The New Indian Express
ಭುವನೇಶ್ವರ: ಹೊಸ ವರ್ಷಕ್ಕೆ ಬಂಪರ್ ಉಡುಗೊರೆಯಾಗಿ ಒಡಿಶಾ ಸರ್ಕಾರ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳ ಕಿರಿಯ ಶಿಕ್ಷಕರ ವೇತನವನ್ನು ಶೇಕಡಾ 50 ರಷ್ಟು ಹೆಚ್ಚಿಸಲು ಸೋಮವಾರ ನಿರ್ಧರಿಸಿದೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ತೆಗೆದುಕೊಂಡ ಈ ನಿರ್ಧಾರವನ್ನು ಜನವರಿ 1, 2022 ರಿಂದ ಜಾರಿಗೆ ತರಲಾಗುವುದು ಮತ್ತು 33,038 ಕಿರಿಯ ಶಿಕ್ಷಕರು ಇದರ ಪ್ರಯೋಜ ಪಡೆಯಲಿದ್ದಾರೆ.
ಮುಖ್ಯಮಂತ್ರಿಗಳ ಕಚೇರಿ(CMO)ಯ ಪ್ರಕಾರ, 13,324 ಗುತ್ತಿಗೆ ಮತ್ತು 19,714 ಸರ್ಕಾರಿ ಶಿಕ್ಷಕರ ವೇತನವನ್ನು ಶೇ. 50 ರಷ್ಟು ಹೆಚ್ಚಿಸಲಾಗಿದೆ.
7,400 ಇದ್ದ ಗುತ್ತಿಗೆ ಕಿರಿಯ ಶಿಕ್ಷಕರ ವೇತನವನ್ನು 11,000 ರೂ.ಗೆ ಹೆಚ್ಚಿಸಲಾಗಿದೆ ಮತ್ತು 9,200 ರೂಪಾಯಿ ಇದ್ದ ಸರ್ಕಾರಿ ಕಿರಿಯ ಶಿಕ್ಷಕರ ವೇತನವನ್ನು 13,800 ರೂ.ಗೆ ಹೆಚ್ಚಿಸಲಾಗಿದೆ.
ಈ ವೇತನ ಹೆಚ್ಚಳದಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ 168 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ.
Read more
[wpas_products keywords=”deal of the day”]