PTI
ಪಣಜಿ: ಗೋವಾದಲ್ಲಿ ಸೋಮವಾರ 631 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವ್ ದರ ಶೇಕಡಾ 16 ರಿಂದ 26.43 ಕ್ಕೆ ಜಿಗಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಓಮಿಕ್ರಾನ್ ಭೀತಿ ನಡುವೆ ದೇಶದಲ್ಲಿ ಕೋವಿಡ್ ಸೋಂಕು ಉಲ್ಬಣ: 37,379 ಹೊಸ ಸೋಂಕು ಪ್ರಕರಣಗಳು ವರದಿ
ಭಾನುವಾರ, ಗೋವಾದಲ್ಲಿ COVID-19 ಪಾಸಿಟಿವಿಟಿ ದರ ಶೇ. 10.7 ರಷ್ಟು ಇತ್ತು ಮತ್ತು 388 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಹೊಸ ಸೋಂಕಿನೊಂದಿಗೆ, ಗೋವಾದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,82,201ಕ್ಕೆ ಏರಿದೆ.
ಇದನ್ನು ಓದಿ: ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 1892ಕ್ಕೆ ಏರಿಕೆ; ಮಹಾರಾಷ್ಟ್ರದಲ್ಲೇ ಗರಿಷ್ಠ
ಗೋವಾದಲ್ಲಿ ಸೋಮವಾರ ನಾಲ್ವರಿಗೆ ಕೋವಿಡ್ ಹೊಸ ರೂಪಾಂತರಿ ಓಮಿಕ್ರಾನ್ ದೃಢಪಟ್ಟಿದ್ದು, ಇದರೊಂದಿಗೆ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಪಾಸಿಟಿವ್ ದರ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಜನವರಿ 26 ರವರೆಗೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲು ನಿರ್ಧರಿಸಿದೆ. ಅಲ್ಲದೆ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
Read more
[wpas_products keywords=”deal of the day”]