ಹೈಲೈಟ್ಸ್:
- ಅಲ್ಲು ಅರ್ಜುನ್ ನಟನೆಯ ಸುಕುಮಾರ್ ನಿರ್ದೇಶನದ ಚಿತ್ರ ‘ಪುಷ್ಪ: ದಿ ರೈಸ್’
- 15 ದಿನಗಳಲ್ಲಿ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ‘ಪುಷ್ಪ: ದಿ ರೈಸ್’
- ಬುಕ್ ಮೈ ಶೋ ವೆಬ್ ತಾಣದಲ್ಲಿ 5 ಮಿಲಿಯನ್ ಟಿಕೆಟ್ಸ್ ಸೇಲ್
- 2021ರಲ್ಲಿ ಅತಿ ಹೆಚ್ಚು ಟಿಕೆಟ್ಸ್ ಸೇಲ್ ಆದ ಭಾರತೀಯ ಸಿನಿಮಾ ‘ಪುಷ್ಪ: ದಿ ರೈಸ್’
ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿರುವ ‘ಪುಷ್ಪ: ದಿ ರೈಸ್’ ಸಿನಿಮಾ ಟಿಕೆಟ್ ವಿಷಯದಲ್ಲೂ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಬುಕ್ ಮೈ ಶೋ ವೆಬ್ ತಾಣದಲ್ಲಿ ‘ಪುಷ್ಪ: ದಿ ರೈಸ್’ ಸಿನಿಮಾದ 5 ಮಿಲಿಯನ್‌ಗೂ ಅಧಿಕ ಟಿಕೆಟ್‌ಗಳು ಸೇಲ್ ಆಗಿವೆ. ಆ ಮೂಲಕ 2021 ರಲ್ಲಿ ಅತಿ ಹೆಚ್ಚು ಟಿಕೆಟ್ಸ್ ಸೇಲ್ ಆದ ಭಾರತೀಯ ಸಿನಿಮಾ ಎಂಬ ಖ್ಯಾತಿಗೆ ‘ಪುಷ್ಪ: ದಿ ರೈಸ್’ ಸಿನಿಮಾ ಪಾತ್ರವಾಗಿದೆ.
ಟ್ವೀಟ್ ಮಾಡಿದ ಮೈತ್ರಿ ಮೂವಿ ಮೇಕರ್ಸ್
‘’ಪುಷ್ಪ: ದಿ ರೈಸ್’ ಚಿತ್ರದ 5 ಮಿಲಿಯನ್ ಟಿಕೆಟ್‌ಗಳು ಬುಕ್ ಮೈ ಶೋ ವೆಬ್ ತಾಣದಲ್ಲಿ ಸೇಲ್ ಆಗಿವೆ. ಪುಷ್ಪ ಬಾಕ್ಸ್ ಆಫೀಸ್ ಸೆನ್ಸೇಷನ್ ಆಗಿದೆ’’ ಎಂದು ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಟ್ವೀಟ್ ಮಾಡಿದೆ.
300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿರುವ ‘ಪುಷ್ಪ: ದಿ ರೈಸ್’
ಬಿಡುಗಡೆಯಾದ 15 ದಿನಗಳಲ್ಲಿ ‘ಪುಷ್ಪ: ದಿ ರೈಸ್’ ಸಿನಿಮಾ ಬರೋಬ್ಬರಿ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಒಟ್ಟಾರೆಯಾಗಿ ವಿಶ್ವದಾದ್ಯಂತ ಎರಡು ವಾರಗಳಲ್ಲಿ ‘ಪುಷ್ಪ: ದಿ ರೈಸ್’ ಸಿನಿಮಾ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಹಿಂದಿಯಲ್ಲೂ ದಾಖಲೆ ಬರೆದ ‘ಪುಷ್ಪ: ದಿ ರೈಸ್’
ಬಿಡುಗಡೆಯಾದ 15 ದಿನಗಳಲ್ಲಿ ‘ಪುಷ್ಪ: ದಿ ರೈಸ್’ ಚಿತ್ರದ ಹಿಂದಿ ವರ್ಷನ್ 47.09 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆ ಮೂಲಕ ‘ಕೆಜಿಎಫ್: ಚಾಪ್ಟರ್ 1’ ಚಿತ್ರವನ್ನು ‘ಪುಷ್ಪ: ದಿ ರೈಸ್’ ಹಿಂದಿಕ್ಕಿತು.
ಪ್ರತಿಯೊಬ್ಬರಿಗೂ ಉಡುಗೊರೆ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿರುವ ‘ಪುಷ್ಪ: ದಿ ರೈಸ್’ ಸಿನಿಮಾ ನಿರ್ಮಾಪಕರ ಜೇಬು ತುಂಬಿಸುತ್ತಿದೆ. ಹೀಗಾಗಿ, ಚಿತ್ರಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ನಿರ್ದೇಶಕ ಸುಕುಮಾರ್ ಭರ್ಜರಿ ಉಡುಗೊರೆಯನ್ನೇ ನೀಡಲಿದ್ದಾರೆ. ಸಿನಿಮಾಕ್ಕೆ ಕೆಲಸ ಮಾಡಿದ ಸೆಟ್ ಬಾಯ್ಸ್, ಆರ್ಟ್ ಡಿಪಾರ್ಟ್‌ಮೆಂಟ್‌ನ ಸದಸ್ಯರಿಗೆ, ಲೈಟ್ ಬಾಯ್ಸ್‌ಗೆ.. ಹೀಗೆ ಸಿನಿಮಾಗಾಗಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ ತಂಡದ ಪ್ರತಿಯೊಬ್ಬ ಸದಸ್ಯರಿಗೆ ವೈಯಕ್ತಿಕವಾಗಿ ತಲಾ ಒಂದು ಲಕ್ಷ ರೂಪಾಯಿ ನೀಡುವುದಾಗಿ ಸುಕುಮಾರ್ ಘೋಷಣೆ ಮಾಡಿದ್ದಾರೆ.
Read more
[wpas_products keywords=”deal of the day party wear dress for women stylish indian”]