ಹೈಲೈಟ್ಸ್:
- ತಮ್ಮ ಮಾಜಿ ಸ್ನೇಹಿತನ ಬಗ್ಗೆ ನವಜೋತ್ ಸಿಂಗ್ ಸಿಧು ಮಾತಿನ ಬಾಣ
- ಕ್ಯಾಪ್ಟನ್ ವಿರೋಧಿಗಳ ಕೈಗೊಂಬೆಯಾಗಿದ್ದರು: ನವಜೋತ್ ಸಿಂಗ್ ಸಿಧು
- ಅಮರೀಂದರ್ ತಮ್ಮ ಆದರ್ಶಗಳನ್ನು ಮಾರಿಕೊಂಡಿದ್ದಾರೆ ಎಂದ ಸಿಧು
– ಇದು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ, ಇತ್ತೀಚೆಗೆ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಹೊಸ ಪಕ್ಷ ಸ್ಥಾಪನೆ ಮಾಡಿದ ಅಮರೀಂದರ್ ಸಿಂಗ್ ವಿರುದ್ಧ, ಒಂದು ಕಾಲದಲ್ಲಿ ಅವರ ಅತ್ಯಾಪ್ತ ಸ್ನೇಹಿತರಾಗಿದ್ದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಬಿಟ್ಟ ಮಾತಿನ ಬಾಣ.
ಮಂಗಳವಾರ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಯಾವಾಗ ನಿಮ್ಮ ಕ್ಯಾಪ್ಟನ್, ವಿರೋಧಿಗಳ ಕೈಗೊಂಬೆಯಾಗಿದ್ದರೋ ಆಗ ಅವರು ದ್ರೋಹಿ ಎಂದರ್ಥ. ಹೀಗಾಗಿ ಅವರನ್ನು ನಾವು ಪಕ್ಷದಿಂದ ಬಿಸಾಕಿದೆವು ಎಂದು ಹೇಳಿದರು.
ಅಷ್ಟಕ್ಕೆ ಅಮರೀಂದರ್ ಮೇಲೆ ಸಿಧು ಕೋಪ ತಣ್ಣಗಾಗಲಿಲ್ಲ. ‘ಕ್ಯಾಪ್ಟನ್ ತಮ್ಮ ತತ್ವ ಆದರ್ಶಗಳನ್ನು ಮಾರಿಕೊಂಡಿದ್ದಾರೆ. ಎಷ್ಟು ದಿನಗಳ ಕಾಲ ಅವರು ಮುಚ್ಚಿದ ಪರದೆಯ ಹಿಂದೆಯೇ ಇರುತ್ತಾರೆ? ಅವರಿಗೆ ಸಾಕಷ್ಟು ಬಾರಿ ಹೇಳಿದ್ದೆ. ಆದರೆ ಅದ್ಯಾವುದನ್ನೂ ಅವರು ತಲೆಗೆ ಹಾಕಿಕೊಳ್ಳಲಿಲ್ಲ’ ಎಂದು ಸಿಧು ಮಾತಿನ ಬೆಂಕಿಯುಂಡೆ ಉಗುಳಿದ್ದಾರೆ.
ಅಲ್ಲದೇ ಅವರ ಕಾಲದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಬಹಳ ಕಳವಳಕಾರಿಯಾಗಿತ್ತು ಎಂದು ಆರೋಪಿಸಿದರು. ‘ ಸಿಧು ಯಾವತ್ತೂ ವಿಷಯದ ಪರ ನಿಲ್ಲುತ್ತಾನೆ. ನಮ್ಮಲ್ಲಿ ಭಾರೀ ಪ್ರಮಾಣದಲ್ಲಿ ವಿತ್ತೀಯ ಕೊರತೆ ಇದೆ. ನಮ್ಮ ಬಜೆಟ್ ಗಾತ್ರ ₹ 140 ಕೋಟಿ ಇದೆ. ಇದರಲ್ಲಿ ₹ 75 ಕೋಟಿ ಸಾಲವೇ ಇದೆ ಎಂದು ಹೇಳಿದ್ದಾರೆ.
ಇದರ ಜತೆಗೆ ತಮ್ಮ ಚುನಾವಣಾ ಎದುರಾಳಿಗಳ ವಿರುದ್ಧವೂ ವಾಗ್ದಾಳಿ ನಡೆಸಿರುವ ಸಿಧು, ‘ಪಂಜಾಬ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಪಂಜಾಬಿಗಳ ಸಾಮಾಜಿಕ ಆರ್ಥಿಕ ಸ್ಥಿತಿ ಪಂಜಾಬಿತನದೊಂದಿಗೆ ಬೆಸುಗೆ ಹೊಂದಿದೆ. ಬಿಜೆಪಿಯವರು ಬಾದಲ್‌ಗಳನ್ನು ಆಯ್ಕೆ ಮಾಡುತ್ತಾರೆ. ಸಿಧು ಪಂಜಾಬ್ ಅನ್ನು ಆಯ್ಕೆ ಮಾಡುತ್ತಾನೆ. ಸಿಧು ಈ ವರೆಗೆ ಆರು ಚುನಾವಣೆಗಳನ್ನು ಗೆದ್ದಿದ್ದಾನೆ’ ಎಂದು ತಮ್ಮ ಎಂದಿನ ಶೈಲಿಯಲ್ಲಿ ಮಾತಿನ ಮಾಲೆ ಪಟಾಕಿಗಳನ್ನು ಸಿಡಿಸಿದರು.
ಇದೇ ವೇಳೆ ಆಮ್ ಆದ್ಮೀ ಪಕ್ಷದ ವಿರುದ್ದವೂ ಸಿಧು ಮಾತಿನ ಬಾಣ ಬಿಟ್ಟಿದ್ದು, 18 ವರ್ಷ ಮೇಲ್ಪಟ್ಟವರಿಗೆ 1000 ರೂ. ಮಾಸಾಶನ ನೀಡುವ ಕೇಜ್ರಿವಾಲ್ ಅವರ ಯೋಜನೆ ಚುನಾವನಾ ಗಿಮಿಕ್ ಎಂದು ಅವರು ಕಿಡಿ ಕಾರಿದ್ದಾರೆ. ಯಾಕೆ 18 ವರ್ಷದವರಿಗೆ ಹಣ ಕೊಡುತ್ತಾರೆ. 17 ವರ್ಷದವರಿಗೆ ಹಣ ಕೊಟ್ಟರೆ ಏನಾಗುತ್ತದೆ? ಇದೆಲ್ಲಾ ಚುನಾವಣಾ ಗಿಮಿಕ್ ಎಂದು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ಪಕ್ಷದ ಪ್ರಮುಖರು ಅವರನ್ನು ಹೊಗಳಿದ್ದಕ್ಕೆ ಪ್ರತಿಕ್ರಿಯಿಸಿರುವ ಅವರು, ಅವರಿಗೆ ನನ್ನ ಬಗ್ಗೆ ಹೇಳಲು ಏನೂ ಇಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಲು ಏನಾದ್ರೂ ಇದ್ದಿದ್ದರೆ ಈ ವೇಳೆಗಾಗಲೇ ನನ್ನ ಹಿಂದೆ ಜಾರಿ ನಿರ್ದೇಶನಾಲಯವನ್ನು ಛೂ ಬಿಟ್ಟಿರುತ್ತಿದ್ದರು ಎಂದು ಹೇಳಿದ್ದಾರೆ.ಅ
Read more
[wpas_products keywords=”deal of the day sale today offer all”]