Karnataka news paper

ನನಗೂ ವೀಳ್ಯದೆಲೆ ಕೊಟ್ಟು ಆಹ್ವಾನ ಮಾಡುತ್ತಿರಲಿಲ್ಲ: ಡಿಕೆ ಸುರೇಶ್ ವಿರುದ್ಧ ಪ್ರೀತಂ ಗೌಡ ಕಿಡಿ


| Lipi | Updated: Jan 5, 2022, 9:07 AM

ಒಂದೂವರೆ ವರ್ಷ ಸಮ್ಮಿಶ್ರ ಸರ್ಕಾರ ಇತ್ತು. ನನ್ನನ್ನು ಕರೆಯುತ್ತಿರಲಿಲ್ಲ. ನಾನು ಸ್ಟೇಜ್ ಮೇಲೆ ಹೋಗಿ ಕೂಗಾಡಿದ್ನಾ? ನನಗೇನು ಕೂಗಾಡಲು ಬರಲ್ವಾ. ನನ್ನ ಹತ್ರ ಹಾಸನದಲ್ಲಿ ಜನ ಇಲ್ವಾ. ನಾನು ಆ ರೀತಿ ಮಾಡಿದ್ನಾ. ಸಮಾಧಾನವಾಗಿಯೇ ಇದ್ದೆ ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಸಂಸದ ಡಿಕೆ ಸುರೇಶ್ ವಿರುದ್ಧ ಹರಿಹಾಯ್ದಿದ್ದಾರೆ.

 

ನನಗೂ ವೀಳ್ಯದೆಲೆ ಕೊಟ್ಟು ಆಹ್ವಾನ ಮಾಡುತ್ತಿರಲಿಲ್ಲ: ಡಿಕೆ ಸುರೇಶ್ ವಿರುದ್ಧ ಪ್ರೀತಂ ಗೌಡ ಕಿಡಿ

ಹೈಲೈಟ್ಸ್‌:

  • ಸಂಸದ ಡಿಕೆ ಸುರೇಶ್ ನಡವಳಿಕೆಯನ್ನು ಇಡೀ ರಾಜ್ಯದ ಜನತೆ ಖಂಡಿಸುತ್ತಿದ್ದಾರೆ
  • ಒಂದೂವರೆ ವರ್ಷ ಸಮ್ಮಿಶ್ರ ಸರ್ಕಾರ ಇದ್ದಾಗ ನನಗೂ ಆಹ್ವಾನ ನೀಡುತ್ತಿರಲಿಲ್ಲ
  • ಸಾವಿರ ಜನರನ್ನು ಕರೆದುಕೊಂಡು ಬಂದು ದಿಕ್ಕಾರ ಕೂಗಿಸುವುದು ಸಭ್ಯತೆಯಲ್ಲ

ಹಾಸನ: ನಮಗೂ 14 ತಿಂಗಳು ಸರ್ಕಾರವಿರಲಿಲ್ಲ. ಕಾರ್ಯಕ್ರಮಕ್ಕೆ ಬರಬೇಕೆಂದು ನಮಗೂ ಯಾರು ವೀಳ್ಯದೆಲೆ ಕೊಟ್ಟು ಕರೆಯುತ್ತಿರಲಿಲ್ಲ. ಆದ್ರೆ ಸೋಮವಾರ ರಾಮನಗರದಲ್ಲಿ ಸಂಸದ ಡಿಕೆ ಸುರೇಶ್ ನಡವಳಿಕೆ ಏನೆಂಬುದನ್ನು ಇಡೀ ರಾಜ್ಯದ ಜನತೆ ನೋಡಿದ್ದಾರೆ. ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ. ಅಲ್ಲಿ ಪಾಳೇಗಾರರ ಸಂಸ್ಕೃತಿ ನಡೆಯೊಲ್ಲ. ಇನ್ಮುಂದೆ ಅವರ ನಡವಳಿಕೆಯನ್ನು ತಿದ್ದಿಕೊಳ್ಳಬೇಕು ಎಂದು ಶಾಸಕ ಪ್ರೀತಂಗೌಡ ಖಾರವಾಗಿ ನುಡಿದರು.

ಸೋಮವಾರ ನಡೆದ ಘಟನೆಯನ್ನು ಖಂಡಿಸಿ ಮಂಗಳವಾರ ಹಾಸನದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಬೃಹತ್ ಪ್ರತಿಭಟನೆ ಮಾಡಿ ಬಳಿಕ ಅವರು ಮಾತನಾಡಿದರು. ಕ್ಯಾಬಿನೆಟ್ ಮಂತ್ರಿ ಭಾಷಣ ಮಾಡುವಾಗ ಪಾಳೇಗಾರರ ಸಂಸ್ಕೃತಿಯಲ್ಲಿ ಜಗಳಕ್ಕೆ ಹೋಗಿದ್ದಾರೆ. ಸಂಸದ ಡಿ.ಕೆ. ಸುರೇಶ್ ನಡವಳಿಕೆಯನ್ನು ಇಡೀ ರಾಜ್ಯದ ಜನತೆ ಖಂಡಿಸುತ್ತಿದ್ದಾರೆ. ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ. ಅಲ್ಲಿ ಪಾಳೇಗಾರರ ಸಂಸ್ಕೃತಿ ನಡೆಯುತ್ತಿಲ್ಲ. ಇನ್ಮುಂದೆ ಅವರ ನಡವಳಿಕೆಯನ್ನು ತಿದ್ದಿಕೊಳ್ಳಬೇಕು. ಇಡೀ ರಾಜಕಾರಣಿಗಳು ತಲೆ ತಗ್ಗಿಸುವ ಕೆಲಸವನ್ನು ರಾಮನಗರದಲ್ಲಿ ಮಾಡಿದ್ದಾರೆ ಎಂದು ಕಿಡಿಕಾರಿದರು.
‘ನಾನು ಕೆಂಪೇಗೌಡರ ಊರಿನವನು ಮಿ. ಶಿವಕುಮಾರ್‌ ನಿಮ್ಮ ಗೂಂಡಾಗಿರಿ ಬಿಟ್ಟು ಬಿಡಿ’
ರಾಜ್ಯಾದ್ಯಂತ ಅಶ್ವತ್ಥನಾರಾಯಣ ಅವರನ್ನು ಬೆಂಬಲಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಮಾಫಿಯಾ ಆಫ್ ರಾಮನಗರ ಖಂಡಿಸುತ್ತೇವೆ. ಅವರು ಮಾಡುತ್ತಿರುವುದು ಅವರ ಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡಂತೆ. ಕಾರ್ಯಕ್ರಮಕ್ಕೆ ಡಿ.ಕೆ ಸುರೇಶ್ ಅವರಿಗೆ ಡೋಲ್ ಸೆಟ್ಟು ಇಟ್ಟು ಆಹ್ವಾನ ಕೊಡಲು ಆಗಲ್ಲ. ಡಿಸಿಯಿಂದ ಸಮಸ್ಯೆ ಆಗಿದ್ದರೆ ಹಕ್ಕುಚ್ಯುತಿ ಮಂಡಿಸಲಿ. ಸಾವಿರ ಜನ ಕರೆದುಕೊಂಡು ಬಂದು ಧಿಕ್ಕಾರ ಕೂಗುವುದು ಸಭ್ಯತೆಯಲ್ಲ. ಒಂದೂವರೆ ವರ್ಷ ಸಮ್ಮಿಶ್ರ ಸರ್ಕಾರ ಇತ್ತು. ನನ್ನನ್ನು ಕರೆಯುತ್ತಿರಲಿಲ್ಲ. ನಾನು ಸ್ಟೇಜ್ ಮೇಲೆ ಹೋಗಿ ಕೂಗಾಡಿದ್ನಾ? ನನಗೇನು ಕೂಗಾಡಲು ಬರಲ್ವಾ. ನನ್ನ ಹತ್ರ ಹಾಸನದಲ್ಲಿ ಜನ ಇಲ್ವಾ. ನಾನು ಆ ರೀತಿ ಮಾಡಿದ್ನಾ. ಸಮಾಧಾನವಾಗಿಯೇ ಇದ್ದೆ. ರಾಜಕೀಯ ಬಂದಾಗ ರಾಜಕೀಯ ಮಾಡೋಣ ಎಂದು ಹೇಳಿದರು.
ಬಿಜೆಪಿಯವರು ರಾಜ್ಯಾದ್ಯಂತ ಅಲ್ಲ.. ದೇಶಾದ್ಯಂತ ಹೋರಾಟ ಮಾಡಲಿ: ಡಿಕೆ ಶಿವಕುಮಾರ್‌
ಮುಂದಿನ ಚುನಾವಣೆಯಲ್ಲಿ ಹಾಸನದಲ್ಲಿ ಏಳಕ್ಕೆ ಏಳು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕಳೆದ ಬಾರಿ ಯಾರೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದರೋ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೋ ಅವರು ಏಳಕ್ಕೆ ಏಳು ಕಾಂಗ್ರೆಸ್ ಗೆಲ್ಲುತ್ತದೆ ಎಂದಿದ್ದರು. ಏಳು ಮಕಾಡೆ ಮಲಗಿ, ಹೇಳಿದವರು ಸೋತರು ಎಂದು ಮಾಜಿ ಸಚಿವ ಎ. ಮಂಜು ವಿರುದ್ಧ ಕುಟುಕಿದರು.

224 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ನಾನು ಹೇಳುತ್ತೇನೆ. ಮೈಕ್ ಮುಂದೆ ಹೇಳುವುದೇ ಬೇರೆ ರಾಜಕೀಯವೇ ಬೇರೆ. ಮತಗಳೇನು ಅವರ ಜೇಬಿನಲ್ಲಿ ಇರಲ್ಲ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಪ್ರೀತಂ ಗೌಡ ಟಾಂಗ್ ನೀಡಿದರು.

ಸಮೀಪದ ನಗರಗಳ ಸುದ್ದಿ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ

Web Title : i wasn’t invited for government programs during coalition government hasan mla preetham gowda slams dk suresh
Kannada News from Vijaya Karnataka, TIL Network



Read more

[wpas_products keywords=”deal of the day sale today offer all”]