Karnataka news paper

ಉಚಿತವಾಗಿ ನಿಮ್ಮ CIBIL ಸ್ಕೋರ್ ತಿಳಿಯುವುದು ಹೇಗೆ ಗೊತ್ತಾ?


ಕೊಡುವ

ಹೌದು, ಯಾರಾದರೂ ಸಾಲ/ಲೋನ್‌ಗಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನು ಸಂಪರ್ಕಿಸಿದಾಗ, ಸಾಲ ಕೊಡುವ ಸಂಸ್ಥೆ, ಮೊದಲು ಅರ್ಜಿದಾರರ ಸಿಬಿಲ್ ಸ್ಕೋರ್ ಪರಿಶೀಲಿಸುತ್ತಾರೆ. ಒಂದು ವೇಳೆ ಅರ್ಜಿದಾರರ ಸಿಬಿಲ್ ಸ್ಕೋರ್ ಕಡಿಮೆ ಇದ್ದರೇ, ಬ್ಯಾಂಕ್ ಅರ್ಜಿಯನ್ನು ಪರಿಗಣಿಸದೇ ಇರಬಹುದು. ಹೀಗಾಗಿ ಸುಲಭವಾಗಿ ಸಾಲ ಪಡೆಯಲು ಸಿಬಿಲ್ ಸ್ಕೋರ್ ರೇಟಿಂಗ್ ಅತ್ಯುತ್ತಮ ಆಗಿರುವುದು ಅಗತ್ಯ ಆಗಿದೆ. ಹಾಗಾದರೇ ಸಿಬಿಲ್ ಸ್ಕೋರ್ ಅನ್ನು ತಿಳಿಯೋದು ಹೇಗೆ?..ಎನ್ನುವ ಕುರಿತು ಇನ್ನಷ್ಟು ಮಾಹಿತಿ ಮುಂದೆ ತಿಳಿಯುವುದು ಉತ್ತಮ.

ಏನಿದು ಸಿಬಿಲ್ ಸ್ಕೋರ್?

ಏನಿದು ಸಿಬಿಲ್ ಸ್ಕೋರ್?

ಸಿಬಿಲ್ ಸ್ಕೋರ್ ಸಾಲ ಪಡೆದ ವ್ಯಕ್ತಿಯ ಸಾಲದ ಇತಿಹಾಸ ಎನ್ನಬಹುದಾಗಿದೆ. ಈ ವರದಿಯ 3 ಅಂಕಿಯ ಸಂಖ್ಯಾತ್ಮಕ ಸಾರಾಂಶವಾಗಿದೆ. ಸಿಬಿಲ್ ಸ್ಕೋರ್ ರೇಟಿಂಗ್ 300 ರಿಂದ 900 ರವರೆಗೆ ಇರುತ್ತದೆ. ಸಿಬಿಲ್ ಸ್ಕೋರ್ 900 ಕ್ಕೆ ಹತ್ತಿರವಾಗಿದ್ದರೆ, ಕ್ರೆಡಿಟ್ ರೇಟಿಂಗ್ ಉತ್ತಮವಾಗಿದೆ ಎಂದರ್ಥ.

ಉಚಿತವಾಗಿ ಸಿಬಿಲ್ ಸ್ಕೋರ್ ಪರಿಶೀಲಿಸುವುದು ಹೇಗೆ?

ಉಚಿತವಾಗಿ ಸಿಬಿಲ್ ಸ್ಕೋರ್ ಪರಿಶೀಲಿಸುವುದು ಹೇಗೆ?

ಸಿಬಿಲ್ (CIBIL- Credit Information Bureau India Limited) ಕಂಪನಿ ಹಾಗೂ ವ್ಯಕ್ತಿಗಳ ಎಲ್ಲ ಸಾಲಗಳಿಗೆ ಸಂಬಂಧಿಸದ ಚಟುವಟಿಕೆಗಳ ದಾಖಲೆಗಳನ್ನು ನಿರ್ವಹಿಸುತ್ತದೆ. ಈ ಸಂಸ್ಥೆಯ ಮೂಲಕ ಸಿಬಿಲ್ ಸ್ಕೋರ್ ಪರಿಶೀಲನೆ ಮಾಡಿಕೊಳ್ಳುಬಹುದು.

ಸಿಬಿಲ್ ಸ್ಕೋರ್ ತಿಳಿಯಲು ಈ ಕ್ರಮ ಅನುಸರಿಸಿ:

ಸಿಬಿಲ್ ಸ್ಕೋರ್ ತಿಳಿಯಲು ಈ ಕ್ರಮ ಅನುಸರಿಸಿ:

* ಅಧಿಕೃತ ವೆಬ್ ಸೈಟ್ CIBIL (https://www.cibil.com/) ಮತ್ತು ಬಲ ಭಾಗದ ತುದಿಯಲ್ಲಿ “Get your CIBIL Score” ಎಂಬುದರ ಮೇಲೆ ಕ್ಲಿಕ್ ಮಾಡಿ.

* ಈಗ ಸಬ್ ಸ್ಕ್ರಿಪ್ಷನ್ ಆಯ್ಕೆ ತೆರೆದುಕೊಳ್ಳುತ್ತದೆ. ಅಲ್ಲಿ ‘Free Annual CIBIL Score and Report Online’ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

* ಖಾತೆ ತೆರೆಯುವ ಸಲುವಾಗಿ ನಿಮ್ಮ ಇಮೇಲ್ ID, ಹೆಸರು, ಪಾಸ್ ವರ್ಡ್, ಐಡಿ ದೃಢೀಕರಣ (ಪ್ಯಾನ್ ಕಾರ್ಡ್, ಮತದಾನ ಗುರುತಿನ ಚೀಟಿ, ಆಧಾರ್), ಜನ್ಮ ದಿನಾಂಕ, ಪಿನ್ ಕೋಡ್ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು.

ನಂತರ

* ಒಂದು ಸಲ ಈ ಮಾಹಿತಿ ತುಂಬಿದ ನಂತರ ‘ACCEPT ಮತ್ತು CONTINUE’ ಮೇಲೆ ಕ್ಲಿಕ್ ಮಾಡಿ.

* ಮುಂದಿನ ಪುಟದಲ್ಲಿ ಮಾಹಿತಿಯನ್ನು ಖಾತ್ರಿ ಪಡಿಸಲು ಮೊಬೈಲ್ ಮೂಲಕ ಬರುವ OTP ಯನ್ನು ನಮೂದಿಸಬೇಕು.

* ‘Continue’ ಎಂಬುದರ ಮೇಲೆ ಕ್ಲಿಕ್ ಮಾಡಬೇಕು ಹಾಗೂ ಯಶಸ್ವಿಯಾಗಿ ನೋಂದಣಿ ಮಾಡಿದ ಮೇಲೆ ಮೇಲ್ ಐಡಿಗೆ ಮಾಹಿತಿ ಬರುತ್ತದೆ.

* ‘GO TO DASHBOARD’ ಕ್ಲಿಕ್ ಮಾಡಿದರೆ CIBIL ಸ್ಕೋರ್ ಪರಿಶೀಲಿಸಬಹುದು. * ಈಗ (myscore.cibil.com) ನಿಮ್ಮ CIBIL ಸ್ಕೋರ್ ಮತ್ತು CIBIL ವರದಿಗಳನ್ನು ಉಚಿತವಾಗಿ ಪರಿಶೀಲಿಸುವ ಪುಟಕ್ಕೆ ತೆರಳುತ್ತೀರಿ.

ಬಳಬಹುದು

ಒಂದು ಸಲ ನೋಂದಣಿ ಪ್ರಕ್ರಿಯೆ ಸಂಪೂರ್ಣ ಆದ ಮೇಲೆ ಖಾತೆಯ ಮಾಹಿತಿ ಬಳಸಿ ನಿಮ್ಮ CIBIL ಸ್ಕೋರ್ ಮಾಹಿತಿ ಪರಿಶೀಲಿಸಬಹುದು. ಅದಕ್ಕಾಗಿ ಇಮೇಲ್ ಹಾಗೂ ಪಾಸ್ ವರ್ಡ್ ಬಳಬಹುದು. ಅದಕ್ಕಾಗಿ ವೆಬ್ ಸೈಟ್: https://myscore.cibil.com/ ಭೇಟಿ ನೀಡ್ ಮತ್ತು ‘Member Login’ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.



Read more…