Karnataka news paper

ಬೆಳಗಾವಿಗೆ ಆಗಮಿಸಿದ ಸಚಿವ ಅಶ್ವತ್ಥ್‌ ನಾರಾಯಣ್‌ಗೆ ಈ ಹಿಂದಿಗಿಂತಲೂ ಹೆಚ್ಚಿನ ಭದ್ರತೆ ನೀಡಿದ ಪೊಲೀಸರು


ಬೆಳಗಾವಿ: ಬುಧವಾರ ಬೆಳಗಾವಿ ಸೇರಿದಂತೆ ಖಾನಾಪುರ ತಾಲೂಕಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್‌ ನಾರಾಯಣ್‌ ಕುಂದಾನಗರಿ ಬೆಳಗಾವಿಗೆ ಬುಧವಾರ ಮುಂಜಾನೆ ಬಂದಿದ್ದಾರೆ.‌

ಆದರೆ ಈ ಹಿಂದೆ ಅಶ್ವತ್ಥ್‌ ನಾರಾಯಣ್‌ ಅವರು ಬೆಳಗಾವಿಗೆ ಬಂದಾಗ ನೀಡಿದ ಪೊಲೀಸ್ ಭದ್ರತೆಗಿಂತ ಈ ಬಾರಿ ಸ್ವಲ್ಪ ಹೆಚ್ಚಿನ ಭದ್ರತೆ ನೀಡಿದ ದೃಶ್ಯಗಳು ಕಂಡುಬಂದವು. ಹೌದು ಸಚಿವರು ಇಂದು ವಿಶ್ವೇಶ್ವರ ತಾಂತ್ರಿಕ ವಿವಿಯಲ್ಲಿ ನಡೆಯುವ ಟೆಕ್ ಭಾರತ್ 2022 ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದಾರೆ. ಬೆಳಗ್ಗೆ ಸುಭಾಷ್ ನಗರದಲ್ಲಿ ಸ್ನೇಹಿತ ಸಚಿನ್ ಹಂಜಿ ಮನೆಗೆ ಉಪಹಾರಕ್ಕೆ ಆಗಮಿಸಿದ್ದರು. ಈ ವೇಳೆ ಸುಭಾಷ್ ನಗರದ ಸಚಿನ್ ಹಂಜಿ ನಿವಾಸದ ಬಳಿ ಬಿಗಿ ಭದ್ರತೆ ಹೆಚ್ಚಿಸಲಾಗಿತ್ತು.
ನಿರ್ಬಂಧ ಹೇರಿದರೂ ‘ಮೇಕೆದಾಟು’ ಯಾತ್ರೆಗೆ ಒಮ್ಮತದ ತೀರ್ಮಾನ; ಬಸವನಗುಡಿ ಮೈದಾನದಲ್ಲಿ ಸಮಾರೋಪ
ಎರಡು ದಿನಗಳ ಹಿಂದೆ ರಾಮನಗರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮುಂದೆಯೇ ಸಚಿವ ಅಶ್ವತ್ಥ್ ನಾರಾಯಣ್ ಹಾಗೂ ಸಂಸದ ಡಿ.ಕೆ ಸುರೇಶ್ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಈ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿತ್ತು. ಮತ್ತೊಂದೆಡೆ ಈ ಕುರಿತು ರಾಜ್ಯದ ಹಲವೆಡೆ ನಿನ್ನೆಯಿಂದ ಬಿಜೆಪಿ ಕಾರ್ಯಕರ್ತರು ಡಿಕೆ ಸುರೇಶ ವಿರುದ್ದ, ಕಾಂಗ್ರೆಸ್‌ ಕಾರ್ಯಕರ್ತರು ಸಚಿವ ಅಶ್ವತ್ಥ್‌ ನಾರಾಯಣ್‌ ವಿರುದ್ದ ಪ್ರತಿಭಟನೆಗಳು ನಡೆಸುತ್ತಿದ್ದಾರೆ. ಇಂದು ಕೂಡಾ ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಚಿವ ವಿರುದ್ದ ಪ್ರತಿಭಟನೆ ಮಾಡುವ ಸಾಧ್ಯತೆಗಳು ಇದ್ದದ್ದರಿಂದ ಸಚಿವರ ಕಾರ್ಯಕ್ರಮಕ್ಕೆ ಈ ಮೊದಲಿಗಿಂತ ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಂಡಿದ್ದರು.

ಬೆಳಗ್ಗೆ ಸುಭಾಷ್ ನಗರದಲ್ಲಿ ಸ್ನೇಹಿತ ಸಚಿನ್ ಹಂಜಿ ಮನೆಯಲ್ಲಿ ಉಪಹಾರ ಮುಗಿಸಿದ ಬಳಿಕ ವಿಟಿಯುಗೆ ತೆರಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಳಿಕ ಅಲ್ಲಿಂದ ಮಧ್ಯಾಹ್ನ ಖಾನಾಪುರಕ್ಕೆ ತೆರಳಲಿರುವ ಸಚಿವ ಅಶ್ವತ್ಥ್ ನಾರಾಯಣ್ ಖಾನಾಪುರದಲ್ಲಿ ವಾಯವ್ಯ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಸಂಜೆ ಬೆಳಗಾವಿ ನಗರಕ್ಕೆ ವಾಪಸ್ ಬಂದು ಸಂಜೆ ಖಾಸಗಿ ಕಂಪನಿಗಳ ಸಿಇಒಗಳ ಜೊತೆ ಸಭೆ ನಡೆಸಿ ಹುಬ್ಬಳ್ಳಿಗೆ ವಾಪಸ್ ಆಗಲಿದ್ದಾರೆ. ರಾತ್ರಿ ಹುಬ್ಬಳ್ಳಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ.



Read more

[wpas_products keywords=”deal of the day sale today offer all”]