ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದ ಬ್ಯಾಟರ್ ಅಭಿನವ್ ಮನೋಹರ್ ಅವರಿಗೆ ಕೋವಿಡ್ –19 ಖಚಿತವಾಗಿದ್ದರಿಂದ ಮಂಗಳವಾರದ ಅಭ್ಯಾಸವನ್ನು ಮೊಟಕುಗೊಳಿಸಲಾಯಿತು.
ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗಾಗಿ ಆಯ್ಕೆಯಾಗಿದ್ದ 28 ಆಟಗಾರರ ಸಂಭವನೀಯ ತಂಡದಲ್ಲಿ ಮನೋಹರ್ ಕೂಡ ಇದ್ದರು. ಐಎಎಫ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆದಿತ್ತು. ಬೆಂಗಳೂರಿನ ಮನೋಹರ್ ಈಚೆಗೆ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಐಪಿಎಲ್ ಫ್ರ್ಯಾಂಚೈಸಿಗಳ ಆಯ್ಕೆ ಪ್ರಕ್ರಿಯೆಗಳಲ್ಲಿಯೂ ಭಾಗವಹಿಸಿದ್ದರು ಎನ್ನಲಾಗಿದೆ.
ಕಳೆದ ಭಾನುವಾರದಿಂದ ಆರಂಭವಾಗಿದ್ದ ರಾಜ್ಯ ತಂಡದ ಕಂಡಿಷನಿಂಗ್ ಶಿಬಿರದಲ್ಲಿ ಅವರು ಭಾಗವಹಿಸಿದ್ದರು. ಮಂಗಳವಾರ ತಡರಾತ್ರಿ ಬಂದ ವರದಿಗಯಲ್ಲಿ ಅವರಿಗೆ ಕೋವಿಡ್ ಇರುವುದು ಖಚಿತವಾಗಿತ್ತು. ಇದೇ ಸಂದರ್ಭದಲ್ಲಿ ತಂಡದ ಮಸಾಜ್ ಪರಿಣತ ಸಿ.ಎಂ. ಸೋಮಸುಂದರ್ ಅವರಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
‘ಮನೋಹರ್‌ಗೆ ಕೋವಿಡ್ ಖಚಿತವಾಗಿದೆ. ಆದ್ದರಿಂದ ಅಭ್ಯಾಸ ಶಿಬಿರವನ್ನು ಸ್ಥಗಿತಗೊಳಿಸಿ ಎಲ್ಲರನ್ನೂ ಪರೀಕ್ಷೆಗೊಳಪಡಿಸಲಾಯಿತು. ಕೆಎಸ್‌ಸಿಎ ಸಿಬ್ಬಂದಿ, ಅಧಿಕಾರಿಗಳೆಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಬುಧವಾರ ಫಲಿತಾಂಶಗಳು ಬರಲಿವೆ. ಈ ತಿಂಗಳು 13ರಂದು ಆರಂಭವಾಗಬೇಕಿದ್ದ ರಣಜಿ ಟ್ರೋಫಿ ಟೂರ್ನಿಯನ್ನು ಮುಂದೂಡಿರುವುದರಿಂದ ತರಬೇತಿ ಶಿಬಿರಗಳನ್ನೂ ನಿಲ್ಲಿಸಲಾಗಿದೆ’ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ‘ಪ್ರಜಾವಾಣಿ’ಗೆ ತಿಳಿಸಿದರು.
ಕೋವಿಡ್: ರಾಜ್ಯದಾದ್ಯಂತ ವಾರಾಂತ್ಯದ ಕರ್ಫ್ಯೂ, ಸಭೆ– ರ್ಯಾಲಿಗಳಿಗೆ ನಿರ್ಬಂಧ
Read more from source
[wpas_products keywords=”deal of the day sale today kitchen”]