PTI
ಲಖನೌ: ಕೊರೊನಾ ರೂಪಾಂತರಿ ಒಮಿಕ್ರಾನ್ ಪ್ರಪಂಚವನ್ನೇ ತಲ್ಲಣಗೊಳಿಸುತ್ತಿದ್ದರೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರು ಮಾತ್ರ ಇದನ್ನು ಸಾಮಾನ್ಯ ಜ್ವರ ಎಂದಿದ್ದಾರೆ.
ಓಮಿಕ್ರಾನ್ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ತೀವ್ರವಾಗುತ್ತಿದೆಯಾದರೂ, ಈ ಓಮಿಕ್ರಾನ್ ರೂಪಾಂತರಿ ದುರ್ಬಲ ರೂಪಾಂತರವಾಗಿದೆ. ಓಮಿಕ್ರಾನ್’ ವೇಗವಾಗಿ ಹರಡುತ್ತಿರುವುದು ಸತ್ಯ. ಕೋವಿಡ್ ಎರಡನೇ ಅಲೆಗೆ ಹೋಲಿಸಿದರೆ ಓಮಿಕ್ರಾನ್ ರೂಪಾಂತರಿ ಸ್ವಲ್ಪ ದುರ್ಬಲವಾಗಿದೆ ಎಂಬುದು ನಿಜ. ಇದು ಸಾಮಾನ್ಯ ವೈರಲ್ ಜ್ವರ. ಯಾವುದೇ ಇತರ ರೋಗದಂತೆ, ಇದಕ್ಕೆ ಮುನ್ನೆಚ್ಚರಿಕೆ ಹಾಗೂ ಜಾಗರೂಕತೆಯ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಅದು ಕೇವಲ ಒಂದು ಸಾಮಾನ್ಯ ವೈರಲ್ ಜ್ವರ. ಸೂಕ್ತ ಮುಂಜಾಗ್ರತೆ ವಹಿಸಿದರೆ ಶೀಘ್ರ ಗುಣಮುಖರಾಗಬಹುದು. ಜನ ಆತಂಕಗೊಳ್ಳುವ ಅಗತ್ಯವಿಲ್ಲ. ಅಂತೆಯೇ ಕೋವಿಡ್ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಎಂದು ಯೋಗಿ ಆದಿತ್ಯಾನಾಥ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಜನವರಿ 1ಕ್ಕೆ 10 ವರ್ಷ ಪೂರೈಸುವ ಎಲ್ಲಾ ಡೀಸೆಲ್ ವಾಹನಗಳ ನೋಂದಣಿ ರದ್ದು
ಅಲ್ಲದೆ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಪಾಲನೆ ಮತ್ತು ಜಾಗರೂಕತೆಯು ಪ್ರತಿಯೊಂದು ರೋಗಕ್ಕೂ ಅವಶ್ಯಕವಾಗಿದೆ ಮತ್ತು ಈ ಸಂದರ್ಭದಲ್ಲಿಯೂ ಸಹ ಇದು ಅಗತ್ಯವಾಗಿರುತ್ತದೆ. ಆದರೆ ಭಯಪಡುವ ಅಗತ್ಯವಿಲ್ಲ. ಓಮಿಕ್ರಾನ್ ಡೆಲ್ಟಾದಂತೆ ತೀವ್ರವಾಗಿರುವುದಿಲ್ಲ, ಇದು ಎರಡನೇ ಅಲೆಯ ಸಮಯದಲ್ಲಿ ಕಂಡಬಂದ ರೀತಿಯಲ್ಲಿ ಸೋಂಕು ತೀವ್ರವಾಗಿ ಬಾಧಿಸುವುದಿಲ್ಲ. ಎರಡನೇ ಅಲೆಯಲ್ಲಿ ಡೆಲ್ಟಾ ರೂಪಾಂತರ ಚೇತರಿಕೆಯ ದರವನ್ನು ವಿಳಂಬಗೊಳಿಸಿತು ಮತ್ತು ಕೋವಿಡ್ ನಂತರದ ಹೆಚ್ಚಿನ ತೊಡಕುಗಳನ್ನು ಉಂಟು ಮಾಡಿತ್ತು. ಆ ಸಮಯದಲ್ಲಿ ಯಾರಿಗೆ ಸೋಂಕು ತಗುಲುತ್ತಿದೆಯೋ ಅವರು ಚೇತರಿಸಿಕೊಳ್ಳಲು ಅಥವಾ ಸೋಂಕಿನಿಂದ ಮುಕ್ತರಾಗಲು 15-20-25 ದಿನಗಳನ್ನು ತೆಗೆದುಕೊಳ್ಳುತ್ತಿತ್ತು. ಓಮಿಕ್ರಾನ್‌ನಲ್ಲಿ ಇಂತಹ ಅಂಶಗಳಿಲ್ಲ ಎಂದು ಅವರು ಹೇಳಿದರು.
Read more
[wpas_products keywords=”deal of the day”]