ಹೈಲೈಟ್ಸ್:
- ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 2.59ಕ್ಕೆ ಏರಿಕೆ
- ಮಂಗಳವಾರ ಕೂಡಾ 4 ಕೊರೊನಾ ಸೋಂಕಿತರು ಸಾವು
- ರಾಜ್ಯದಲ್ಲಿ ಈವರೆಗೆ ದೃಢಪಟ್ಟ ಕೊರೊನಾ ಪ್ರಕರಣಗಳ ಸಂಖ್ಯೆ 30,13,326
ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 2.59ಕ್ಕೆ ಏರಿಕೆ ಕಂಡಿದೆ. ಮಂಗಳವಾರ ಕೂಡಾ 4 ಕೊರೊನಾ ಸೋಂಕಿತರು ರಾಜ್ಯದ ಹಲವೆಡೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ದೃಢಪಟ್ಟ ಕೊರೊನಾ ಪ್ರಕರಣಗಳ ಸಂಖ್ಯೆ 30,13,326ಕ್ಕೆ ಏರಿಕೆ ಕಂಡಿದ್ದು, ಸದ್ಯ ರಾಜ್ಯಾದ್ಯಂತ 13,532 ಸಕ್ರಿಯ ಕೊರೊನಾ ಸೋಂಕು ಪ್ರಕರಣಗಳಿವೆ.
ರಾಜ್ಯದಲ್ಲಿ ಈವರೆಗೆ 29,61,410 ಕೊರೊನಾ ಸೋಂಕಿತರು ಮಾರಕ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದು, ಮಂಗಳವಾರ ಕೂಡಾ 288 ಸೋಂಕಿತರು ಗುಣಮುಖರಾಗಿದ್ದಾರೆ. ದುರಾದೃಷ್ಟವಶಾತ್, ಈವರೆಗೆ ರಾಜ್ಯದಲ್ಲಿ 38,355 ಕೊರೊನಾ ಸೋಂಕಿತರು ಬಲಿಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ ಮರಣ ಪ್ರಕರಣ 0.16ರಷ್ಟಿದ್ದು, ಕೊರೊನಾ ಪಾಸಿಟಿವಿಟಿ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ, ಬೆಡ್, ಆಕ್ಸಿಜನ್ ಸಮಸ್ಯೆ ಎದುರಾದರೆ ಮರಣ ಪ್ರಮಾಣದಲ್ಲೂ ಏರಿಕೆಯಾಗುವ ಭೀತಿ ಎದುರಾಗಿದೆ.
ಜಿಲ್ಲಾವಾರು ಲೆಕ್ಕಾಚಾರ: ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿ 2053 ಪ್ರಕರಣಗಳು ಪತ್ತೆಯಾಗಿರೋದನ್ನು ಹೊರತುಪಡಿಸಿದರೆ, ಮತ್ಯಾವ ಜಿಲ್ಲೆಯಲ್ಲೂ ಮಂಗಳವಾರ ಒಂದೇ ದಿನ ದೃಢಪಟ್ಟ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಮೂರಂಕಿ ದಾಟಿಲ್ಲ. ಬೆಂಗಳೂರಿನ ನಂತರದ ಸ್ಥಾನದಲ್ಲಿ ಮಂಗಳೂರು ಇದ್ದು 75 ಪ್ರಕರಣಗಳು ದೃಢಪಟ್ಟಿವೆ. ಉಡುಪಿ 72, ಮೈಸೂರು 48, ಬೆಳಗಾವಿ 45, ಧಾರವಾಡ 29, ಹಾಸನ 18, ಮಂಡ್ಯ 17, ಕಲಬುರಗಿ 16, ಬೆಂಗಳೂರು ಗ್ರಾಮಾಂತರ 15, ಕೋಲಾರ 14, ತುಮಕೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಲಾ 11 ಪ್ರಕರಣಗಳು ಮಂಗಳವಾರ ದೃಢಪಟ್ಟಿವೆ.
ಇನ್ನುಳಿದಂತೆ ಬಾಗಲಕೋಟೆ 02, ಬಳ್ಳಾರಿ 09, ಬೀದರ್ 02, ಚಾಮರಾಜನಗರ 02, ಚಿಕ್ಕಬಳ್ಳಾಪುರ 05, ಚಿಕ್ಕಮಗಳೂರು 04, ಚಿತ್ರದುರ್ಗ 02, ದಾವಣಗೆರೆ 03, ಗದಗ 02, ಕೊಡಗು 07, ಕೊಪ್ಪಳ 01, ರಾಯಚೂರು 03, ರಾಮನಗರ 05, ಶಿವಮೊಗ್ಗ 03, ಉತ್ತರ ಕನ್ನಡ 04, ಯಾದಗಿರಿಯಲ್ಲಿ 01 ಪ್ರಕರಣ ದೃಢಪಟ್ಟಿದ್ದು, ಹಾವೇರಿ ಜಿಲ್ಲೆಯಲ್ಲಿ ಮಾತ್ರ ಮಂಗಳವಾರ ಯಾವುದೇ ಹೊಸ ಕೊರೊನಾ ಪ್ರಕರಣ ದೃಢಪಟ್ಟಿಲ್ಲ.
Read more
[wpas_products keywords=”deal of the day sale today offer all”]