ಹೈಲೈಟ್ಸ್:
- ಆಮೀಶಾ ಪಟೇಲ್ ಬಗ್ಗೆ ಹೊಸ ಗುಸುಗುಸು
- ಬಹಿರಂಗವಾಗಿ ಪ್ರಪೋಸ್ ಮಾಡಿದ್ದ ಫೈಸಲ್ ಪಟೇಲ್
- ಗಾಸಿಪ್ ಬಗ್ಗೆ ಆಮೀಶಾ ಪಟೇಲ್ ನೀಡಿದ ಸ್ಪಷ್ಟನೆ ಏನು?
ಡಿಸೆಂಬರ್ 30 ರಂದು ಫೈಸಲ್ ಪಟೇಲ್ ಅವರ ಹುಟ್ಟುಹಬ್ಬವಿತ್ತು. ಅಂದು ‘’ಹ್ಯಾಪಿ ಬರ್ತ್ಡೇ ಮೈ ಡಾರ್ಲಿಂಗ್, ಲವ್ ಯೂ’’ ಎಂದು ಆಮೀಶಾ ಪಟೇಲ್ ಟ್ವೀಟ್ ಮಾಡಿದ್ದರು. ಅದಕ್ಕೆ, ‘’ನಾನೀಗ ಸಾರ್ವಜನಿಕವಾಗಿ ಪ್ರಪೋಸ್ ಮಾಡುತ್ತಿದ್ದೇನೆ. ನೀವು ನನ್ನನ್ನು ಮದುವೆಯಾಗುತ್ತೀರಾ?’’ ಎಂದು ಫೈಸಲ್ ಪಟೇಲ್ ಪ್ರತಿಕ್ರಿಯೆ ಕೊಟ್ಟಿದ್ದರು. ಫೈಸಲ್ ಪಟೇಲ್ ಮಾಡಿದ್ದ ಈ ಟ್ವೀಟ್ ನಂತರ ಅವರಿಬ್ಬರ ಬಗ್ಗೆ ನೂರೆಂಟು ಗಾಸಿಪ್ ಹಬ್ಬಿದೆ. ಇದೀಗ ಈ ಗಾಸಿಪ್ಗೆಲ್ಲಾ ಆಮೀಶಾ ಪಟೇಲ್ ಫುಲ್ ಸ್ಟಾಪ್ ಇಟ್ಟಿದ್ದಾರೆ.
‘ನನ್ನ ಮೇಲೆ ಅತ್ಯಾಚಾರ ಆಗುವ ಸಂಭವ ಇತ್ತು’- ಶಾಕಿಂಗ್ ಹೇಳಿಕೆ ನೀಡಿದ ನಟಿ ಅಮೀಷಾ ಪಟೇಲ್!
ಅಮೀಶಾ ಪಟೇಲ್ ಹೇಳಿದ್ದೇನು?
‘’ಫೈಸಲ್ ಪಟೇಲ್ ಮತ್ತು ನಾನು ಬಹಳ ವರ್ಷಗಳಿಂದ ಆತ್ಮೀಯ ಸ್ನೇಹಿತರು. ಫೈಸಲ್ ಮಾಡಿದ್ದ ಟ್ವೀಟ್ ಕೇವಲ ಜೋಕ್. ಅದಕ್ಕಿಂತ ಹೆಚ್ಚಾಗಿ ಇನ್ನೇನೂ ಇಲ್ಲ. ನಾನು ಸಿಂಗಲ್ ಆಗಿದ್ದೇನೆ. ಸಿಂಗಲ್ ಆಗಿರುವುದರಿಂದ ಖುಷಿಯಾಗಿದ್ದೇನೆ. ಸದ್ಯಕ್ಕೆ ರಿಲೇಶನ್ಶಿಪ್ನಲ್ಲಿರುವುದು ನನಗೆ ಇಷ್ಟವಿಲ್ಲ. ಇಂತಹ ಜೋಕ್ಗಳನ್ನು ಮಾಡುವುದರಲ್ಲಿ ಫೈಸಲ್ ಪಟೇಲ್ ಎತ್ತಿದ ಕೈ’’
‘’ನನಗೆ ಮತ್ತು ಫೈಸಲ್ಗೆ ರಾಜಕೀಯದ ಹಿನ್ನೆಲೆ ಇದೆ. ಇಂದಿರಾ ಗಾಂಧಿ ಅವರೊಂದಿಗೆ ನನ್ನ ತಾತಾ ಕೆಲಸ ಮಾಡಿದ್ದರು. ಸೋನಿಯಾ ಗಾಂಧಿ ಜೊತೆಗೆ ಫೈಸಲ್ ಪಟೇಲ್ ತಂದೆ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಮೂರು ತಲೆಮಾರುಗಳಿಂದ ನಮ್ಮ ಕುಟುಂಬದೊಂದಿಗೆ ಫೈಸಲ್ ಪಟೇಲ್ ಕುಟುಂಬಸ್ಥರು ಆಪ್ತರು. ನನಗೆ ಹಾಗೂ ಫೈಸಲ್ ಪಟೇಲ್ಗೆ ಕಾಮನ್ ಫ್ರೆಂಡ್ಸ್ ಕೂಡ ಇದ್ದಾರೆ’’
ಅಮಿಷಾ ಮುಖದ ಮೇಲೆ ಕಲೆಗಳು ಕಾಣುತ್ತಿದ್ದವು: ಕರೀನಾ ಕಪೂರ್
‘’ಇತ್ತೀಚೆಗೆ ತುಂಬಾ ಜನ ತಾರೆಯರು ವೈವಾಹಿಕ ಬದುಕಿಗೆ ನಾಂದಿ ಹಾಡುತ್ತಿದ್ದಾರೆ. ಆದರೆ, ಅದೇ ಪಟ್ಟಿಗೆ ಸೇರಲು ನನಗೆ ಇಷ್ಟವಿಲ್ಲ. ಸಿಂಗಲ್ ಆಗಿದ್ದು, ನನ್ನ ಇಷ್ಟದಂತೆ ಇರುವುದು ನನಗೆ ಖುಷಿ ಇದೆ’’ ಎಂದು ಟೈಮ್ಸ್ ಆಫ್ ಇಂಡಿಯಾಗೆ ಆಮೀಶಾ ಪಟೇಲ್ ತಿಳಿಸಿದ್ದಾರೆ.
ಅರೆನಗ್ನ ಫೋಟೋ ಹಂಚಿಕೊಂಡ ನಟಿ ಅಮೀಶಾ ಪಟೇಲ್
ಸಿನಿಮಾದಲ್ಲಿ ಆಮೀಶಾ ಪಟೇಲ್ ಬಿಜಿ
ಅನಿಲ್ ಶರ್ಮಾ ನಿರ್ದೇಶನದ 2001ರ ಸೂಪರ್ ಹಿಟ್ ಸಿನಿಮಾ ‘ಗದರ್: ಏಕ್ ಪ್ರೇಮ್ ಕಥಾ’ ಚಿತ್ರದ ಮುಂದುವರಿದ ಭಾಗವಾಗಿರುವ ‘ಗದರ್ 2’ ಚಿತ್ರದಲ್ಲಿ ಆಮೀಶಾ ಪಟೇಲ್ ಬಿಜಿಯಾಗಿದ್ದಾರೆ. ‘’ಗದರ್ 2’ ಚಿತ್ರ ಸ್ಕ್ರಿಪ್ಟ್ ತುಂಬಾ ಚೆನ್ನಾಗಿದೆ. ಸಿನಿಮಾ ಉತ್ತಮವಾಗಿ ಮೂಡಿಬರಲು ನಾವು ಶ್ರಮಿಸುತ್ತಿದ್ದೇವೆ. ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದಲ್ಲಿ ಶೂಟಿಂಗ್ ಮಾಡಿದ್ವಿ’’ ಅಂತಲೂ ಆಮೀಶಾ ಪಟೇಲ್ ಹೇಳಿದ್ದಾರೆ.
Read more
[wpas_products keywords=”deal of the day party wear dress for women stylish indian”]