The New Indian Express
ಚೆನ್ನೈ: ನೊಲಂಬೂರ್ ಎಂಬಲ್ಲಿ 9 ವರ್ಷದ ಬಾಲಕಿ ಮೇಲೆ ಜರ್ಮನ್ ಶೆಫರ್ಡ್ ನಾಯಿಯೊಂದು ಪ್ರಾಣಾಂತಿಕ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಯಿಯ ಮಾಲಕಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಬೀದಿ ನಾಯಿಗಳ ಜೊತೆ ಹೋರಾಡಿ ತನ್ನ 3 ಮಕ್ಕಳನ್ನು ರಕ್ಷಿಸಿದ ಗರ್ಭಿಣಿ ಮಹಿಳೆ, ಇಬ್ಬರ ಸ್ಥಿತಿ ಗಂಭೀರ!
ಘಟನೆ ಡಿಸೆಂಬರ್ 28 ರಂದು ನಡೆದಿದ್ದು, ಬಾಲಕಿ ಪೋಷಕರು ಸೋಮವಾರ ದೂರು ದಾಖಲಿಸಿದ್ದಾರೆ. ದಾರಿಯಲ್ಲಿ ಸಾಗುತ್ತಿದ್ದ ವೇಳೆ ಬಾಲಕಿ ಸರಸ್ವತಿಯನ್ನು ನಾಯಿ ಅಟ್ಟಿಸಿಕೊಂಡು ಹೋಗಿತ್ತು. ಈ ಸಂದರ್ಭ ಬಾಲಕಿಯ ದೇಹದ 16 ಭಾಗಗಳಲ್ಲಿ ನಾಯಿ ಕಚ್ಚಿ ಘಾಸಿ ಮಾಡಿತ್ತು.
ಇದನ್ನೂ ಓದಿ: ಕೋತಿ ಮರಿ ಕೊಂದಿದ್ದಕ್ಕೆ ಪ್ರತಿಕಾರ: 250 ನಾಯಿ ಮರಿಗಳನ್ನು ಕೊಂದ ಕೋತಿಗಳು!
ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಬಾಲಕಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿದ್ದಾಳೆ. ಈ ಸಮಯದಲ್ಲಿ ಪೋಷಕರು ಪೊಲೀಸ್ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಆಕ್ರಮಣಕಾರಿ ನಾಯಿಗಳಿಗೆ ಕಬ್ಬನ್ ಪಾರ್ಕ್ ಪ್ರವೇಶ ನಿಷೇಧ; ತೋಟಗಾರಿಕಾ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಯಿಯ ಮಾಲಕಿ 43 ವರ್ಷದ ಮಹಿಳೆ ವಿಜಯಲಕ್ಷ್ಮಿ ಎಂಬುವವರನ್ನು ಬಂಧಿಸಿದ್ದಾರೆ. ನಾಯಿಯನ್ನು ಕಾರ್ಪೊರೇಷನ್ ಅಧಿಕಾರಿಯೋರ್ವರಿಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: ಬೀದಿನಾಯಿಗಳಿಗೆ ಆಹಾರ ಹಾಕಿದ ಮಹಿಳೆಗೆ 8 ಲಕ್ಷ ರೂ. ದಂಡ!
Read more
[wpas_products keywords=”deal of the day”]