Karnataka news paper

ನಾಯಕತ್ವ ಹಸ್ತಾಂತರ: ಅಂಬಾನಿ ಸಾಮ್ರಾಜ್ಯದಲ್ಲಿ ಮೂವರು ಉದ್ಯಮಿಗಳ ಉಗಮದ ನಿರೀಕ್ಷೆ


ಹೈಲೈಟ್ಸ್‌:

  • ರಿಲಯನ್ಸ್‌ ಇಂಡಸ್ಟ್ರೀಸ್ ನಾಯಕತ್ವ ಹಸ್ತಾಂತರದ ಬಗ್ಗೆ ಮುಕೇಶ್ ಅಂಬಾನಿ ಹೇಳಿಕೆ
  • ಮೂರು ಪ್ರಮುಖ ಉದ್ಯಮಗಳನ್ನು ಮೂವರು ಮಕ್ಕಳ ನಡುವೆ ಹಂಚುವ ಸವಾಲು
  • ರಿಲಯನ್ಸ್‌ ಇಂಡಸ್ಟ್ರೀಸ್ ಅಡಿ ಕುಟುಂಬದ ಟ್ರಸ್ಟ್ ರಚಿಸಿ ನಿಯಂತ್ರಿಸುವ ಸಾಧ್ಯತೆ
  • ನವೀಕರಿಸುವ ಇಂಧನ ಕ್ಷೇತ್ರದಲ್ಲಿ ಭಾರಿ ದೊಡ್ಡ ಹೂಡಿಕೆಗೆ ಮುಂದಾಗಿರುವ ಅಂಬಾನಿ

ಮುಂಬಯಿ: ಏಷ್ಯಾದ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ಮುಂದಿನ ಪೀಳಿಗೆಗೆ ತಮ್ಮ ಬೃಹತ್ ಸಾಮ್ರಾಜ್ಯದ ನಾಯಕತ್ವ ಹಸ್ತಾಂತರಿಸುವ ಬಗ್ಗೆ ನೀಡಿರುವ ಭರವಸೆಯು ಮಹತ್ವದ ನಡೆಯಾಗಿದೆ. ಮುಕೇಶ್ ಅಂಬಾನಿ ಅವರು ಇನ್ನೂ ಬೆಳೆಯುತ್ತಿರುವ ತಮ್ಮ 217 ಬಿಲಿಯನ್ ಡಾಲರ್ ಬೃಹತ್ ಸಾಮ್ರಾಜ್ಯಕ್ಕೆ ಯಾವ ಆಕಾರ ನೀಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಆದರೆ ಈ ಬಹುನಿರೀಕ್ಷಿತ ಕಾರ್ಪೋರೇಟ್ ಯಶಸ್ಸು ಕನಿಷ್ಠ ಮೂವರು ಸೂಪರ್‌ಸ್ಟಾರ್ ಉದ್ಯಮಗಳ ಉಗಮಕ್ಕೆ ಪುಷ್ಠಿ ನೀಡಲಿದೆ. ಪ್ರತಿಯೊಂದೂ ತನ್ನದೇ ಉದ್ಯಮ ವಲಯದಲ್ಲಿ ಭಾರಿ ದೊಡ್ಡ ಲಾಭದ ಹಂಚಿಕೆಯ ಗುರಿ ಹೊಂದಿವೆ.

2002ರಲ್ಲಿ ತಮ್ಮ ತಂದೆ ವಿಲ್ ಬರೆಯದೆ ಮರಣ ಹೊಂದಿದ್ದ ಬಳಿಕ ಸಹೋದರ ಅನಿಲ್ ಅಂಬಾನಿ ಜತೆಗೆ ಕಹಿ ಮನಸ್ತಾಪಗಳು ಭುಗಿಲೆದ್ದ ಸನ್ನಿವೇಶವನ್ನು ಅನುಭವಿಸಿದ್ದ 64 ವರ್ಷದ ಉದ್ಯಮಿ ಮುಕೇಶ್ ಅಂಬಾನಿ ಅವರಿಗೆ ಮೂವರು ಮಕ್ಕಳ ನಡುವೆ ಸಂಪತ್ತಿನ ಸಮಾನ ವರ್ಗಾವಣೆ ಮುಖ್ಯವಾಗಿದೆ. ಅಂತಹ ಯಾವುದೇ ಅಹಿತಕರ ಸ್ಥಿತಿಯನ್ನು ತಪ್ಪಿಸಲು ಸಮೂಹದ ಮಾಲೀಕತ್ವ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಡಿಯಲ್ಲಿ ತರುವ ತರುವುದು ಒಂದು ಆಲೋಚನೆಯಾಗಿದೆ. ಟ್ರಸ್ಟ್‌ ರೀತಿಯ ಸಂರಚನೆಯಡಿ ಇವುಗಳನ್ನು ನಿಯಂತ್ರಿಸುವುದು ಅವರ ಉದ್ದೇಶ. ಮುಕೇಶ್, ಅವರ ಪತ್ನಿ ನೀತಾ (59), ಅವಳಿ ಮಕ್ಕಳಾದ ಆಕಾಶ್ ಮತ್ತು ಇಶಾ (30) ಹಾಗೂ ಕಿರಿಯ ಮಗ ಅನಂತ್ (26) ಅವರು ಇದರ ಮಂಡಳಿಯಲ್ಲಿ ಇರುತ್ತಾರೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ನವೆಂಬರ್‌ನಲ್ಲಿ ವರದಿ ಮಾಡಿತ್ತು.
ರಿಲಯನ್ಸ್‌ ನಾಯಕತ್ವ ಹಸ್ತಾಂತರ ಕುರಿತು ಮೊದಲ ಬಾರಿ ಹೇಳಿಕೆ ನೀಡಿದ ಮುಕೇಶ್‌ ಅಂಬಾನಿ!
ಹಾಲಿ ಇರುವ ತೈಲ ಸಂಸ್ಕರಣೆ ಮತ್ತು ಪೆಟ್ರೋ ಕೆಮಿಕಲ್ಸ್‌, ದೂರಸಂಪರ್ಕ ಹಾಗೂ ರೀಟೇಲ್ ಸಂಪತ್ತನ್ನು ವಿಭಜಿಸಿ, ಅವುಗಳನ್ನು ಕುಟುಂಬವು ಜತೆಯಾಗಿ ಅದರ ಕಾರ್ಯವೈಖರಿಯನ್ನು ನೋಡಿಕೊಳ್ಳುವುದು ಈಗಿರುವ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ರಿಲಯನ್ಸ್ ಪ್ರಸ್ತುತ ಯಾವುದೇ ಸಾಂಪ್ರದಾಯಿಕ ಇಂಧನ ಕಂಪೆನಿ ಈವರೆಗೂ ಪ್ರಯತ್ನಿಸದ ಸೌರಶಕ್ತಿ, ಬ್ಯಾಟರಿಗಳು ಮತ್ತು ಹೈಡ್ರೋಜನ್ ಸರಣಿಗಳಲ್ಲಿ ಭಾರಿ ಹೂಡಿಕೆ ಮಾಡುವ ಮೂಲಕ ಸ್ವಚ್ಛ ಇಂಧನಕ್ಕೆ ಹೊರಳುವ ಬೃಹತ್ ವೆಚ್ಚದ ನಡುವೆ ಇದೆ. ‘ಒಂದು ವೇಳೆ ರಿಲಯನ್ಸ್‌ ಇದರಲ್ಲಿ ಯಶಸ್ವಿಯಾದರೆ, ಮೌಲ್ಯ ಸೃಷ್ಟಿ ಹಾಗೂ ಗಳಿಕೆ ದೊಡ್ಡ ಮಟ್ಟದಲ್ಲಿ ಇರಲಿದೆ’ ಎಂದು ಸ್ಯಾನ್‌ಫೋರ್ಡ್ ಸಿ. ಬರ್ನ್‌ಸ್ಟೀನ್ ವಿಶ್ಲೇಷಕ ನೀಲ್ ಬೆವೆರಿಡ್ಜ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಮಹತ್ವಾಕಾಂಕ್ಷಿ ಯೋಜನೆಗೆ ಬಂಡವಾಳದ ವೆಚ್ಚ ಮುಖ್ಯ ಪಾತ್ರ ವಹಿಸಲಿದೆ. ರಿಫೈನಿಂಗ್‌ನಿಂದ ಬರುವ ಸ್ಥಿರ ನಗದಿನ ಹರಿವು, ರಿಲಯನ್ಸ್‌ ಅನ್ನು ದೇಶದ ಮುಂಚೂಣಿ ದೂರಸಂಪರ್ಕ ಕಂಪೆನಿಯಾಗಿ ಬೆಳೆಸುವುದು, ಡಿಜಿಟಲ್ ವ್ಯವಹಾರಗಳಿಂದ ಹಾಗೂ ರೀಟೇಲ್‌ನಿಂದ ಲಾಭ ಪಡೆಯುವುದು ಮುಂದಿನ ತಲೆಮಾರಿಗೆ ಅಂಬಾನಿ ಕುಟುಂಬದ ಸಾಂಪ್ರದಾಯಿಕ ಸಂಪತ್ತಿನ ಮೂಲವಾದ ಹೈಡ್ರೋಕಾರ್ಬನ್‌ಗಳನ್ನು ಮುಂದಿನ ದಶಕದಲ್ಲಿ ಗ್ರೀನ್ ಎನರ್ಜಿ ಮೂಲಕ ಬದಲಿಸುವುದು ಸಾಧ್ಯವಾಗಲಿದೆ.
ಅಂಬಾನಿಯ ಭವಿಷ್ಯದ ಬಿಗ್ ಪ್ಲ್ಯಾನ್!..ಇದು ಎಲೋನ್ ಮಸ್ಕ್ ಮೀರಿಸುವ ಐಡಿಯಾ!
ಮೊಬೈಲ್ ಇಂಟರ್ನೆಟ್, ರೀಟೇಲ್ ಮತ್ತು ಹೊಸ ಇಂಧನ- ಎಲ್ಲ ಮೂರೂ ಮೆಕ್‌ಕಿನ್ಸೆ ಆಂಡ್ ಕೋ ಗುರುತಿಸಿರುವಂತೆ ಯಶಸ್ಸಿನ ಪ್ರಬಲ ವಿಭಾಗಗಳಾಗಿವೆ. ಶೇ 10ರಷ್ಟು ಕಂಪೆನಿಗಳು ಇವುಗಳಲ್ಲಿ ಶೇ 80ರಷ್ಟು ಸಕಾರಾತ್ಮಕ ಆರ್ಥಿಕ ಲಾಭ ಪಡೆದುಕೊಳ್ಳುತ್ತಿವೆ.

ದೂರಸಂಪರ್ಕದಲ್ಲಿ ರಿಲಯನ್ಸ್‌ ಪ್ರಾಬಲ್ಯ ಬಹಳ ಸ್ಪಷ್ಟವಾಗಿ ಕಾಣಿಸುತ್ತಿದೆ. ಅಧಿಕ 4ಜಿ ಹೂಡಿಕೆ, ತೀವ್ರ ದರ ಸಮರ ಮತ್ತು ಸರ್ಕಾರ ವಿಪರೀತ ಬೇಡಿಕೆಗಳು ಭಾರತೀಯ ದೂರಸಂಪರ್ಕ ವಲಯದಲ್ಲಿನ ಬಂಡವಾಳ ವಾಪಸಾತಿಯನ್ನು ಕಳೆದ ಐದು ವರ್ಷಗಳಲ್ಲಿ ಶೇ 8ರಿಂದ ಶೇ 5ಕ್ಕೆ ಇಳಿಸಿವೆ. ಆಪರೇಟರ್‌ಗಳು ಟಾರಿಫ್ ದರ ಏರಿಕೆಯು ಉದ್ಯಮದ ವಾರ್ಷಿಕ ಸಂಪಾದನೆಯನ್ನು ಮಾರ್ಚ್ 2023ರ ವೇಳೆಗೆ 13 ಬಿಲಿಯನ್ ಡಾಲರ್‌ಗಿಂತಲೂ ಅಧಿಕ ಮಟ್ಟಕ್ಕೆ ಕೊಂಡೊಯ್ಯಲಿದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಕೂಡ ಪರಿಚಯಿಸುತ್ತಿರುವ ರಿಲಯನ್ಸ್‌, ಉಳದ ಎರಡು ಕಂಪೆನಿಗಳಿಗಿಂತ ಸುಧಾರಿತ ದರ ಹಾಗೂ ಡೇಟಾ ಬೇಡಿಕೆಯಲ್ಲಿನ ಸ್ಫೋಟಕ ಬೆಳವಣಿಗೆಯ ಲಾಭ ಪಡೆದುಕೊಳ್ಳುವ ಸ್ಥಿತಿಯಲ್ಲಿ ಇದೆ.

ರೀಟೇಲ್ ಉದ್ಯಮದಲ್ಲಿ ಲಾಭದಾಯಕತೆಯನ್ನು ನಿರ್ಧರಿಸುವುದು ಬಹಳ ಕಷ್ಟ. ವಿವಿಧ ಕಂಪೆನಿಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ರಿಲಯನ್ಸ್‌, ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದೆ. ದಿವಾಳಿಯಾಗಿರುವ ಫ್ಯೂಚರ್ ರೀಟೇಲ್ ಲಿ.ಯನ್ನು ಖರೀದಿಸುವ ಮೂಲಕ ಭಾರತದ ರೀಟೇಲ್ ವ್ಯವಹಾರದಲ್ಲಿ ಪ್ರಾಬಲ್ಯ ಮೆರೆಯುವ ಅಂಬಾನಿಯ ಉದ್ದೇಶಕ್ಕೆ ಹಿನ್ನಡೆಯಾಗಿದೆ. ಇಲ್ಲಿ ಅಮೇಜಾನ್ ಜತೆಗೆ ರಿಲಯನ್ಸ್‌ ಕಾನೂನು ಸಮರ ನಡೆಸಿದೆ.
ಮುಕೇಶ್‌ ಅಂಬಾನಿ ಸ್ಪೋರ್ಟ್ಸ್‌ ಚಾನಲ್‌ ಆರಂಭಿಸಲಿದ್ದಾರಾ? ಇಲ್ಲಿದೆ ಮಾಹಿತಿ!
ಇನ್ನು ನ್ಯೂ ಎನರ್ಜಿ ಕ್ಷೇತ್ರದಲ್ಲಿ ಅಂಬಾನಿಗೆ ಪ್ರತಿಸ್ಪರ್ಧಿಯಾಗಿರುವುದು ಗೌತಮ್ ಅದಾನಿ. 2030ರ ವೇಳೆಗೆ ಜಗತ್ತಿನ ಅತಿ ದೊಡ್ಡ ನವೀಕರಿಸುವ ಇಂಧನದ ಉತ್ಪಾದಕ ಎನಿಸಿಕೊಳ್ಳಲು ಅದಾನಿ ಬಯಸಿದ್ದಾರೆ. ಇದಕ್ಕಾಗಿ 70 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಅಂಬಾನಿ 10 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ಅವರು ಹೊಸ ಮಾರ್ಗಗಳನ್ನು ಕಂಡುಕೊಳ್ಳುವತ್ತ ಹೆಜ್ಜೆ ಇರಿಸಿದ್ದಾರೆ.



Read more

[wpas_products keywords=”deal of the day sale today offer all”]