂಬಾ ವಿಶಿಷ್ಟವಾಗಿದೆ. ನನ್ನ ವೃತ್ತಿಜೀವನದಲ್ಲಿ ಇಲ್ಲಿಯವರೆಗೂ ನಾನು ಮಾಡಿರುವ ಬೇರೆ ಸಿನಿಮಾಗಳ ಪಾತ್ರಕ್ಕಿಂತ ಇದು ಭಿನ್ನವಾಗಿದೆ. ಸಿನಿಮಾದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ’ ಎನ್ನುತ್ತಾರೆ ಅಲ್ಲು ಅರ್ಜುನ್.
ನಿರ್ದೇಶಕ ಸುಕುಮಾರ್, ‘ಈ ಸಿನಿಮಾವನ್ನು ದೊಡ್ಡ ಹಿಟ್ ಮಾಡಿದ್ದಕ್ಕಾಗಿ ಅಭಿಮಾನಿಗಳು, ಪ್ರೇಕ್ಷಕರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ರಕ್ತ ಚಂದನದ ಕಳ್ಳಸಾಗಣೆ ಕಡಿವಾಣ ಕಾರ್ಯಾಚರಣೆಯ ಲೋಕಕ್ಕೆ ಕೊಂಡೊಯ್ಯುವ ಆಲೋಚನೆ ಕೆಲ ದಿನಗಳಿಂದ ನನ್ನಲ್ಲಿತ್ತು. ತೆರೆಮೇಲೆ ಅದು ಮೂಡಿಬಂದಿದೆ. ಚಿತ್ರಮಂದಿರದ ನಂತರ ಓಟಿಟಿ ವೀಕ್ಷಕರಿಗೂ ಇದು ಮನರಂಜನೆ ನೀಡಲಿದೆ ಎಂಬ ನಂಬಿಕೆ ನಮಗೆ ಇದೆ. ಬಲವಾದ ಕಥೆ ಮತ್ತು ಪ್ರತಿಭಾವಂತ ಪಾತ್ರವರ್ಗದ ಅದ್ಭುತ ನಟನೆಯು ಎಲ್ಲರಿಗೂ ಇಷ್ಟವಾಗಲಿದೆ’ ಎಂದಿದ್ದಾರೆ.
ಚಿತ್ರದ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಅವರಿಗೆ ಈ ಸಿನಿಮಾದಿಂದ ಮತ್ತಷ್ಟು ಯಶಸ್ಸು ಸಿಕ್ಕಂತೆ ಆಗಿದೆ. ‘ಪ್ರೇಕ್ಷಕರು ಈ ಸಿನಿಮಾವನ್ನು ತುಂಬಾ ಹೊಗಳುವುದನ್ನು ನೋಡಿದಾಗ ನಾನು ತಿಂಗಳುಗಳ ಕಾಲ ಹಾಕಿದ ಶ್ರಮ ಮತ್ತು ತರಬೇತಿ ಪ್ರತಿಫಲ ನೀಡಿದೆ ಎನಿಸುತ್ತದೆ. ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಅವರಂತಹ ಸ್ಟಾರ್ ನಟರೊಂದಿಗೆ ಕೆಲಸ ಮಾಡುವುದು ನನಗೆ ವಿಶೇಷ ಅನುಭವ ನೀಡಿದೆ. ವಿಶಿಷ್ಟವಾದ ಕಥಾಹಂದರ, ಶಕ್ತಿಯುತ ನಿರೂಪಣೆ ಮತ್ತು ವಿಶೇಷ ಪಾತ್ರಗಳು ಈ ಸಿನಿಮಾಕ್ಕೆ ಜೀವ ತುಂಬಿದೆ’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
ಟ್ವಿಟರ್‌ನಲ್ಲಿ ದಾಖಲೆ ಬರೆದ ‘ಬೀಸ್ಟ್’ ಪೋಸ್ಟರ್; ‘ಪುಷ್ಪ’ ತಂಡಕ್ಕೆ ದುಬಾರಿ ಗಿಫ್ಟ್ ನೀಡಿದ ‘ಐಕಾನ್ ಸ್ಟಾರ್’!
ಇನ್ನು, ‘ಪುಷ್ಪ’ ಚಿತ್ರದ ಕೊನೆಯಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ಅವರು ಎಂಟ್ರಿ ನೀಡುತ್ತಾರೆ. ಪಾರ್ಟ್ 2ರಲ್ಲಿ ಅವರ ಪಾತ್ರ ಇನ್ನಷ್ಟು ಸ್ಟ್ರಾಂಗ್ ಆಗಿ ಇರಲಿದೆ. ‘ಟಾಲಿವುಡ್‌ನಲ್ಲಿ ‘ಪುಷ್ಪ’ ನನಗೆ ಅದ್ಭುತವಾದ ಚೊಚ್ಚಲ ಸಿನಿಮಾವಾಗಿದೆ. ನನ್ನ ಪಾತ್ರವನ್ನು ರೂಪಿಸಿದ ರೀತಿ, ನೋಟ, ಸಂಭಾಷಣೆ ಮತ್ತು ಆಕ್ಷನ್ ಸೀನ್‌ಗಳು ಸೇರಿದಂತೆ ಪ್ರತಿಯೊಂದು ಅಂಶವನ್ನು ಸಿನಿಮಾದಲ್ಲಿ ವಿಶೇಷವಾಗಿ ಹೆಣೆಯಲಾಗಿದೆ. ಇಂತಹ ವಿಶಿಷ್ಟ ಪಾತ್ರಕ್ಕಾಗಿ ತಯಾರಿ ನಡೆಸುವುದು ನನಗೆ ತುಂಬಾ ಇಷ್ಟವಾಯಿತು’ ಎಂದಿದ್ದಾರೆ ಫಹಾದ್ ಫಾಸಿಲ್. ಕನ್ನಡದ ನಟ ಡಾಲಿ ಧನಂಜಯ್ ಅವರು ಜಾಲಿ ರೆಡ್ಡಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಬೆಂಗಳೂರಿನಲ್ಲಿ ‘ಪುಷ್ಪ’ ಚಿತ್ರಕ್ಕೆ ಸಿಕ್ಕಿರುವ ಶೋಗಳೆಷ್ಟು? ಕನ್ನಡ ವರ್ಷನ್‌ಗೆ ಶುರುವಾಗಿದೆ ತಾರತಮ್ಯ!
Read more
[wpas_products keywords=”deal of the day party wear dress for women stylish indian”]