ಹೈಲೈಟ್ಸ್:
- ಶ್ರೀ ಕೃಷ್ಣ ಪರಮಾತ್ಮ ದಿನಾಲೂ ಕನಸಲ್ಲಿ ಬಂದು ಈ ಬಾರಿ ನಿಮ್ಮದೇ ಸರ್ಕಾರ ಎಂದು ಹೇಳುತ್ತಾರೆ
- ಚೀನಾದವರು ನಮ್ಮ ಮುಖ್ಯಮಂತ್ರಿಯವರನ್ನು ನೋಡಿ ಹೆಸರು ಬದಲಾಯಿಸುವುದನ್ನು ಕಲಿತಿದ್ದಾರೆ
- ಯೋಗಿ ಆದಿತ್ಯಾಥ್ ವಿರುದ್ಧ ಅಖಿಲೇಶ್ ಯಾದವ್ ವ್ಯಂಗ್ಯ ಭರಿತ ಮಾತಿನ ಬಾಣ
– ಇದು ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ ಮಾತು.
ಆಡಳಿತರೂಢ ಬಿಜೆಪಿಯ ಬಹ್‌ರಿಚ್ ಕ್ಷೇತ್ರದ ಶಾಸಕ ಮಾಧುರಿ ವರ್ಮಾ ಅವರನ್ನು ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಮ ರಾಜ್ಯದ ಸ್ಥಾಪನೆಗೆ ಸಮಾಜವಾದವೇ ಹೆದ್ದಾರಿ. ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದಾಗ ಉತ್ತರ ಪ್ರದೇಶದಲ್ಲಿ ರಾಮ ರಾಜ್ಯ ಸ್ಥಾಪನೆಯಾಗಲಿದೆ’ ಎಂದು ಅವರು ಹೇಳಿದರು.
ಈ ವೇಳೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ರಾತ್ರಿ ನಮ್ಮ ಕನಸಲ್ಲೂ ಭಗವಾನ್ ಶ್ರೀ ಕೃಷ್ಣ ಬರುತ್ತಾರೆ. ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ. ಒಂದು ದಿನ ಮಾತ್ರವಲ್ಲ. ಪ್ರತೀ ದಿನ ಬಂದು, ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಾರೆ’ ಎಂದು ವ್ಯಂಗ್ಯದ ದಾಟಿಯಲ್ಲಿ ಹೇಳಿದರು.
ಇದೇ ವೇಳೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಅವರು, ಯೋಗಿ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಮುಖ್ಯಮಂತ್ರಿಯಾಗಿ ಯೋಗಿ ಅವರು ಕೂಡ ವಿಫಲರಾಗಿದ್ದಾರೆ ಎಂದು ಹೇಳಿದರು. ಅಲ್ಲದೇ ಫೇಲಾದ ವಿದ್ಯಾರ್ಥಿಗಳನ್ನು ಪಾಸು ಮಾಡಿಸಲು ಪೋಷಕರು ಹೆಣಗುವ ಹಾಗೆ, ಯೋಗಿಯನ್ನು ಪಾಸು ಮಾಡಲು ಬಿಜೆಪಿ ಹೆಣಗುತ್ತಿದೆ ಎಂದು ಕುಹಕವಾಡಿದರು.
ಇದೇ ವೇಳೆ ಅಪರಾಧ ಹಿನ್ನೆಲೆ ಇರುವವರು ಸಮಾಜವಾದಿ ಪಕ್ಷದಲ್ಲಿ ಇದ್ದಾರೆ ಎನ್ನುವ ಟೀಕೆಗೆ ಉತ್ತರಿಸಿರುವ ಅವರು, ‘ಹಲವು ಗಂಭೀರ ಕ್ರಿಮಿನಲ್ ಪ್ರಕರಣಗಳು ಇರುವವರನ್ನೇ ಬಿಜೆಪಿ ಸಿಎಂ ಮಾಡಿದೆ’ ಎಂದು ತಿರುಗೇಟು ನೀಡಿದರು.
ಅಲ್ಲದೇ ಬಿಜೆಪಿಯವರು ಹೊಸ ವಾಷಿಂಗ್ ಮಷೀನ್ ತಂದಿದ್ದು, ಇದರಲ್ಲಿ ಎಲ್ಲಾ ಕ್ರಿಮಿನಲ್‌ಗಳು ಹಾಗೂ ಮಾಫಿಯಾದವರನ್ನು ಶುದ್ಧಗೊಳಿಸಬಹುದು’ ಎಂದು ವ್ಯಂಗ್ಯ ಭರಿತರಾಗಿ ಹೇಳಿದ್ದಾರೆ.
ಬಿಜೆಪಿಯಲ್ಲಿ ಈ ಹಿಂದೆ ಹಲವು ಅನುಭವಿ ನಾಯಕರಿದ್ದರು. ಅವರು ತಮ್ಮ ರಕ್ತ ಹಾಗೂ ಬೆವರು ಹರಿಸಿ ಪಕ್ಷಕ್ಕೆ ದುಡಿದಿದ್ದಾರೆ. ಪಕ್ಷಕ್ಕಾಗಿ ದುಡಿದವರು ಇದ್ದಾರೆ. ಆದರೆ ಈ ಯೋಗಿ ಆದಿತ್ಯನಾಥ್ ಎಲ್ಲಿಂದ ಬಂದರೋ ಎನ್ನುವುದು ಗೊತ್ತಿಲ್ಲ ಎಂದು ತಮಾಷೆ ಮಾಡಿದರು.
ಇನ್ನು ಯೋಗಿ ಆದಿತ್ಯನಾಥ್ ಯಾವ ಕ್ಷೇತ್ರದಿಂದ ಬೇಕಾದರೂ ಸ್ಪರ್ಧೆ ಮಾಡಲಿ. ನಾನು ಅಲ್ಲಿಗೆ ತೆರಳಿ ಯೋಗಿ ಆದಿತ್ಯನಾಥ್ ಅವರ ವೈಫಲ್ಯಗಳನ್ನು ಬಿಚ್ಚಿಡುತ್ತೇನೆ. ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದು ಹೇಳಿದ ಸುಳ್ಳು ಭರವಸೆಯನ್ನು ಜನರ ಮುಂದೆ ಇಡುತ್ತೇನೆ ಎಂದು ಹೇಳಿದರು.
ಅಲ್ಲದೇ ಅರುಣಾಚಲದ ಹಳ್ಳಿಗಳ ಹೆಸರನ್ನು ಬದಲಿಸಿದ ಚೀನಾದ ನಿರ್ಧಾರದ ಬಗ್ಗೆ ಉತ್ತರಿಸಿದ ಅವರು, ಇದೆಲ್ಲಾ ನಮ್ಮ ಮುಖ್ಯಮಂತ್ರಿಗಳಿಂದ ಕಲಿತಿದ್ದು. ನಮ್ಮ ಮುಖ್ಯಮಂತ್ರಿಗಳು ಈ ಟ್ರೆಂಡ್ ಆರಂಭಿಸಿದರು, ಚೀನಾದವರೂ ಕೂಡ ಅದನ್ನು ಪಾಲಿಸಿದರು ಎಂದು ತಮಾಷೆ ಭರಿತರಾಗಿ ಮಾತನಾಡಿದ್ದಾರೆ.
Read more
[wpas_products keywords=”deal of the day sale today offer all”]