Karnataka news paper

ಭಾರತೀಯ ವಾಸ್ತುಶಿಲ್ಪ ತಜ್ಞ ಬಾಲಕೃಷ್ಣ ದೋಶಿಗೆ ಪ್ರತಿಷ್ಠಿತ ಜಾಗತಿಕ ಪ್ರಶಸ್ತಿ


Source : PTI

ಲಂಡನ್: ಖ್ಯಾತ ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರು ವಾಸ್ತುಶಿಲ್ಪಕ್ಕಾಗಿ ವಿಶ್ವದ ಅತ್ಯುನ್ನತ ಗೌರವಗಳಲ್ಲಿ ಒಂದಾದ ರಾಯಲ್ ಗೋಲ್ಡ್ ಮೆಡಲ್ 2022 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್(RIBA) ಪ್ರಕಟಿಸಿದೆ.

70 ವರ್ಷಗಳ ವೃತ್ತಿಜೀವನ ಮತ್ತು 100ಕ್ಕೂ ಹೆಚ್ಚು ವಾಸ್ತು ರಚನೆಗಳ ನಿರ್ಮಾಣದೊಂದಿಗೆ, 94 ವರ್ಷದ ದೋಷಿ ಅವರು ತಮ್ಮ ವಾಸ್ತುಶಿಲ್ಪ ಮತ್ತು ಬೋಧನೆಗಳ ಮೂಲಕ ಭಾರತ ಹಾಗೂ ಇತರೆ ದೇಶಗಳಲ್ಲಿನ ವಾಸ್ತುಶಿಲ್ಪದ ದಿಕ್ಕಿನ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಗುರುವಾರ ಆರ್ ಐಬಿಎ ತಿಳಿಸಿದೆ.

ಇದನ್ನು ಓದಿ: ಭಾರತದ ಮಹಾನ್ ವಾಸ್ತುಶಿಲ್ಪತಜ್ಞ ಬಾಲಕೃಷ್ಣ ದೋಶಿಗೆ ವಾಸ್ತುಶಿಲ್ಪ ನೋಬೆಲ್ ಪುರಸ್ಕಾರ

ದೋಶಿ ಅವರ ಜೀವಮಾನದ ಸಾಧನೆಯನ್ನು ಗುರುತಿಸಿ, ರಾಯಲ್ ಗೋಲ್ಡ್ ಮೆಡಲ್ ಅನ್ನು ರಾಣಿ ಎಲಿಜೆಬ್ತ್ II ವೈಯಕ್ತಿಕವಾಗಿ ಅನುಮೋದಿಸಿದ್ದಾರೆ ಮತ್ತು ಈ ಪ್ರಶಸ್ತಿಯನ್ನು ವಾಸ್ತುಶಿಲ್ಪದ ಪ್ರಗತಿಯ ಮೇಲೆ ಮಹತ್ವದ ಪ್ರಭಾವ ಬೀರಿದ ವ್ಯಕ್ತಿ ಅಥವಾ ಜನರ ಗುಂಪಿಗೆ ನೀಡಲಾಗುತ್ತದೆ.

“ಇಂಗ್ಲೆಂಡ್ ರಾಣಿಯಿಂದ ರಾಯಲ್ ಗೋಲ್ಡ್ ಮೆಡಲ್ ಸ್ವೀಕರಿಸಲು ನನಗೆ ತುಂಬಾ ಖುಷಿಯಾಗುತ್ತಿದೆ ಮತ್ತು ಆಶ್ಚರ್ಯವೂ ಆಗಿದೆ. ಇದು ಅತ್ಯಂತ ದೊಡ್ಡ ಗೌರವ” ಎಂದು ತಮ್ಮ ದೊಡ್ಡ ಗೆಲುವಿನ ಬಗ್ಗೆ ದೋಷಿ ಹೇಳಿದ್ದಾರೆ.

ದೋಶಿ ಮಹಾರಾಷ್ಟ್ರದ ಪುಣೆ ಮೂಲದ ವಾಸ್ತುಶಾಸ್ತ್ರಜ್ಞರಾಗಿದ್ದಾರೆ. ಜೆಫಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನ ಹಳೆ ವಿದ್ಯಾರ್ಥಿಯಾಗಿರುವ ದೋಶಿ 1950ರಲ್ಲಿ ಪ್ಯಾರೀಸ್ ನಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು.



Read more

Leave a Reply

Your email address will not be published. Required fields are marked *