ಹೈಲೈಟ್ಸ್:
- ವಾರಾಂತ್ಯ ಕರ್ಫ್ಯೂ, ಕಠಿಣ ನಿರ್ಬಂಧ
- ಜನಸಾಮಾನ್ಯರ ವಲಯದಿಂದ ವ್ಯಕ್ತವಾಗುತ್ತಿದೆ ವಿರೋಧ
- ನಿರ್ಬಂಧಗಳ ಬಗ್ಗೆ ಜನರು ಉದ್ಯಮಿಗಳು, ಜನರು ಏನಂತ್ತಾರೆ
“ವೀಕೆಂಡ್ ಕರ್ಫ್ಯೂ ಹಾಗೂ ಕಠಿಣ ನಿರ್ಬಂಧಗಳು ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈಗಾಗಲೇ ಎರಡು ಕೋವಿಡ್ ಅಲೆ, ಲಾಕ್‌ಡೌನ್‌ನಿಂದ ಜನರ ಬದುಕು ಜರ್ಜರಿತವಾಗಿದೆ. ಜನರು ಆರ್ಥಿಕ ಹಾಗೂ ಶೈಕ್ಷಣಿಕ ಕಾರಣಗಳಿಂದ ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗುತ್ತಾರೆ. ಈ ನಿಟ್ಟಿನಲ್ಲಿ ನಿರ್ಬಂಧ ವಾಪಸ್ ಪಡೆಯಬೇಕು. ಎರಡು ಡೋಸ್ ಲಸಿಕೆ ಪಡೆದವರಿಗೆ ಕೋವಿಡ್ ನಿಂದ ಜೀವಹಾನಿ ಇಲ್ಲ ಎಂದು ಸರ್ಕಾರವೇ ಹೇಳಿದೆ. ಹೀಗಿರುವಾಗ ಮತ್ತಷ್ಟು ನಿರ್ಬಂಧಗಳು ಏಕೆ? ಕಠಿಣ ನಿರ್ಬಂಧಗಳ ಮೂಲಕ ತಮ್ಮ ವೈಫಲ್ಯಗಳನ್ನು ಮರೆಮಾಚಲು ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶ ಸರ್ಕಾರಕ್ಕೆ ಇದೆ ಎಂದನಿಸುತ್ತಿದೆ” ಎನ್ನುತ್ತಾರೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ.
ಒಂದೇ ದಿನದಲ್ಲಿ ದೇಶದ ಕೋವಿಡ್ ಪ್ರಕರಣ ಶೇ 55ರಷ್ಟು ಹೆಚ್ಚಳ: 58,097 ಮಂದಿಗೆ ಸೋಂಕು
ಉದ್ಯಮ ವಲಯದಿಂದಲೂ ವಿರೋಧ
ಇನ್ನು ವೀಕೆಂಡ್ ಕರ್ಫ್ಯೂಗೆ ಉದ್ಯಮ ವಲಯದಿಂದಲೂ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಎರಡು ಲಾಕ್‌ಡೌನ್‌ನಿಂದ ವಿವಿಧ ಉದ್ಯಮ, ಟೂರಿಸಂ ವಲಯಗಳು ತತ್ತರಿಸಿವೆ. ಈ ನಿಟ್ಟಿನಲ್ಲಿ ಮತ್ತಷ್ಟು ನಿರ್ಬಂಧ ಬೇಡ ಎನ್ನುತ್ತಾರೆ ಉದ್ಯಮಿಗಳು. ಈ ಕುರಿತಾಗಿ ಮಾತನಾಡಿದ ಎಫ್‌ಕೆಸಿಸಿ ಅಧ್ಯಕ್ಷ ಐಎಸ್ ಪ್ರಸಾದ್ “ನಿರ್ಬಂಧದಿಂದ ಹೋಟೆಲ್, ಟೂರಿಸಂ ಉದ್ಯಮಕ್ಕೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿದೆ. ಸಿನಿಮಾ ಹಾಗೂ ಹೋಟೆಲ್ ಗಳಲ್ಲಿ ಐವತ್ತು ಶೇಕಡಾದಷ್ಟು ಕಾರ್ಯಾಚರಣೆಗೆ ಅನುಮತಿ ನೀಡಿರುವುದರಿಂದಲೂ ಆರ್ಥಿಕ ನಷ್ಟ ಉಂಟಾಗಲಿದೆ. ಉದ್ಯಮ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆಸ್ತಿ ತೆರಿಗೆ, ಪರವಾನಗಿ ಶುಲ್ಕದಲ್ಲೂ ಐವತ್ತು ಶೇಕಡಾ ರಿಯಾಯಿತಿ ನೀಡಲಿ” ಎಂದು ಮನವಿ ಮಾಡಿದರು.
ಜನಸಾಮಾನ್ಯರು ಏನಂತ್ತಾರೆ?
ಇನ್ನು ಜನಸಾಮಾನ್ಯರು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ಬಟ್ಟೆ ವ್ಯಾಪಾರಿಗಳು ವೀಕೆಂಡ್ ಕರ್ಫ್ಯೂಗೆ ಹಾಗೂ ಕಠಿಣ ನಿರ್ಬಂಧಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ಫ್ಯೂ ಹಾಗೂ 50-50 ರೂಲ್ಸ್‌ನಿಂದ ಬದುಕು ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.
“ಲಾಕ್‌ಡೌನ್, ಕರ್ಫ್ಯೂ, ಕೋವಿಡ್ ನಮ್ಮ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಸದ್ಯ ತಕ್ಕ ಮಟ್ಟಿಗೆ ಚೇತರಿಗೆ ಕಂಡುಕೊಳ್ಳುತ್ತಿದ್ದೇವೆ. ಇದೀಗ ಮತ್ತೆ ನಿರ್ಬಂಧಗಳನ್ನು ಜಾರಿಗೊಳಿಸಿದರೆ ಬದುಕು ಸಾಗಿಸುವುದು ಹೇಗೆ” ಎಂದು ಪ್ರಶ್ನಿಸುತ್ತಾರೆ ಆಟೋ ಚಾಲಕ ಪ್ರವೀಣ್ ಕುಮಾರ್
ಕೋವಿಡ್ ನಿಯಂತ್ರಣಕ್ಕೆ ಕೆಲವೊಂದು ನಿರ್ಬಂಧಗಳು ಅಗತ್ಯ ಹೌದು. ಆದರೆ ಲಸಿಕೆ ಪಡೆದುಕೊಂಡ ಬಳಿಕವೂ ಕಠಿಣ ನಿರ್ಬಂಧ ಜಾರಿಗೊಳಿಸಿದರೆ ಹೇಗೆ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿದೆ. ಒಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ, ಕಠಿಣ ನಿಯಮಾವಳಿಗಳಿಗೆ ಬಾರೀ ವಿರೋಧಗಳು ವ್ಯಕ್ತವಾಗುತ್ತಿವೆ. ಸದ್ಯ ಎರಡು ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಇದನ್ನು ಮತ್ತಷ್ಟು ಮುಂದುವರಿಸದಂತೆ ಹಾಗೂ ಪರ್ಯಾಯ ಕ್ರಮಗಳ ಮೂಲಕ ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.
Read more
[wpas_products keywords=”deal of the day sale today offer all”]