Karnataka news paper

ಕೋವ್ಯಾಕ್ಸಿನ್ ಲಸಿಕೆಗಳ ನವೀಕರಿಸಿದ ಎಕ್ಸ್ಪೈರಿ ಡೇಟ್ ವಿವಾದ: ಕೇಂದ್ರದ ಸ್ಪಷ್ಟನೆ


The New Indian Express

ನವದೆಹಲಿ: ಸೋಮವಾರದಿಂದ 15 ರಿಂದ 17 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ಆರಂಭವಾಗಿದ್ದು, ಕೋವಾಕ್ಸಿನ್ ಲಸಿಕೆಗಳ ನವೀಕರಿಸಿದ ಎಕ್ಸ್ಪೈರಿ ಡೇಟ್ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು.

ಸದ್ಯ ದೇಶದಲ್ಲಿ ವಯಸ್ಕರಿಗೆ ಭಾರತ್ ಬಯೋಟೆಕ್ ಕಂಪನಿ ತಯಾರಿಸಿರುವ ಕೋವಾಕ್ಸಿನ್ ಲಸಿಕೆಯನ್ನು ಮಾತ್ರ ನೀಡಲಾಗುತ್ತಿದೆ. ಲಸಿಕೆ ಆರಂಭವಾದಾಗಿನಿಂದ ಇಲ್ಲಿಯವರೆಗೂ  ಸುಮಾರು 3.78 ಲಕ್ಷ  ವ್ಯಾಕ್ಸಿನೇಷನ್ ಹಾಕಲಾಗಿದೆ ಎಂಬ ವರದಿ ಬಂದಿದೆ. 

ಹಿಂದಿನ ವಾರವೇ ಅವಧಿ ಮುಗಿದಿದೆ ಎಂದು ಬಾಟಲಿಗಳಲ್ಲಿ ತೋರಿಸುತ್ತಿರುವ ಕೋವಾಕ್ಸಿನ್ ಲಸಿಕೆಯನ್ನು ತಮ್ಮ ಮಕ್ಕಳಿಗೆ ನೀಡಲಾಗುತ್ತಿದೆ ಎಂದು ಹಲವು ಮಂದಿ ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದರು. ಆದರೆ, ಆಸ್ಪತ್ರೆಗಳು ಪ್ರತ್ಯೇಕ ಹಾಳೆಯೊಂದರಲ್ಲಿ ನವೀಕರಿಸಿದ ಎಕ್ಸ್ಪೈರಿ ಡೇಟ್ ತೋರಿಸುತ್ತಿವೆ.

ಈ ಆರೋಪ ಕುರಿತಂತೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಇದು ಸುಳ್ಳು, ಪೂರ್ಣ ಮಾಹಿತಿ ಇಲ್ಲದೆ ದಾರಿ ತಪ್ಪಿಸಲಾಗುತ್ತಿದೆ ಎಂದು ಹೇಳಿದೆ.  9 ರಿಂದ 12 ತಿಂಗಳ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ ನೀಡಲು ಕಳೆದ ವರ್ಷ ಅಕ್ಟೋಬರ್ 25 ರಂದು ಕೇಂದ್ರಿಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಅನುಮೋದನೆ ನೀಡಿತ್ತು ಎಂದು  ಸಚಿವಾಲಯ ತಿಳಿಸಿದೆ.





Read more

[wpas_products keywords=”deal of the day”]