Karnataka news paper

ಶಾರ್ದುಲ್‌ ಠಾಕೂರ್‌ಗೆ ನನ್ನ ಹೃದಯಲ್ಲಿ ವಿಶೇಷ ಸ್ಥಾನವಿದೆ ಎಂದ ಕಾರ್ತಿಕ್‌!


ಹೈಲೈಟ್ಸ್‌:

  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿ.
  • ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ 7 ವಿಕೆಟ್‌ ಕಿತ್ತ ಶಾರ್ದುಲ್‌.
  • ಶಾರ್ದುಲ್‌ ಬೌಲಿಂಗ್ ಸಹಾಯದಿಂದ ಎರಡನೇ ದಿನ ಮೇಲುಗೈ ಸಾಧಿಸಿರುವ ಭಾರತ.

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ವೃತ್ತಿ ಜೀವನದ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ತೋರಿದ ಶಾರ್ದುಲ್‌ ಠಾಕೂರ್‌(61ಕ್ಕೆ 7) ಅವರನ್ನು ವಿಶ್ವದಾದ್ಯಂತ ಕ್ರಿಕೆಟ್‌ ದಿಗ್ಗಜರು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಇದೀಗ ಇವರ ಸಾಲಿಗೆ ದಿನೇಶ್‌ ಕಾರ್ತಿಕ್‌ ಸೇರ್ಪಡೆಯಾಗಿದ್ದಾರೆ.

ಮಂಗಳವಾರ ಬೆಳಗ್ಗೆ ಇಲ್ಲಿನ ದಿ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 35 ರನ್‌ಗಳಿಂದ ಪ್ರಥಮ ಇನಿಂಗ್ಸ್‌ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡದ ಪರ ಬ್ಯಾಟಿಂಗ್‌ಗೆ ಇಳಿದ ಡೀನ್‌ ಎಲ್ಗರ್‌ ಹಾಗೂ ಕೀಗನ್‌ ಪೀಟರ್ಸನ್‌ ಜೋಡಿ 74 ರನ್‌ಗಳ ಜೊತೆಯಾಟವಾಡಿತ್ತು. ಆ ಮೂಲಕ ಆತಿಥೇಯರಿಗೆ ಭರ್ಜರಿ ಆರಂಭ ತಂದುಕೊಟ್ಟಿದ್ದರು.

ಒಂದು ಹಂತದಲ್ಲಿ ಈ ಜೋಡಿಯನ್ನು ಬೇರ್ಪಡಿಸಲು ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್‌ ಶಮಿ ಹಾಗೂ ಮೊಹಮ್ಮದ್‌ ಸಿರಾಜ್‌ ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಈ ವೇಳೆ ಚೆಂಡು ಕೈಗೆತ್ತಿಕೊಂಡ ಶಾರ್ದುಲ್‌ ಠಾಕೂರ್‌, ಡೀನ್‌ ಎಲ್ಗರ್‌(28), ಕೀಗನ್‌ ಪೀಟರ್ಸನ್‌(62) ಹಾಗೂ ರಾಸಿ ವ್ಯಾನ್‌ ಡೆರ್‌ ಡುಸೆನ್‌(1) ಅವರ ವಿಕೆಟ್‌ಗಳನ್ನು ಉರುಳಿಸುವಲ್ಲಿ ಸಫಲರಾದರು. ಆ ಮೂಲಕ ಭಾರತದ ಕಮ್‌ಬ್ಯಾಕ್ ನೆರವಾದರು.

ಭಾರತ Vs ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್‌ ಸ್ಕೋರ್‌ಕಾರ್ಡ್

ನಂತರ ಅದೇ ಬೌಲಿಂಗ್ ಪ್ರದರ್ಶನ ಮುಂದುವರಿಸಿದ ಶಾರ್ದುಲ್‌ ಠಾಕೂರ್‌, ಕೈಲ್ ವೆರ್ರೆನ್(21), ತೆಂಬಾ ಬವೂಮ(51), ಮಾರ್ಕೊ ಯೆನ್ಸನ್‌(21), ಲುಂಗಿ ಎನ್ಗಿಡಿ(0) ಅವರನ್ನು ಔಟ್‌ ಮಾಡಿದರು. ಆ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಮೊದಲ ಭಾರತೀಯ ಬೌಲರ್‌ ಎನಿಸಿಕೊಂಡರು.

ಇದರೊಂದಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಂತ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ತೋರಿದ ಭಾರತದ ಮೊದಲ ಬೌಲರ್‌ ಎಂಬ ಸಾಧನೆಗೆ ಶಾರ್ದುಲ್‌ ಠಾಕೂರ್‌(61ಕ್ಕೆ 7) ಭಾಜನರಾದರು. ಆ ಮೂಲಕ ಹಿರಿಯ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌(66ಕ್ಕೆ 7) ಅವರ ದಾಖಲೆಯನ್ನು ಪುಡಿ-ಪುಡಿ ಮಾಡಿದರು.

‘ಇವರು ನನಗೆ ಎರಡನೇ ಪೋಷಕರು’ ಬಾಲ್ಯದ ಕೋಚ್‌ ಸಹಾಯ ನೆನೆದ ಶಾರ್ದುಲ್!

ಕ್ರಿಕ್‌ಬಝ್‌ ಜೊತೆ ದಕ್ಷಿಣ ಆಫ್ರಿಕಾ ದಿಗ್ಗಜ ಶಾನ್‌ ಪೊಲಾಕ್‌ ಅವರು ಜೊತೆ ಮಾತನಾಡಿದ ದಿನೇಶ್‌ ಕಾರ್ತಿಕ್‌, ಶಾರ್ದುಲ್‌ ಠಾಕೂರ್ ಅವರು ದೇಶಿ ಕ್ರಿಕೆಟ್‌ನಿಂದ ಟೀಮ್‌ ಇಂಡಿಯಾಗೆ ಬೆಳೆದು ಬಂದ ಹಾದಿ ಸೇರಿದಂತೆ ಹಲವು ಸಂಗತಿಗಳನ್ನು ಹಂಚಿಕೊಂಡರು ಹಾಗೂ ತಮ್ಮ ಹೃದಯದಲ್ಲಿ ಶಾರ್ದುಲ್‌ಗೆ ವಿಶೇಷ ಸ್ಥಾನ ನೀಡುವುದಾಗಿದೆ ಹೇಳಿದರು.

“ಮುಂಬೈ ಪರ 60 ರಿಂದ 70 ಪಂದ್ಯಗಳಾಡಿರುವ ಶಾರ್ದುಲ್ ಠಾಕೂರ್‌ಗೆ ನಾನು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ನೀಡುತ್ತೇನೆ. ಅವರು ದೇಶಿ ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಮೂರನೇ ಬೌಲರ್‌ ಆಗಿ ಮುಂಬೈ ಪರ ಆಡಿದ್ದ ಠಾಕೂರ್‌, ನಂತರ ಧವಳ್‌ ಕುಲಕರ್ಣಿ ಅವರನ್ನೊಳಗೊಂಡ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ್ದರು,” ಎಂದು ಗುಣಗಾನ ಮಾಡಿದರು.

ಆಫ್ರಿಕಾ 229ಕ್ಕೆ ಆಲ್‌ಔಟ್‌, ಭಾರತಕ್ಕೆ ಪೂಜಾರ-ರಹಾನೆ ಆಸರೆ!

“ಯಾವುದೇ ಪಂದ್ಯದಲ್ಲಿ ಜೊತೆಯಾಟವನ್ನು ಮುರಿಯಬಲ್ಲ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಅದರಂತೆ ಇಂದು(ಮಂಗಳವಾರ) ದಕ್ಷಿಣ ಆಫ್ರಿಕಾ ವಿರುದ್ಧ ಮಾಡಿದ್ದಾರೆ. ಮೈದಾನದಲ್ಲಿ ಅವರ ವರ್ತನೆ ಕೂಡ ವಿಭಿನ್ನವಾಗಿರುತ್ತದೆ. ಶಾರ್ದುಲ್‌ ಠಾಕೂರ್ ಅವರ ಕೌಶಲ ನೋಡಿ, ಬುಮ್ರಾ ಅಥವಾ ಶಮಿ ಅವರಿಗಿಂತ ವಿಭಿನ್ನವಾಗಿದ್ದಾರೆ. ಶಾರ್ದುಲ್‌ ಆತ್ಮ ವಿಶ್ವಾಸದಲ್ಲಿ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ,” ಎಂದು ದಿನೇಶ್‌ ಕಾರ್ತಿಕ್‌ ಶ್ಲಾಘಿಸಿದರು.

ಪೆವಿಲಿಯನ್‌ಗೆ ತೆರಳುತ್ತಿದ್ದ ರಾಹುಲ್‌ ಜೊತೆ ಎಲ್ಗರ್‌ ಕಿರಿಕ್‌! ವಿಡಿಯೋ



Read more

[wpas_products keywords=”deal of the day gym”]