ಹೈಲೈಟ್ಸ್:
- 3 ಟ್ರಿಲಿಯನ್ ಡಾಲರ್ ಮುಟ್ಟಿದ ಆ್ಯಪಲ್‌ನ ಬಂಡವಾಳ
- ಅಮೆರಿಕ, ಚೀನಾ, ಜಪಾನ್ ಹಾಗೂ ಜರ್ಮನಿಯ ಜಿಡಿಪಿಗಿಂತಲೂ ಇದು ಅಧಿಕ
- ಎರಡನೇ ಸ್ಥಾನದಲ್ಲಿರುವ ಮೈಕ್ರೋಸಾಫ್ಟ್, ಟಾಪ್-50ಯಲ್ಲಿ ಭಾರತದ ಕಂಪನಿಗಳಿಲ್ಲ
ಇದು ಆ್ಯಪಲ್‌ನ ಬಂಡವಾಳದ ಸಾರ್ವಕಾಲಿಕ ದಾಖಲೆಯೂ ಹೌದು. ಈ ದಾಖಲೆಯೊಂದಿಗೆ ಮೂರು ಟ್ರಿಲಿಯನ್ ಬಂಡವಾಳ ದಾಖಲಿಸಿದ ವಿಶ್ವದ ಮೊದಲ ಕಂಪನಿ ಎನ್ನುವ ಅಗ್ಗಳಿಕೆಗೆ ಆ್ಯಪಲ್ ಪಾತ್ರವಾಗಿದೆ.
ಸದ್ಯಕ್ಕೆ ಅತೀ ಹೆಚ್ಚು ಬಂಡವಾಳ ಇರುವ ಕಂಪನಿಯ ಸಾಲಲ್ಲಿ ಆ್ಯಪಲ್ ಮೊದಲ ಸ್ಥಾನದಲ್ಲಿದೆ. ಅನಂತರದ ಸ್ಥಾನದಲ್ಲಿ ಮೈಕ್ರೋಸಾಫ್ಟ್ ಇದ್ದು, ಅದರ ಬಂಡವಾಳ 2.5 ಟ್ರಿಲಿಯನ್ ಡಾಲರ್ ಇದೆ. ಮೂರನೇ ಸ್ಥಾನದಲ್ಲಿರುವ ಆಲ್ಫಾಬೆಟ್ (ಗೂಗಲ್) ಬಂಡವಾಳ 1.916 ಟ್ರಿಲಿಯನ್ ಡಾಲರ್ ಇದೆ.
ಏತನ್ಮಧ್ಯೆ 2020-21ನೇ ಹಣಕಾಸು ಅವಧಿಯಲ್ಲಿ ಭಾರತದ ಜಿಡಿಪಿ 197 ಲಕ್ಷ ಕೋಟಿ ಡಾಲರ್ ಇತ್ತು. ಇದು 2.7 ಟ್ರಿಲಿಯನ್ ಡಾಲರ್‌ಗೆ ಸಮ. ಅದರ್ಥ ಭಾರತದ ವಾರ್ಷಿಕ ಜಿಡಿಪಿಗಿಂತಲೂ ಆ್ಯಪಲ್‌ನ ಒಟ್ಟು ಬಂಡವಾಳ ಅಧಿಕ.
ಕೇವಲ ಮೂರು ವರ್ಷದಲ್ಲಿ ಆ್ಯಪಲ್‌ನ ಬಂಡವಾಳ ದುಪ್ಪಟ್ಟಾಗಿದ್ದು, ಇದು ಕೂಡ ದಾಖಲೆಯೇ. 2018ರ ಆಗಸ್ಟ್‌ನಲ್ಲಿ ಒಂದು ಟ್ರಿಲಿಯನ್ ಡಾಲರ್ ಬಂಡವಾಳದ ಗಡಿ ದಾಟಿದದ್ದ ಆ್ಯಪಲ್, 2020ರ ಆಗಸ್ಟ್‌ನಲ್ಲಿ ಎರಡು ಟ್ರಿಲಿಯನ್ ಡಾಲರ್ ಮೈಲಿಗಲ್ಲು ದಾಟಿತ್ತು. ಇದೀಗ ಮೂರು ಟ್ರಿಲಿಯನ್ ಡಾಲರ್ ದಾಟಿದ್ದು, ಇಡೀ ವಿಶ್ವ ಕಂಪನಿಗಳ ನೇತಾರ ಎಂದು ಆ್ಯಪಲ್ ಮತ್ತೆ ಸಾಬೀತು ಮಾಡಿದೆ.
ಸೌದಿಯ ಅರಾಮ್ಕೋ 1.894 ಟ್ರಿಲಿಯನ್ ಡಾಲರ್ ಬಂಡವಾಳ ಹೂಡುವ ಮೂಲಕ ನಾಲ್ಕನೇ ಸ್ಥಾನದಲ್ಲಿ ಇದ್ದರೇ, ಅನ್‌ಲೈನ್ ಶಾಪಿಂಗ್ ದೈತ್ಯ ಐದನೇ ಸ್ಥಾನದಲ್ಲಿದೆ. ಅದರ ಒಟ್ಟು ಬಂಡವಾ 1.699 ಟ್ರಿಲಿಯನ್ ಡಾಲರ್ ಇದೆ.
ಎಲಾನ್ ಮಸ್ಕ್ ಒಡೆತನದ ಟೆಸ್ಲಾದ ಬಂಡವಾಳ 1.154 ಟ್ರಿಲಿಯನ್ ಡಾಲರ್ ಇದ್ದು, ಬಂಡವಾಳ ಹೂಡಿಕೆಯಲ್ಲಿ ಜಾಗತಿಕವಾಗಿ ಆರನೇ ಸ್ಥಾನದಲ್ಲಿದೆ. ಏಳನೇ ಸ್ಥಾನದಲ್ಲಿರುವ ಮೆಟಾ (ಫೇಸ್‌ಬುಕ್)ದ ಬಂಡವಾಳ 936.14 ಬಿಲಿಯನ್ ಡಾಲರ್ ಇದೆ.
ಅತೀ ಹೆಚ್ಚು ಬಂಡವಾಳ ಇರುವ ಟಾಪ್- 50 ಕಂಪನಿಗಳ ಲಿಸ್ಟ್‌ನಲ್ಲಿ ಭಾರತದ ಯಾವುದೇ ಕಂಪನಿಗಳಿಲ್ಲ.
Read more
[wpas_products keywords=”deal of the day sale today offer all”]