Karnataka news paper

‘ಸ್ವೀಟ್ ಹೋಮ್’ ಎಂದು ಹೊಸ ಅಪಾರ್ಟ್‌ಮೆಂಟ್‌ಗೆ ಅಡಿಯಿಟ್ಟ ಕತ್ರಿನಾ– ವಿಕ್ಕಿ ದಂಪತಿ


ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್‌ ಹಾಗೂ ವಿಕ್ಕಿ ಕೌಶಲ್ ದಂಪತಿ ಮುಂಬೈನ ಜುಹೂ ಬೀಚ್ ಬಳಿಯ ಹೊಸ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಾರೆ.

ಗೃಹ ಪ್ರವೇಶ ಮಾಡಿರುವ ಖುಷಿಯಲ್ಲಿರುವ ಕತ್ರಿನಾ, ಸಂಭ್ರಮದ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ‘ಹೋಮ್ ಸ್ವೀಟ್ ಹೋಮ್’ ಎಂದು ಬರೆದುಕೊಂಡಿದ್ದಾರೆ. ಈ ಫೋಟೊಗಳನ್ನು ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಪ್ರಸ್ತುತ ಬಾಲಿವುಡ್ ತಾರಾ ಜೋಡಿಗಳಲ್ಲಿ ಅಭಿಮಾನಿಗಳ ನೆಚ್ಚಿನ ಜೋಡಿ ಎಂದರೆ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಎಂಬುದರಲ್ಲಿ ಎರಡು ಮಾತಿಲ್ಲ. ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಹೊಸ ವರ್ಷಾಚರಣೆಯನ್ನು ಮುಂಬೈನಲ್ಲೇ ಆಚರಿಸಿದ್ದ ಈ ಜೋಡಿ. ಹೊಸ ಅಪಾರ್ಟ್‌ಮೆಂಟ್‌ ಪ್ರವೇಶಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಸ ಮನೆಯನ್ನು ಗಿಡಗಳಿಂದ ಅಲಂಕರಿಸಲಾಗಿದೆ.

ಖ್ಯಾತ ನಿರ್ದೇಶಕ ಶ್ರೀರಾಮ್ ರಾಘವನ್ ಆಕ್ಷನ್ ಕಟ್ ಹೇಳುತ್ತಿರುವ ‘ಮೆರ್ರಿ ಕ್ರಿಸ್ಮಸ್’ ಚಿತ್ರದಲ್ಲಿ ಬ್ಯುಸಿ ಆಗಿರುವ ಕತ್ರಿನಾ, ವಿಜಯ್ ಸೇತುಪತಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ, ಕತ್ರಿನಾ ‘ಟೈಗರ್ 3’ ಚಿತ್ರದಲ್ಲಿ ಸಲ್ಮಾನ್ ಜತೆ ಬಣ್ಣಹಚ್ಚುತ್ತಿದ್ದಾರೆ.

ಇತ್ತ ವಿಕ್ಕಿ ಕೌಶಲ್, ‘ಸ್ಯಾಮ್ ಬಹದ್ದೂರ್’, ‘ಗೋವಿಂದ ನಾಮ್ ಮೇರಾ’ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ.

ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಇದರ ಹತ್ತಿರವೇ ಇರುವ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ ಅನ್ನು ಕತ್ರೀನಾ–ವಿಕ್ಕಿ ಜೋಡಿ ಖರೀದಿಸಿದ್ದಾರೆ. 





    Read More…Source link

    [wpas_products keywords=”deal of the day party wear for men wedding shirt”]