Karnataka news paper

ಗಾಯಕ ಸೋನು ನಿಗಮ್ ಮತ್ತು ಕುಟುಂಬಸ್ಥರಿಗೆ ಕೋವಿಡ್ ಸೋಂಕು ದೃಢ


ನವದೆಹಲಿ: ಖ್ಯಾತ ಗಾಯಕ ಸೋನು ನಿಗಮ್‌ ಮತ್ತು ಕುಟುಂಬಸ್ಥರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ‘ನಾನು ಸೇರಿದಂತೆ ಪತ್ನಿ ಮಧುರಿಮಾ ಮತ್ತು ಪುತ್ರ ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಸದ್ಯ ನಾವು ದುಬೈನಲ್ಲಿ ಇದ್ದೇವೆ’ ಎಂದು ಹೇಳಿಕೊಂಡಿದ್ದಾರೆ.

ಸೂಪರ್ ಸಿಂಗರ್ ಸೀಸನ್ –3  ಕಾರ್ಯಕ್ರಮದ ಅಂಗವಾಗಿ ಶೂಟಿಂಗ್‌ನಲ್ಲಿ ಭಾಗವಹಿಸಲು ಭಾರತಕ್ಕೆ ಬರಬೇಕಾಗಿತ್ತು. ಆದರೆ, ಕೋವಿಡ್ ಪರೀಕ್ಷೆಯ ವರದಿ ಪಾಸಿಟಿವ್‌ ಬಂದಿದ್ದು, ಸದ್ಯ ಪ್ರತ್ಯೇಕವಾಸದಲ್ಲಿ ಇರುವುದಾಗಿ ತಿಳಿಸಿದ್ದಾರೆ.

ಕೋವಿಡ್ ಮೂರನೇ ಅಲೆ ವೇಗವಾಗಿ ಹರಡುತ್ತಿದ್ದು, ಜನರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ಮನವಿ ಮಾಡಿದ್ದಾರೆ.

ಕೋವಿಡ್‌ನಿಂದಾಗಿ ಚಿತ್ರಮಂದಿರಗಳ ಮಾಲೀಕರು ಮತ್ತು ಚಿತ್ರ ನಿರ್ಮಾಪಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಒಳ್ಳೆಯ ದಿನಗಳು ಮರುಕಳಿಸಲಿವೆ ಎಂಬ ಭರವಸೆ ಇರಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ… 9,99,999ನೇ ಬಾರಿ ಕೋವಿಡ್ ಪರೀಕ್ಷೆ: ಸೋನು ನಿಗಮ್ ಪೋಸ್ಟ್ ವೈರಲ್!





Read More…Source link

[wpas_products keywords=”deal of the day party wear for men wedding shirt”]