Karnataka news paper

ಸಿನಿಮಾಸ್ಕೋಪ್ 2022: ಆಶಾದಾಯಕ ವರ್ಷದ ನಿರೀಕ್ಷೆಯಲ್ಲಿ ಸ್ಯಾಂಡಲ್ ವುಡ್!


The New Indian Express

2021ರಲ್ಲಿ ಕೆಲವೊಂದು ಚಿತ್ರಗಳು ಬಿಡುಗಡೆಯಾಗುವುದರೊಂದಿಗೆ ಕೊರೋನಾದಿಂದ ಬಳಲಿದ್ದ ಕನ್ನಡ ಚಿತ್ರರಂಗಕ್ಕೆ ಸ್ಪಲ್ಪ ನಿರಾಳತೆ ಮೂಡಿಸಿದ್ದವು. ರಾಬರ್ಟ್, ಪೊಗರು, ಯುವರತ್ನ, ಕೋಟಿಗೊಬ್ಬ 3, ಸಲಗ, ಭಜರಂಗಿ-2, ಗರುಡ ಗಮನಾ ವೃಷಭ ವಾಹನ ಮತ್ತು ಬಡವ ರಾಸ್ಕಲ್ ಸಿನಿಮಾಗಳು ಸಿನಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. ಈ ವರ್ಷ ಕೊರೋನಾ ಮೂರನೇ ಅಲೆ ಭೀತಿಯ ನಡುವೆ ಹಲವು ಸಿನಿಮಾಗಳು ತೆರೆಗೆ ಬರಲು ಸಜ್ಜುಗೊಂಡಿವೆ. 

2011ರಲ್ಲಿ ತಯಾರಾಗಿದ್ದ ಕೆಲ ಚಿತ್ರಗಳು ಸೇರಿದಂತೆ ಇತರ ಭಾಷೆಗಳ ಸಿನಿಮಾಗಳು ಜನವರಿ ಮೊದಲ ಕೆಲ ವಾರಗಳಲ್ಲಿ ಬಿಡುಗಡೆಯಾಗುತ್ತಿವೆ. ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಜನವರಿ 21 ರಂದು ತೆರೆಗೆ ಬರಲು ಸಜ್ಜಾಗುತ್ತಿದೆ. ಲವ್ ಮಾಕ್ಟೇಲ್ -2 ಹಾಗೂ ಓಲ್ಡ್ ಮಾಂಕ್ ಜನವರಿ 11 ರಂದು ರಿಲೀಸ್ ಆಗಲಿದೆ. ಅನೂಪ್ ಭಂಡಾರಿ ನಿರ್ದೇಶನದ ಸುದೀಪ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್ ರೋಣ’ ಫೆಬ್ರವರಿ 24 ರಂದು ಏಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. 

ಈ ವರ್ಷದ ಬಹುನಿರೀಕ್ಷಿತ ಮತ್ತೊಂದು ಚಿತ್ರ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಾಂಕ್ರಾಮಿಕ ಕಾರಣದಿಂದ ಕೆಲವು ದಿನ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಕೆಜಿಎಫ್ ಚಾಪ್ಟರ್ 1 ಸಿಕ್ವೇಲ್ ಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಬಾಲಿವುಡ್ ನಟ ಸಂಜಯ್ ದತ್ , ರವೀನಾ ಟಂಡನ್ ಮತ್ತಿತರರು ಅಭಿನಯಿಸಿದ್ದಾರೆ. ಇದು ಏಪ್ರಿಲ್ 14 ರಂದು ಬಿಡುಗಡೆಗೆ ಸಜ್ಜಾಗಿದೆ. 

ಇದನ್ನೂ ಓದಿ: ಮತ್ತೆ ವಿಲನ್ ಆದ ದುನಿಯಾ ವಿಜಯ್, ತೆಲುಗಿಗೆ `ಬ್ಲಾಕ್​ ಕೋಬ್ರಾ’ ಎಂಟ್ರಿ

ದಿವಂಗತ ಪುನೀತ್ ರಾಜ್ ಕುಮಾರ್ ಅಭಿನಯದ, ಜೆಎಸ್ ಅಮೋಘ ವರ್ಷ ನಿರ್ದೇಶನದ ‘ಗಂಧದ ಗುಡಿ’ ಕೂಡಾ ಈ ವರ್ಷವೇ ತರೆಗೆ ಬರಲಿದೆ.  ಇದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರವಾಗಿದ್ದು, ಲಕ್ಷಾಂತರ ಅಭಿಮಾನಿಗಳು ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ.  ಪುನೀತ್ ಅಭಿನಯದ ಜೇಮ್ಸ್ ಚಿತ್ರ ಕೂಡಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಅವರ ಜನ್ಮ ದಿನವಾದ ಮಾರ್ಚ್ 17 ರಂದು  ತೆರೆಗೆ ಬರುವ ನಿರೀಕ್ಷೆಯಿದೆ. ಸುನಿ- ಶರಣ್ ಕಾಂಬಿನೇಷನ್ ನ ಅವತಾರ ಪುರುಷ ಕೂಡಾ ಈ ವರ್ಷವೇ ಬಿಡುಗಡೆಯಾಗುತ್ತಿದೆ. 

ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಬಿಡುಗಡೆ ದಿನಾಂಕವನ್ನು ಘೋಷಿಸಬೇಕಾಗಿದೆ. ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ಎಂ ರಾವ್ ಅವರ ಸಪ್ತಸಾಗರದಾಚೆ ಯೆಲ್ಲೋ ಕೂಡಾ ಈ ವರ್ಷವೇ ರಿಲೀಸ್ ಆಗಲಿದೆ.  ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿ. ಹರಿಕೃಷ್ಣ ಕಾಂಬಿನೇಷನ್ ನ ಪ್ಯಾನ್ ಇಂಡಿಯಾ ಸಿನಿಮಾ ‘ಕ್ರಾಂತಿ’ ಚಿತ್ರೀಕರಣ ಭರದಿಂದ ಸಾಗಿದೆ. ಶಿವಣ್ಣ ಸ್ವಂತ ಬ್ಯಾನರ್ ನಲ್ಲಿ ಅಭಿನಯಿಸುತ್ತಿರುವ ‘ವೇದ’  ಆರ್ ಚಂದ್ರು ನಿರ್ದೇಶನದ ಉಪೇಂದ್ರ ಹಾಗೂ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಬ್ಜಾ ಅನೇಕ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 

ಬಡವ ರಾಸ್ಕಲ್ ಚಿತ್ರ ನಿರ್ಮಾಣದೊದಿಗೆ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಲಾಭ ಕಂಡುಕೊಂಡಿರುವ ಡಾಲಿ ಧನಂಜಯ್ ಅಭಿಯನದ ಹೆಡ್ ಬುಷ್,  ಧ್ರುವ ಸರ್ಜಾ ಮತ್ತು ಪ್ರೇಮ್ ನಿರ್ದೇಶನದ ಚಿತ್ರವೊಂದು ಈ ವರ್ಷವೇ ತೆರೆಗೆ ಬರುತ್ತಿದೆ. ಅದಲ್ಲದೇ, ಯೋಗರಾಜ್ ಭಟ್ ಗಣೇಶ್ ಕಾಂಬಿನೇಷನ್ ನಲ್ಲಿ ಗಾಳಿಪಟ-2 ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್, ರಿಷಭ್ ಶೆಟ್ಟಿ ನಿರ್ದೇಶನದ ಕಾಂತಾರ, ಶ್ರಿಮುರುಳಿಯ ಭಗೀರಾ ಮತ್ತಿತರ ಚಿತ್ರಗಳು ಈ ವರ್ಷವೇ ಬಿಡುಗಡೆ ಮಾಡುವ ಉದ್ದೇಶ ಹೊಂದಲಾಗಿದೆ. ಧೀರನ್ ರಾಮ್ ಕುಮಾರ್ ಅವರ ಶಿವ 143 ಮತ್ತು ಯುವರಾಜ್ ಕುಮಾರ್ ಅವರ ಯುವ ರಣದೀರ ಕಂಠೀರವ ಚಿತ್ರೀಕರಣ ಈ ವರ್ಷ ನಡೆಯಲಿದೆ.



Read more…

[wpas_products keywords=”party wear dress for women stylish indian”]