The New Indian Express
ಪಣಜಿ: ಗೋವಾದಲ್ಲಿ ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ 2 ಸಾವಿರ ಪ್ರಯಾಣಿಕರ ಪೈಕಿ 66 ಮಂದಿಯಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಈ ಕ್ರೂಸ್ ಹಡಗು ಮುಂಬೈಯಿಂದ ಗೋವಾಕ್ಕೆ ಬರುತಿತ್ತು ಎಂದು ಅಲ್ಲಿನ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸೋಮವಾರ ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಹೈ ಪ್ರೊಫೈಲ್ ರೇವ್ ಪಾರ್ಟಿಯಿಂದ ಸುದ್ದಿಯಾಗಿದ್ದ ಈ ಕ್ರೂಸ್ ಲೈನರ್, ಹೊಸ ವರ್ಷಕ್ಕಾಗಿ ಮೋಜು ಮಾಡುವವರನ್ನು ಕರೆದೊಯ್ಯುತಿತ್ತು ಎನ್ನಲಾಗಿದೆ. ಪಿಪಿಇ ಕಿಟ್ ಧರಿಸಿ ಬಂದ ವೈದ್ಯಕೀಯ ತಂಡವೊಂದು ಪ್ರಯಾಣಿಕರು ಹಾಗೂ ಕ್ರೂಸ್ ಸಿಬ್ಬಂದಿಗೆ ಆರ್ ಟಿ- ಪಿಸಿಆರ್ ಪರೀಕ್ಷೆ ನಡೆಸಿದ್ದು, ಸೋಮವಾರ ಮಧ್ಯಾಹ್ನದವರೆಗೂ ಸ್ಯಾಂಪಲ್ ಗಳ ಪರೀಕ್ಷೆ ಪ್ರಕ್ರಿಯೆ ನಡೆದಿದೆ.
ಭಾನುವಾರ ಕ್ರೂಸ್ ಸಿಬ್ಬಂದಿಗೆ ಸೋಂಕು ಪತ್ತೆಯಾದ ನಂತರ ಹಡಗಿನಲ್ಲಿದ್ದ ಎಲ್ಲಾ ಪ್ರಯಾಣಿಕರಿಗೂ ಪರೀಕ್ಷೆ ಮಾಡುವುದು ಅಗತ್ಯವಾಗಿತ್ತು. ಆರ್ ಟಿ-ಪಿಸಿಆರ್ ಟೆಸ್ಟ್ ಮುಗಿಯುವವರೆಗೂ ಯಾವೊಬ್ಬ ಪ್ರಯಾಣಿಕರು ಹಡಗಿನಿಂದ ಇಳಿಯದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾಗಿ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ಟ್ವೀಟ್ ಮಾಡಿರುವ ರಾಣೆ, ಕಾರ್ಡೆಲಿಯಾ ಕ್ರೂಸ್ ನಲ್ಲಿದ್ದ 2000 ಪ್ರಯಾಣಿಕರು ಸ್ಯಾಂಪಲ್ ಗಳ ಪರೀಕ್ಷೆಯಲ್ಲಿ 66 ಪ್ರಯಾಣಿಕರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
Read more
[wpas_products keywords=”deal of the day”]