Karnataka news paper

ನನ್ನ ಕನಸಿನಲ್ಲಿ ಶ್ರೀ ಕೃಷ್ಣ ಬಂದು, ಮುಂದಿನ ಸಲ ನಿಮ್ಮ ಸರ್ಕಾರ ರಚನೆ ಅಂತ ಹೇಳಿದ್ರೂ: ಅಖಿಲೇಶ್ ಯಾದವ್


PTI

ಲಖನೌ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೂ ಮುನ್ನ ನಾಯಕರ ನಡುವಿನ ಮಾತಿನ ಚಕಮಕಿ ತೀವ್ರಗೊಂಡಿದೆ. ಚುನಾವಣಾ ಪ್ರಚಾರದ ನಡುವೆಯೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನನ್ನ ಕನಸಿನಲ್ಲಿಯೂ ಶ್ರೀ ಕೃಷ್ಣ ಪರಮಾತ್ಮ ಬರುತ್ತಾನೆ ಎಂದು ಹೇಳಿದ್ದಾರೆ. 

ಬಿಜೆಪಿ ರಾಜ್ಯಸಭಾ ಸದಸ್ಯ ಹರನಾಥ್ ಸಿಂಗ್ ಯಾದವ್, ಶ್ರೀಕೃಷ್ಣ ನನ್ನ ಕನಸಿನಲ್ಲಿ ಬಂದು ಯೋಗಿ ಆದಿತ್ಯನಾಥ್ ಅವರನ್ನು ನನ್ನ ಜನ್ಮಭೂಮಿ  ಮಥುರಾದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿಕೊಂಡರು ಎಂದು ಹೇಳಿದ್ದರು. ಏತನ್ಮಧ್ಯೆ, ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶ್ರೀಕೃಷ್ಣ ಜೀ ಅವರು ಕನಸಿನಲ್ಲಿಯೂ ಬರುತ್ತಾರೆ. ಬಂದು ನಿಮ್ಮ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದರು ಎಂದು ಅಖಿಲೇಶ್ ಹೇಳಿದ್ದಾರೆ. 

ವಾಸ್ತವವಾಗಿ, ಬಿಜೆಪಿಯ ರಾಜ್ಯಸಭಾ ಸದಸ್ಯ ಹರನಾಥ್ ಸಿಂಗ್ ಯಾದವ್ ಅವರು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರ ಬರೆದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಥುರಾದಿಂದ ಸ್ಪರ್ಧಿಸಬೇಕೆಂದು ಒತ್ತಾಯಿಸಿದರು. 

ಇದನ್ನೂ ಓದಿ: ಹಸಿವಿನ ಸೂಚ್ಯಂಕ, ರೈತರ ಆತ್ಮಹತ್ಯೆಯಲ್ಲಿ ಉತ್ತರ ಪ್ರದೇಶ ನಂಬರ್ 1: ಬಿಜೆಪಿ ವಿರುದ್ಧ ಅಖಿಲೇಶ್ ವಾಗ್ದಾಳಿ

ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದ ಮತದಾರರು ಯೋಗಿ ಜೀ ತಮ್ಮಿಂದ ಗೆಲ್ಲಬೇಕು ಎಂದು ಬಯಸುತ್ತಿದ್ದರೂ, ಬ್ರಜಕ್ಷೇತ್ರದ ಜನರಿಗೆ ಯೋಗಿಜಿ ಅವರು ಶ್ರೀಕೃಷ್ಣನ ನಗರವಾದ ಮಥುರಾದಿಂದ ಸ್ಪರ್ಧಿಸಬೇಕು ಎಂಬ ವಿಶೇಷ ಆಸೆಯನ್ನು ಹೊಂದಿದ್ದಾರೆ. ಶ್ರೀಕೃಷ್ಣನ ಪ್ರೇರಣೆಯಿಂದ ಮಾತ್ರ ಈ ಪತ್ರ ಕಳುಹಿಸುತ್ತಿದ್ದೇನೆ ಎಂದು ರಾಜ್ಯಸಭಾ ಸದಸ್ಯರು ಬರೆದುಕೊಂಡಿದ್ದರು.

ಇದಕ್ಕೆ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಶ್ರೀಕೃಷ್ಣ ನನ್ನ ಕನಸಿನಲ್ಲಿ ಸಮಾಜವಾದಿ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದರು ಎಂದರು. ಇನ್ನು ಬಿಜೆಪಿಯ ಜನ ವಿಶ್ವಾಸ ಯಾತ್ರೆಗೆ ವ್ಯಂಗ್ಯವಾಡಿದ ಅಖಿಲೇಶ್, ನಾನು ಹಲವು ಸ್ಥಳಗಳ ಚಿತ್ರವನ್ನು ನೋಡಿದ್ದೇನೆ. ಬಿಜೆಪಿಯ ಜನ ವಿಶ್ವಾಸ ಯಾತ್ರೆಗಿಂತ ಚೌಮೇನ್ ಗಾಡಿಗಳು ಹೆಚ್ಚು ಜನಸಂದಣಿಯಿಂದ ಕೂಡಿವೆ ಎಂದು ಹೇಳಿದರು.



Read more

[wpas_products keywords=”deal of the day”]