ಸಂಪ್ರದಾಯ ಬದ್ಧವಾಗಿ ನಡೆದ ಈ ಸೀಮಂತದ ಕಾರ್ಯಕ್ರಮ ಈಗ ನೆಟ್ಟಿಗರಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಪೆಟ್ ಕ್ಲಿನಿಕ್ ವೊಂದರಲ್ಲಿ ಸೀಮಂತದ ಕಾರ್ಯಕ್ರಮ ನಡೆದಿದ್ದು, ಸೀಮಂತದ ದಿನ ಹೆಣ್ಮಕ್ಕಳನ್ನು ಅಲಂಕರಿಸುವಂತೆ ಈ ಬೆಕ್ಕುಗಳಿಗೂ ಹೊಸ ಬಟ್ಟೆ ತೊಡಿಸಲಾಗಿತ್ತು. , ಕಾಲಿಗೆ ಗೆಜ್ಜೆ, ಕುತ್ತಿಗೆಗೆ ಸರ ಹಾಕಿ ಶೃಂಗಾರ ಮಾಡಲಾಗಿತ್ತು. ಸೀಮಂತದ್ದು ತಯಾರಿಸುವಂತೆ ಬೆಕ್ಕುಗಳಿಗೂ ವಿಶೇಷ ತಿನಿಸುಗಳನ್ನು ಸಿದ್ಧಪಡಿಸಲಾಗಿತ್ತು.
ಸೀಮಂತ ನಡೆದ ಸ್ಥಳವನ್ನೂ ಕೂಡ ಬೆಲೂನ್‌ಗಳನ್ನು ಕಟ್ಟಿ ಲೈಟಿಂಗ್‌ಗಳನ್ನು ಹಾಕಿ ಚೆಂದಗೊಳಿಸಲಾಗಿದೆ. ಜೊತೆಗೆ ತರಹೇವಾರಿ ತಿನಿಸು ಹಣ್ಣು ಹಂಪಲುಗಳನ್ನು ತಂದಿರಿಸಿದ್ದಾರೆ. ಬಿಳಿ ಹಾಗೂ ಕಪ್ಪು ಬಣ್ಣದ ಈ ಎರಡು ಬೆಕ್ಕುಗಳಿಗೆ ಕೆಂಪು ಬಣ್ಣದ ಹೂವಿನ ಮಾಲೆಯನ್ನು ಹಾಕಿದ್ದಾರೆ. ಬಳಿಕ ಈ ಎರಡು ಬೆಕ್ಕುಗಳನ್ನು ತಮಗೆ ಬೇಕಾದನ್ನು ತಿನ್ನಲು ಬಿಟ್ಟಿದ್ದಾರೆ. ಈ ಸುಂದರ ಕಾರ್ಯಕ್ರಮಕ್ಕೆ ಮಹೇಶ್ವರನ್ ಅವರ ಬಂಧು ಮಿತ್ರಾದಿಗಳು ಆಗಮಿಸಿ ಆಶೀರ್ವಾದ ಮಾಡಿದ್ದಾರೆ.
ಎರಡು ಬೆಕ್ಕುಗಳಿಗೂ ಕ್ರಮವಾಗಿ ತಮ್ಮ 50ನೇ ಹಾಗೂ 35ನೇ ದಿನದಲ್ಲಿ ಸೀಮಂತ ಮಾಡಲಾಗಿದೆ. ವ ಈ ಕಾರ್ಯಕ್ರಮದಲ್ಲಿ ಪೆಟ್ ಕ್ಲಿನಿಕ್‌ನ ವೈದ್ಯರು ಸೇರಿದಂತೆ ಹಲವು ಮಂದಿ ಭಾಗಿಯಾಗಿದ್ದರು. ಸಾಮಾನ್ಯವಾಗಿ ಬೆಕ್ಕುಗಳ ಗರ್ಭಾವಸ್ಥೆಯ ಅವಧಿ 62 ದಿನಗಳಾಗಿವೆ.
ಇನ್ನು ಈ ಅಪರೂಪದ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಉಮಾ ಮಹೇಶ್ವರನ್, ಮನುಷ್ಯರಿಗೆ ಮಾಡಿದಂತೆ ನಾವು ನಮ್ಮಬೆಕ್ಕುಗಳಿಗೆ ಸೀಮಂತ ಮಾಡಿದ್ದೇವೆ. ಈ ಎರಡು ಬೆಕ್ಕುಗಳು ನಮ್ಮ ಮನೆಯ ಸದಸ್ಯರಯ. ಕ್ಲಿನಿಕ್‌ನಲ್ಲಿ ಡಾಕ್ಟರ್‌ಗಳ ಜೊತೆಗೂಡಿ ಈ ಸೀಮಂತ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆವು ಎಂದು ಹೇಳಿದರು. ಅಲ್ಲದೇ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಅವರು ಸಂತಸ ಕೂಡ ವ್ಯಕ್ತ ಪಡಿಸಿದ್ದಾರೆ.
Read more
[wpas_products keywords=”deal of the day sale today offer all”]