Karnataka news paper

ಗರುಡಾ ಮಾಲ್‌ ಬಳಿ ಅಪಘಾತ: ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವು


ಬೆಂಗಳೂರು: ಬೈಕ್‌ಗೆ ಟಿಪ್ಪರ್‌ ಡಿಕ್ಕಿಯಾಗಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಸಂಜನಾ ಪ್ರಿಯಾ (21) ಮೃತಪಟ್ಟಿದ್ದಾರೆ. ಅಶೋಕನಗರ ಸಂಚಾರಿ ಠಾಣೆ ಪೊಲೀಸರು ಚಾಲಕನನ್ನು ಬಂಧಿಸಿದ್ದು, ಟಿಪ್ಪರ್‌ ಜಪ್ತಿ ಮಾಡಿದ್ದಾರೆ.

‘ರಾಮಸ್ವಾಮಿ ಪಾಳ್ಯ (ಆರ್‌.ಎಸ್‌.ಪಾಳ್ಯ) ನಿವಾಸಿಯಾಗಿರುವ ಸಂಜನಾ, ಸೋದರ ಸಂಬಂಧಿ ವಿನಯ್‌ಕುಮಾರ್‌ ಜೊತೆ  ಜಯನಗರದಲ್ಲಿರುವ ಸಂಬಂಧಿಯೊಬ್ಬರ ಮನೆಗೆ ತೆರಳುತ್ತಿದ್ದರು. ಅವರ ಮುಂಬದಿಯಲ್ಲಿದ್ದ ಟಿಪ್ಪರ್‌ ವಾಹನ ರಸ್ತೆಯ ಬಲ ಪಥದಲ್ಲಿ ಸಾಗುತ್ತಿತ್ತು. ಅದು ನೇರವಾಗಿ ಚಲಿಸಬಹುದೆಂದು ಭಾವಿಸಿದ್ದ ವಿನಯ್‌, ಅದನ್ನು ಹಿಂಬಾಲಿಸಿದ್ದರು. ಆದರೆ, ಟಿಪ್ಪರ್‌ ಚಾಲಕ ಏಕಾಏಕಿಯಾಗಿ ಎಡ ತಿರುವು ಪಡೆದಿದ್ದ. ಹೀಗಾಗಿ ಅಪಘಾತ ಸಂಭವಿಸಿದೆ. ವಿನಯ್‌ ದೂರಿನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

‘ಬೆಳಿಗ್ಗೆ 7 ಗಂಟೆ ಸುಮಾರಿಗೆ ಗರುಡಾ ಮಾಲ್‌ ಬಳಿ ಅಪಘಾತ ನಡೆ‌ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಂಜನಾ, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. ವಿನಯ್‌ ಕೈಗೆ ಪೆಟ್ಟಾಗಿದ್ದು, ಅವರು ಚೇತರಿಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.



Read more from source

[wpas_products keywords=”deal of the day sale today kitchen”]