Karnataka news paper

ಆರ್ಥಿಕತೆಯ ಕುಂಠಿತಕ್ಕೆ ಲಾಕ್‌ಡೌನ್ ಕಾರಣ, ಕಠಿಣ ನಿರ್ಬಂಧಗಳು ಬೇಡ: ಕಾಸಿಯಾ


Online Desk

ಬೆಂಗಳೂರು: ಪ್ರತಿದಿನ ಹೆಚ್ಚುತ್ತಿರುವ ಕೊರೋನಾ ವೈರಸ್ ಪ್ರಕರಣಗಳಿಂದಾಗಿ ರಾಜ್ಯ ಸರ್ಕಾರ ಲಾಕ್‌ಡೌನ್ ಅಥವಾ ಇತರ ಕಠಿಣ ಕ್ರಮಗಳ ರೂಪದಲ್ಲಿ ಯಾವುದೇ ರೀತಿಯ ಪ್ರಕ್ರಿಯೆ ಕೈಗೊಳ್ಳಬಾರದು ಎಂದು ಕೈಗಾರಿಕೋದ್ಕಾಯಮಿಗಳ ಸಂಘದ ಒಕ್ಕೂಟ-ಕಾಸಿಯಾ ಹೇಳಿದೆ.

ಈ ಕುರಿತು ಇಂದು ಕಾಸಿಯಾ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆ ನೀಡಿದ್ದು, ಸಾಂಕ್ರಾಮಿಕ ರೋಗದ ಮೊದಲ ಮತ್ತು ಎರಡನೆಯ ಅಲೆಯ ಬಿಕ್ಕಟ್ಟಿನ ಸಮಯದಲ್ಲಿ ಘೋಷಿಸಲಾದ ಲಾಕ್‌ಡೌನ್‌ಗಳ ವಿನಾಶಕಾರಿ ಪರಿಣಾಮಗಳಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಇನ್ನೂ ಆರ್ಥಿಕವಾಗಿ ಚೇತರಿಸಿಕೊಂಡಿಲ್ಲ.  ಮತ್ತೆ ಲಾಕ್ ಡೌನ್ ಘೋಷಿಸಿದಲ್ಲಿ ಬಹುತೇಕ ಉದ್ದಿಮೆದಾರರು ಅಭಿಪ್ರಾಯಪಟ್ಟಂತೆ ಉದ್ಯಮಗಳ ಅಸ್ಥಿತ್ವ ವಿಶೇಷವಾಗಿ ಸೂಕ್ಷ ಮತ್ತು ಸಣ್ಣ ಕೈಗಾರಿಕೆಗಳ ಅಸ್ಥಿತ್ವ ಏನಾಗಬಹುದು ಎಂಬ ಬಗ್ಗೆ ಚಿಂತೆ ಉಂಟಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳ: ಒಮಿಕ್ರಾನ್ ಎಫೆಕ್ಟ್ ಶಂಕೆ

ಕೈಗಾರಿಕೆಗಳನ್ನು ಮತ್ತು ಕಚ್ಚಾ ಸಾಮಗ್ರಿಗಳ ಮಳಿಗೆಗಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಮುಚ್ಚುವ ಮತ್ತು ಕೈಗಾರಿಕೆಗಳಿಗೆ ಕೈಗಾರಿಕಾ ಆಮ್ಲಜನಕದ ಪೂರೈಕೆಯನ್ನು ಕಡಿಮೆ ಮಾಡುವ ಬದಲು ಅಗತ್ಯ ಶಿಷ್ಟಾಚಾರಗಳನ್ನು ಅನುಸರಿಸಿ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸಾಮೂಹಿಕ ಸಭೆಗಳನ್ನು ನಡೆಸುವ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರು ಮುಖಗವುಸುಗಳನ್ನು ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಗಮನಹರಿಸಬೇಕು ಎಂದು ಕಾಸಿಯಾ ಸಲಹೆ ಮಾಡಿದೆ. ಕೋವಿಡ್ ಸಾಂಕ್ರಮಿಕ ಸಂಬಂಧ ಸರ್ಕಾರವು ಘೋಷಿಸಿದ ಶಿಷ್ಟಾಚಾರಗಳನ್ನು ಸೂಕ್ಷ್ಮವಾಗಿ ಅನುಸರಿಸಲು ತನ್ನ ಸದಸ್ಯ-ಘಟಕಗಳು ಮತ್ತು ಎಂ.ಎಸ್.ಎಂ.ಇ. ಗಳಿಗೆ ಸೂಚಿಸುವುದಾಗಿ ಕಾಸಿಯಾ ಪುನರುಚ್ಚರಿಸಿದೆ.

ಹಿಂದಿನ ಲಾಕ್ ಡೌನ್ ಪರಿಣಾಮದಿಂದ ಈಗಾಗಲೇ ಸಾಕಷ್ಟು ಉದ್ಯಮಗಳು ಶಾಶ್ವತವಾಗಿ ಮುಚ್ಚಿವೆ. ಇಂತಹ ಸಮಯದಲ್ಲಿ ಮತ್ತೊಂದು ಲಾಕ್ ಡೌನ್ ಘೋಷಿಸಿದಲ್ಲಿ ಮತ್ತಷ್ಟು ಉದ್ಯಮಗಳು ಶಾಶ್ವತವಾಗಿ ಮುಚ್ಚಲು ಕಾರಣವಾಗುತ್ತದೆ. ಏಕೆಂದರೆ ಉತ್ಪಾದನೆಯನ್ನು ದೀರ್ಘಕಾಲದ ವರೆಗೆ ಸ್ಥಗಿತಗೊಳಿಸುವುದರಿಂದ ಬದುಕುಳಿಯಲು ಕಷ್ಟಸಾಧ್ಯವಾಗುವುದು. ಪೂರೈಕೆ ಸರಪಳಿಗಳ ಕೊಂಡಿಗಳು ಕಳಚಿಕೊಳ್ಳಲಿರುವುದರಿಂದ ಉದ್ಯಮಗಳು ವಿಶೇಷವಾಗಿ ಎಸ್.ಎಂ.ಇ.ಗಳು ಸಂಪೂರ್ಣವಾಗಿ ನಾಶವಾಗುವುದಲ್ಲದೆ ಕಾರ್ಮಿಕರು ಶಾಶ್ವತವಾಗಿ ಉದ್ಯೋಗ ಕಳೆದುಕೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆ ಉಂಟಾಗುತ್ತದೆ. ಯಾವುದೇ ಸಮಯದಲ್ಲಿ ಆರ್ಥಿಕತೆಯ ಕುಸಿತ ಮರುಕಳಿಸಬಹುದು ಎಂದು ಕಾಸಿಯಾ ಅಭಿಪ್ರಾಯಪಟ್ಟಿದೆ.
 



Read more

[wpas_products keywords=”deal of the day”]