Karnataka news paper

ಕೋವಿಡ್ ಲಸಿಕೆ: 9 ಜಿಲ್ಲೆಗಳಲ್ಲಿ ಶೇ 100 ಸಾಧನೆ


ಬೆಂಗಳೂರು: ಕೋವಿಡ್ ಲಸಿಕೆಯ ಮೊದಲ ಡೋಸ್ ವಿತರಣೆಯಲ್ಲಿ ಶೇ 100 ರಷ್ಟು ಸಾಧನೆ ಮಾಡಿದ ರಾಜ್ಯದ ಜಿಲ್ಲೆಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ರಾಜ್ಯದ ಒಟ್ಟಾರೆ ಸಾಧನೆ ಶೇ 97 ರಷ್ಟಿದೆ. 

ರಾಜ್ಯದಲ್ಲಿ 2021ರ ಜ.16ರಿಂದ ಲಸಿಕೆ ವಿತರಿಸಲಾಗುತ್ತಿದೆ. ಆರೋಗ್ಯ ಇಲಾಖೆಯು 18 ವರ್ಷಗಳು ಮೇಲ್ಪಟ್ಟ 4.89 ಕೋಟಿ ಮಂದಿಗೆ ಲಸಿಕೆ ಹಾಕುವ ಗುರಿ ಹಾಕಿಕೊಂಡಿದೆ. ಅವರಲ್ಲಿ 4.76 ಕೋಟಿ ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 

ಬೆಂಗಳೂರು ನಗರ (ಶೇ 129), ಗದಗ (ಶೇ 102), ವಿಜಯಪುರ (ಶೇ 102), ಬೀದರ್ (ಶೇ 101) ಹಾಗೂ ಬಾಗಲಕೋಟೆ (ಶೇ 100) ಜಿಲ್ಲೆ ಮೊದಲ ಡೋಸ್ ವಿತರಣೆಯಲ್ಲಿ ಮುಂಚೂಣಿಯಲ್ಲಿ ಇವೆ. ಧಾರವಾಡ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಕೊಡಗಿನಲ್ಲಿ ಶೇ 100 ರಷ್ಟು ಗುರಿ ತಲುಪಲಾಗಿದೆ. ದಾವಣಗೆರೆ, ಬೆಳಗಾವಿ ಹಾಗೂ ಹಾಸನದಲ್ಲಿ ಶೇ 99 ರಷ್ಟು ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 

ಲಸಿಕೆಯ ಮೊದಲ ಡೋಸ್ ವಿತರಣೆಯಲ್ಲಿ ಬಿಬಿಎಂಪಿ (ಶೇ 92) ಕಡೆಯ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯೂ (ಶೇ 95ಕ್ಕಿಂತ ಕಡಿಮೆ) ಹಿಂದೆ ಬಿದ್ದಿದೆ. 

 



Read more from source

[wpas_products keywords=”deal of the day sale today kitchen”]