ಹೈಲೈಟ್ಸ್:
- ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಲ
- ಅಮೆರಿಕದಿಂದ ಅತ್ಯಾಧುನಿಕ 500 ಸಿಗ್ ಸೌರ್-716 ರೈಫಲ್ ಖರೀದಿ
- ಪೊಲೀಸರಿಗೆ 100 ಸಿಗ್ ಸೌರ್ ಎಂಪಿಎಕ್ಸ್ 9 ಎಂಎಂ ಪಿಸ್ತೂಲುಗಳು
- ಭಾರತೀಯ ಸೇನೆಗೂ ಅತ್ಯಾಧುನಿಕ ರೈಫಲ್‌ಗಳ ಖರೀದಿ ಒಪ್ಪಂದ
”ಅಮೆರಿಕದಿಂದ ಅತ್ಯಾಧುನಿಕ 500 ಸಿಗ್ ಸೌರ್-716 ರೈಫಲ್ ಹಾಗೂ 100 ಸಿಗ್ ಸೌರ್ ಎಂಪಿಎಕ್ಸ್ 9 ಎಂಎಂ ಪಿಸ್ತೂಲುಗಳ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಇವು ಪೊಲೀಸರಿಗೆ ಲಭ್ಯವಾಗಲಿವೆ. ದೇಶದಲ್ಲೇ ಮೊದಲ ಬಾರಿಗೆ ಪೊಲೀಸರಿಗೆ ಅತ್ಯಾಧುನಿಕ ರೈಫಲ್ ಹಾಗೂ ಪಿಸ್ತೂಲುಗಳು ಸಿಕ್ಕಂತಾಗಲಿದೆ,” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಕಣಿವೆ ರಾಜ್ಯದಲ್ಲಿ ಉಗ್ರರ ಬೇಟೆ..! ಲಷ್ಕರ್ ಉಗ್ರ ನಾಯಕ ಸೇರಿದಂತೆ ಇಬ್ಬರ ಹತ್ಯೆ..!
ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ಹಾಗೂ ಗಣ್ಯರ ರಕ್ಷಣೆಗೆ ನಿಯೋಜಿಸಲಾಗಿರುವ ಸಿಬ್ಬಂದಿಗೆ ಆಧುನಿಕ ಶಸ್ತ್ರಾಸ್ತ್ರ ನೀಡಲಾಗುತ್ತದೆ. ಸರಕಾರಿ ಇ-ಮಾರುಕಟ್ಟೆ ಮೂಲಕ ನಡೆಸಿದ ಜಾಗತಿಕ ಟೆಂಡರ್‌ನಲ್ಲಿ ಅಮೆರಿಕವು ಅತ್ಯಾಧುನಿಕ ಶಸ್ತ್ರಾಸ್ತ್ರ ಪೂರೈಸುವ ಬಿಡ್ ಪಡೆದುಕೊಂಡಿತ್ತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಭಾರತೀಯ ಸೇನೆ ಸಹ ಅಮೆರಿಕದಿಂದ ಖರೀದಿ ಅಸಾಲ್ಟ್ ರೈಫಲ್ ಹಾಗೂ ಬಂದೂಕುಗಳ ಖರೀದಿಗೆ ಮುಂದಾಗಿದೆ. 2019ರಲ್ಲಿ ಸಿಗ್ ಸೌರ್ ಮಾದರಿಯ 72,400 ರೈಫಲ್‌ಗಳ ಖರೀದಿಗೆ 700 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
‘ಡೆಡ್ ಬಾಡಿ ತೆಗೆದುಕೊಂಡು ಹೋಗಿ’: ಪಾಕಿಸ್ತಾನಕ್ಕೆ ಭಾರತೀಯ ಸೇನೆ ಸೂಚನೆ!
ಈ ರೈಫಲ್‌ಗಳ ವಿಶೇಷವೇನು?
ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸುವ ಸಿಗ್ ಸೌರ್-716 ರೈಫಲ್‌ಗಳು 7.62/51 ಎಂಎಂ (ಐಎನ್‌ಎಸ್‌ಎಎಸ್ ರೈಫಲ್‌ಗಳು 5.56/45 ಎಂಎಂ ಹಾಗೂ 4.01 ಕೆಜಿ ತೂಕ) ಕಾಟ್ರಿಜ್‌ಗಳನ್ನು ಹೊಂದಿವೆ. ನಿಮಿಷಕ್ಕೆ 650-850 ಸುತ್ತಿನ ಗುಂಡು ಹಾರಿಸುವ ಸಾಮರ್ಥ್ಯ ಹೊಂದಿದ್ದು, 500 ಮೀಟರ್ ವ್ಯಾಪ್ತಿಯ ಗುರಿಗಳನ್ನು ಹೊಡೆದುರುಳಿಸಲಿವೆ. ಮ್ಯಾಗಜಿನ್ ಇಲ್ಲದೆ 3.82 ಕೆಜಿ ತೂಕ ಹೊಂದಿವೆ. ಹಾಗೆಯೇ, ಸಿಗ್ ಎಂಪಿಎಕ್ಸ್ 9 ಎಂಎಂ ಬಂದೂಕುಗಳು ನಿಮಿಷಕ್ಕೆ 850 ಸುತ್ತು ಗುಂಡು ಹಾರಿಸ ಬಹುದಾಗಿದ್ದು, 2.94 ಕೆಜಿ ತೂಕ ಹೊಂದಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ನಿವಾರಿಸುವಲ್ಲಿ ಪೊಲೀಸ್ ಇಲಾಖೆ ಮಹತ್ವದ ಪಾತ್ರ ವಹಿಸುತ್ತಿದೆ. ಭಾರತೀಯ ಸೇನೆಯ ವಿವಿಧ ಪಡೆಗಳ ಜತೆಗೆ ಪೊಲೀಸರು ಜಂಟಿ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸುವುದು ಅಗತ್ಯವಾಗಿದೆ.

Read more
[wpas_products keywords=”deal of the day sale today offer all”]