Karnataka news paper

ಬುಲ್ಲಿ ಬಾಯ್’ ಪ್ರಕರಣದ ಆರೋಪಿಗೆ ಜ. 10 ರವರೆಗೆ ಪೊಲೀಸ್ ಕಸ್ಟಡಿ


PTI

ಮುಂಬೈ: ಬುಲ್ಲಿ ಬಾಯ್ ಪ್ರಕರಣದ ಆರೋಪಿ ವಿಶಾಲ್ ಕುಮಾರ್ ನನ್ನು ಜನವರಿ 10ರವರೆಗೆ ಪೊಲೀಸ್ ಕಸ್ಟಡಿಗೆ ಬಾಂದ್ರಾ ಕೋರ್ಟ್ ಮಂಗಳವಾರ ಒಪ್ಪಿಸಿದೆ.

ಇದನ್ನೂ ಓದಿ: ಬುಲ್ಲಿ ಬಾಯ್’ ಪ್ರಕರಣ: ಮುಂಬೈ ಪೊಲೀಸರಿಂದ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ, ಉತ್ತರಖಂಡದಲ್ಲಿ ಮಹಿಳೆ ಬಂಧನ
ಬುಲ್ಲಿ ಬಾಯ್ ಪ್ರಕರಣದಲ್ಲಿ 21 ವರ್ಷದ ಬೆಂಗಳೂರಿನ ಎಂಜಿನಿಯರ್ ವಿದ್ಯಾರ್ಥಿ ವಿಶಾಲ್ ಕುಮಾರ್ ನನ್ನು ಸೈಬರ್ ಪೊಲೀಸರು ಬಂಧಿಸಿದ್ದರು. ಬುಲ್ಲಿ ಬಾಯ್ ಆ್ಯಪ್ ಅಭಿವೃದ್ಧಿಪಡಿಸಿದವರು ಹಾಗೂ ಈ ಆ್ಯಪ್ ಪ್ರಚಾರ ಮಾಡುತ್ತಿರುವ ಟ್ವೀಟರ್ ಖಾತೆ ವಿರುದ್ಧ ಮುಂಬೈ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಅನುಮತಿ ಪಡೆಯದೆ ನೂರಾರು ಮುಸ್ಲಿಂ ಮಹಿಳೆಯರು ಹಾಗೂ  ವೈದ್ಯರ ಫೋಟೋಗಳನ್ನು ಆ್ಯಪ್ ನಲ್ಲಿ ಅಪ್ ಲೋಡ್ ಮಾಡಿ ಹರಾಜು ಹಾಕಲಾಗಿದೆ ಎಂಬ ಆರೋಪವಿದೆ. ಈ ವರ್ಷ  ಎರಡನೇ ಬಾರಿಗೆ ಈ ರೀತಿ ಮುಸ್ಲಿಂ ಮಹಿಳೆಯರ ವಿರುದ್ಧ  ಅವಹೇಳನಕಾರಿ ವಿಷಯ ಅಪ್ ಲೋಡ್ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. 



Read more

[wpas_products keywords=”deal of the day”]