Karnataka news paper

ಕೋವಿಡ್‌ 3ನೇ ಅಲೆ ಎದುರಿಸಲು ಸರ್ಕಾರ ಸಜ್ಜು..! ನಿರ್ವಹಣೆಗೆ ಹಿರಿಯ ಅಧಿಕಾರಿಗಳ ತಂಡ ರಚನೆ


ಹೈಲೈಟ್ಸ್‌:

  • ಆಸ್ಪತ್ರೆಗಳಲ್ಲಿ ಆಕ್ಸಿಜನ್‌, ಹಾಸಿಗೆ ವ್ಯವಸ್ಥೆ, ಟೆಸ್ಟ್‌ ಮೇಲೆ ನಿಗಾ
  • ಕೋವಿಡ್‌ ವಾರ್‌ ರೂಂ, ಆಂಬ್ಯುಲೆನ್ಸ್‌ ನಿರ್ವಹಣಾ ಸಮಿತಿ ರಚನೆ
  • ಸ್ಯಾಂಪಲ್‌ ಸಂಗ್ರಹ – ಪರೀಕ್ಷೆ – ಪ್ರಯೋಗಾಲಯ ನಿಯಂತ್ರಣಕ್ಕೂ ಸಮಿತಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕು ಹಾಗೂ ರೂಪಾಂತರಿ ಓಮಿಕ್ರಾನ್‌ ಹರಡುವಿಕೆ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಅಗತ್ಯವಿರುವ ನಿರ್ವಹಣಾ ಕ್ರಮಗಳನ್ನು ತಕ್ಷಣ ಜಾರಿಗೆ ತರಲು ಮತ್ತು ಅದರ ಮೇಲ್ವಿಚಾರಣೆಗೆ 11 ಸಮಿತಿಗಳನ್ನು ರಚಿಸಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ.

ಕೋವಿಡ್‌ ವಾರ್‌ ರೂಂ, ಆಂಬ್ಯುಲೆನ್ಸ್‌ ನಿರ್ವಹಣಾ ಸಮಿತಿ, ಸ್ಯಾಂಪಲ್‌ ಸಂಗ್ರಹ – ಪರೀಕ್ಷೆ – ಪ್ರಯೋಗಾಲಯ ನಿಯಂತ್ರಣ ಸಮಿತಿ ಸೇರಿ 11 ಸಮಿತಿಗಳನ್ನು ರಚಿಸಿರುವ ಸರಕಾರ ಹಿರಿಯ ಐಎಎಸ್‌ ಅಧಿಕಾರಿಗಳಿಗೆ ಸಮಿತಿಗಳ ನೇತೃತ್ವ ವಹಿಸಿದೆ.

ಸಮಿತಿಗಳಿಗೆ ಹೆಚ್ಚುವರಿ ಸಿಬ್ಬಂದಿ ನೇಮಕ, ಅಗತ್ಯ ವಸ್ತುಗಳ ಪೂರೈಕೆ, ನಿರ್ವಹಣೆಯ ಜತೆಗೆ ವರದಿಯನ್ನು ಸಂಪೂರ್ಣ ಸರಕಾರಕ್ಕೆ ಒಪ್ಪಿಸುವ ಜವಾಬ್ದಾರಿಯನ್ನು ಈ ಸಮಿತಿಗಳು ಹೊಂದಿವೆ. ಸಂದರ್ಭದ ಸೂಕ್ಷ್ಮತೆ ಅರಿತು ಅಂತಾರಾಷ್ಟ್ರೀಯ ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸಿ ಅಗತ್ಯತೆ ಪೂರೈಸಿಕೊಳ್ಳಲು ಸರಕಾರ ಸೂಚಿಸಿದೆ. ಆಂಬ್ಯುಲೆನ್ಸ್‌ ನಿರ್ವಹಣೆಯನ್ನೂ ಹಿರಿಯ ಐಎಎಸ್‌ ಅಧಿಕಾರಿಗಳಿಗೆ ವಹಿಸಿದೆ.

ಎರಡನೇ ಅಲೆಯಿಂದ ಪಾಠ ಕಲಿತಿರುವ ರಾಜ್ಯ ಸರಕಾರ ಪ್ರಸಕ್ತ ಸಂದರ್ಭದಲ್ಲಿ ಕೋವಿಡ್‌ ಉಲ್ಬಣಕ್ಕೂ ಮುನ್ನವೇ ಸಮಿತಿ ರಚಿಸಿ ಜವಾಬ್ದಾರಿ ನೀಡಿದೆ. ಕಳೆದ ಬಾರಿ ಕೋವಿಡ್‌ ಕೈಮೀರಿದ್ದ ಸಂದರ್ಭದಲ್ಲಿಆಕ್ಸಿಜನ್‌, ಔಷಧ ಪೂರೈಕೆ, ವಾರ್‌ ರೂಂ ನಿರ್ವಹಣೆ ಸೇರಿ ನಾನಾ ಸಮಿತಿಗಳನ್ನು ಸಚಿವರ ನೇತೃತ್ವದಲ್ಲಿ ರಚಿಸಲಾಗಿತ್ತು. ಕಳೆದ ಬಾರಿ ಬಿಬಿಎಂಪಿ ವಾರ್‌ ರೂಂ ಮೂಲಕ ‘ಬೆಡ್‌ ಬುಕ್ಕಿಂಗ್‌ ದಂಧೆ’ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಬಾರಿ ಎಚ್ಚರ ವಹಿಸಿರುವ ರಾಜ್ಯ ಸರಕಾರ ಹಿರಿಯ ಐಎಎಸ್‌ ಅಧಿಕಾರಿಗಳಿಗೆ ಹೊಣೆಗಾರಿಕೆ ನೀಡಿದೆ.

ಜ್ವರ, ಗಂಟಲು ಕೆರೆತ ಇದ್ದವರೆಲ್ಲರ ಕೋವಿಡ್ ಪರೀಕ್ಷೆ ಮಾಡಿ: ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ
ಬಳ್ಳಾರಿಯಲ್ಲಿ ಶೇ.90 ಆಕ್ಸಿಜನ್‌ ಉತ್ಪಾದನೆ

ರಾಜ್ಯದ ಶೇ.90 ಲಿಕ್ವಿಡ್‌ ಆಕ್ಸಿಜನ್‌ ಬಳ್ಳಾರಿಯಲ್ಲೇ ಉತ್ಪಾದನೆ ಆಗುವುದರಿಂದ ಬಳ್ಳಾರಿಯಿಂದ ರಾಜ್ಯಾದ್ಯಂತ ಲಿಕ್ವಿಡ್‌ ಆಕ್ಸಿಜನ್‌ ಪೂರೈಕೆ ನಿರ್ವಹಣೆಗಾಗಿಯೇ ಪ್ರತ್ಯೇಕ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿ ಐವರು ಹಿರಿಯ ಅಧಿಕಾರಿಗಳಿದ್ದು, ಐಎಎಸ್‌ ಅಧಿಕಾರಿ ಪವನ್‌ ಕುಮಾರ್‌ ಮಾಲಪಾಟಿ ಮುನ್ನಡೆಸಲಿದ್ದಾರೆ. ವೈದ್ಯಕೀಯ ಉಪಕರಣಗಳ ಖರೀದಿಗಾಗಿ ಖಾಸಗಿ ಸಂಸ್ಥೆಗಳ ಸಿಎಸ್‌ಆರ್‌ ನಿಧಿ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಐಎಎಸ್‌ ಅಧಿಕಾರಿ ಉಮಾ ಮಹದೇವನ್‌ಗೆ ಈ ಬಾರಿಯೂ ಖಾಸಗಿ ಸಂಸ್ಥೆಗಳೊಂದಿಗೆ ಸಮನ್ವಯ ಅಧಿಕಾರಿನ್ನಾಗಿಸಿ ಸರಕಾರ ಆದೇಶಿಸಿದೆ.

ಮೂವರು ವಿದ್ಯಾರ್ಥಿಗಳಿಗೆ ಕೋವಿಡ್: ಹಗರಿಬೊಮ್ಮನಹಳ್ಳಿಯ ಶಾಲೆ ಬಂದ್
ಸಮಿತಿಗಳು ಹೀಗಿವೆ..

1. ಕೋವಿಡ್‌ ವಾರ್‌ ರೂಂ

ನೇತೃತ್ವ: ಮುಧಿನೀಶ್‌ ಮೌದ್ಗಿಲ್‌. ಸದಸ್ಯರು: ಗಂಗಾಧರಸ್ವಾಮಿ, ವ್ಯವಸ್ಥಾಪ ನಿರ್ದೇಶಕರು -ಕೆಆರ್‌ಐಡಿಎಲ್‌

2. ಆಂಬ್ಯುಲೆನ್ಸ್‌ ನಿರ್ವಹಣೆ

ನೇತೃತ್ವ: ಆರ್‌. ವಿನೂತ್‌ ಪ್ರಿಯಾ. ಸದಸ್ಯರು: ವರಪ್ರಸಾದ್‌ರೆಡ್ಡಿ, ಡಾ. ಎಂ.ವಿ. ವಿಜಯಕುಮಾರ್‌

3. ಸ್ಯಾಂಪಲ್‌ ಸಂಗ್ರಹ, ಪರೀಕ್ಷೆ, ಲ್ಯಾಬ್‌ ಬಳಕೆ

ನೇತೃತ್ವ: ಶಾಲಿನಿ ರಜನೀಶ್‌. ಸದಸ್ಯರು: ಡಾ. ಸಿ.ಎನ್‌. ಮಂಜುನಾಥ, ಡಾ. ರವಿ (ನಿಮ್ಹಾನ್ಸ್‌), ಮಂಜುಶ್ರೀ, ಬಿ.ಬಿ. ಕಾವೇರಿ, ಡಾ. ಅರುಂಧತಿ ಚಂದ್ರಶೇಖರ್‌

4. ಹೋಮ್‌ ಐಸೋಲೇಷನ್‌, ಕಂಟೋನ್ಮೆಂಟ್‌ ಝೋನ್‌

ನೇತೃತ್ವ: ಪಂಕಜ್‌ಕುಮಾರ್‌ ಪಾಂಡೆ. ಸದಸ್ಯರು: ಡಾ. ಮನೋಜ್‌ ಕುಮಾರ್‌, ಡಾ. ಕೆ. ವಿ. ತ್ರಿಲೋಕ ಚಂದ್ರ, ಬಾಗೋಜಿ ಖಾನಾಪುರೆ (ಡ್ರಗ್‌ ಕಂಟ್ರೋಲರ್‌)

5. ಆಕ್ಸಿಜನ್‌ ಟ್ಯಾಂಕರ್‌ ಮೇಲ್ವಿಚಾರಣೆ

ನೇತೃತ್ವ: ಪ್ರತಾಪ್‌ರೆಡ್ಡಿ, ಎನ್‌. ಶಿವಶಂಕರ್‌. ಸದಸ್ಯರು: ಕೆ. ಶ್ರೀನಿವಾಸ್‌, ಹೇಮಂತ ಕುಮಾರ್‌, ಅಮರೇಶ್‌ ತುಂಬಗಿ, ಆರ್‌. ರಮೇಶ್‌

6. ಬಳ್ಳಾರಿಯಿಂದ ಆಕ್ಸಿಜನ್‌ ಟ್ಯಾಂಕರ್‌ ನಿರ್ವಹಣೆ:

ನೇತೃತ್ವ: ಪವನ್‌ ಕುಮಾರ್‌ ಮಾಲಪಾಟಿ. ಸದಸ್ಯರು: ಜಂಟಿ ಆಯುಕ್ತರು ಸಾರಿಗೆ ಇಲಾಖೆ, ಜಂಟಿ ಆಯುಕ್ತರು, ಬಳ್ಳಾರಿ ಕೈಗಾರಿಕಾ ಕೇಂದ್ರ, ಜಂಟಿ ಆಯುಕ್ತರು ಫ್ಯಾಕ್ಟರಿ ಮತ್ತು ಬಾಯ್ಲರ್ಸ್‌, ಉಪ ಡ್ರಗ್‌ ಕಂಟ್ರೋಲರ್‌

7. ರಾಜ್ಯ ಮಟ್ಟದ ಸಹಾಯವಾಣಿ (1912)

ನೇತೃತ್ವ: ವಿಪಿನ್‌ ಸಿಂಗ್‌, ಬಿಸ್ವಜೀತ್‌ ಮಿಶ್ರ, ಸದಸ್ಯರು: 1912 ನೋಡಲ್‌ ಅಧಿಕಾರಿಗಳು

8. ಖಾಸಗಿ/ಎನ್‌ಜಿಒ/ಕಾರ್ಪೊರೇಟ್‌ ವಲಯಗಳೊಂದಿಗೆ ಸಮನ್ವಯ. ನೇತೃತ್ವ: ಉಮಾ ಮಹದೇವನ್‌.

9. ಕೋವಿಡ್‌ನಿಂದ ಮೃತಪಟ್ಟ ಮಕ್ಕಳಿಗೆ ಸರಕಾರದ ಸೌಲಭ್ಯ. ನೇತೃತ್ವ: ಪಲ್ಲವಿ ಅಕುರಾತಿ

10. ಅಂತಾರಾಷ್ಟ್ರೀಯ ಸಂಸ್ಥೆ/ಸಮುದಾಯಗಳೊಂದಿಗೆ ಸಮನ್ವಯ:

ನೇತೃತ್ವ: ಡಾ. ಪೊನ್ನುರಾಜ್‌ . ಸದಸ್ಯರು: ಮೋಹನ್‌ ಸುರೇಶ್‌(ರುವಾಂಡ ರಾಯಭಾರಿ), ಸಿ.ಎಸ್‌. ಪ್ರಕಾಶ್‌ (ಜೆಕ್‌ ಗಣರಾಜ್ಯದ ರಾಯಭಾರಿ)

11. ಪರಿಕರಗಳ ಆಮದು ನೋಡಲ್‌ ಅಧಿಕಾರಿ. ನೇತೃತ್ವ: ಉಮಾ ಮಹದೇವನ್‌, ಪ್ರಿಯಾಂಕ ಮೇರಿ ಫ್ರಾನ್ಸಿಸ್‌.

ಹೆಚ್ಚಾಗುತ್ತಿದೆ ಕೋವಿಡ್ ಆತಂಕ: ನಾಗರಿಕರು ಕೈಗೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳೇನು?



Read more

[wpas_products keywords=”deal of the day sale today offer all”]