Karnataka news paper

ರಣಜಿ ಟ್ರೋಫಿ: ಟೂರ್ನಿ ಆರಂಭಕ್ಕೂ ಮುನ್ನ 6 ಆಟಗಾರರು, ಸಹಾಯಕ ಕೋಚ್‌ಗೆ ಕೊರೋನಾ; ಅಭ್ಯಾಸ ಪಂದ್ಯ ರದ್ದು


Online Desk

ಕೊಲ್ಕತಾ: ಕ್ರಿಕೆಟ್ ಆಸ್ಟ್ರೇಲಿಯಾದ ನಂತರ ಇದೀಗ ಭಾರತೀಯ ಕ್ರಿಕೆಟ್‌ಗೂ ಕೊರೋನಾ ಕಾಲಿಟ್ಟಿದೆ. ಜನವರಿ 13 ರಿಂದ ಪ್ರಾರಂಭವಾಗುವ ರಣಜಿ ಟ್ರೋಫಿಯಲ್ಲಿ, ಬಂಗಾಳ ತಂಡದ 6 ಆಟಗಾರರು ಮತ್ತು ಒಬ್ಬ ಸಹಾಯಕ ಕೋಚ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೋನಾ ಕಾರ್ಮೋಡದ ಹಿನ್ನೆಲೆಯಲ್ಲಿ ಬಿಸಿಸಿಐ ದೇಶೀಯ ಪಂದ್ಯಾವಳಿಯ ಆರಂಭಕ್ಕೂ ಮುನ್ನ ತುರ್ತು ಸಭೆ ನಡೆಸುವ ಸಾಧ್ಯತೆ ಇದೆ.

ಪ್ರಸ್ತುತ ಸಾಂಕ್ರಾಮಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಸುರಕ್ಷತಾ ಕ್ರಮವಾಗಿ ಎಲ್ಲಾ ಬಂಗಾಳ ಕ್ರಿಕೆಟಿಗರ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ ಎಂದು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಸ್ನೇಹಶಿಶ್ ಗಂಗೂಲಿ ಹೇಳಿದ್ದಾರೆ.

ಇದನ್ನು ಓದಿ: ವಿರಾಟ್‌ ಕೊಹ್ಲಿ ಮಾಧ್ಯಮಗಳ ಮುಂದೆ ಏಕೆ ಬರುತ್ತಿಲ್ಲ?: ರಾಹುಲ್ ದ್ರಾವಿಡ್‌ ಕೊಟ್ಟ ಉತ್ತರ ಹೀಗಿದೆ…

ಮೂಲಗಳ ಪ್ರಕಾರ ಸುದೀಪ್ ಚಟರ್ಜಿ, ಅನುಸ್ತುಪ್ ಮಜುಂದಾರ್, ಖಾಜಿ ಜುನೈದ್ ಸೈಫಿ, ಗೀತ್ ಪುರಿ, ಪ್ರದೀಪ್ತ ಪ್ರಮಾಣಿಕ್, ಸುರ್ಜೀತ್ ಯಾದವ್ ಗೆ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಅವರ ಜೊತೆಗಿದ್ದ ಸಹಾಯಕ ಕೋಚ್ ಸೌರಾಶಿಶ್ ಲಾಹಿರಿ ಕೂಡ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಈ ಏಳು ಸದಸ್ಯರು ಭಾನುವಾರ ಸಾಲ್ಟ್ ಲೇಕ್‌ನಲ್ಲಿರುವ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಆಡಿದ್ದ ಪಂದ್ಯದಲ್ಲಿ ಭಾಗಿಯಾಗಿದ್ದರು. ಆದರೆ, ಈ ಪಂದ್ಯಕ್ಕೆ ಸಂಬಂಧಿಸಿದಂತೆ ಬಂಗಾಳ ಕ್ರಿಕೆಟ್ ಮಂಡಳಿ ಯಾವುದೇ ಹೇಳಿಕೆ ನೀಡಿಲ್ಲ.

ಮುಂಬೈ ವಿರುದ್ಧದ ಅಭ್ಯಾಸ ಪಂದ್ಯ ರದ್ದು
ಕೊರೋನಾ ಪ್ರಕರಣದ ನಂತರ, ಬಂಗಾಳ ಮತ್ತು ಮುಂಬೈ ತಂಡದ ನಡುವಿನ ಅಭ್ಯಾಸ ಪಂದ್ಯವನ್ನು ಸಹ ರದ್ದುಗೊಳಿಸಲಾಗಿದೆ. ಎರಡನೇ ಅಭ್ಯಾಸ ಪಂದ್ಯದಲ್ಲಿ ಬೆಂಗಾಲ್ ಟೀಮ್ ಪಾಲ್ಗೊಳ್ಳುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. 
ಬಂಗಾಳ ಕ್ರಿಕೆಟ್ ಕೂಡ ಎಲ್ಲಾ ಸ್ಥಳೀಯ ಪಂದ್ಯಾವಳಿಗಳನ್ನು ನಿಲ್ಲಿಸಲು ನಿರ್ಧರಿಸಿದೆ. ಅದೇ ಸಮಯದಲ್ಲಿ, ಕೊರೋನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಂಗಳವಾರ ಅಪೆಕ್ಸ್ ಕೌನ್ಸಿಲ್‌ನ ತುರ್ತು ಸಭೆಯನ್ನು ಕರೆಯಲಾಗಿದೆ.



Read more…

[wpas_products keywords=”deal of the day sports items”]